ಬೆಳಗ್ಗಿನ ಉಪಾಹಾರವೇ ಆಗಲಿ, ಸಂಜೆಯ ಸ್ನ್ಯಾಕ್ಸ್ ಆಗಲಿ. ಹಸಿವು ಎನಿಸಿದಾಗ ಫಟಾಫಟ್ ಅಂತ ಮಾಡಲು ನೆನಪಿಗೆ ಬರುವ ತಿಂಡಿ ಸ್ಯಾಂಡ್‌ವಿಚ್. ಆದರೆ ಬ್ರೆಡ್ ಇಲ್ಲದೇ ಸ್ಯಾಂಡ್‌ವಿಚ್ ಮಾಡೋದು ಹೇಗೆ ಎಂದು ನೀವು ಚಿಂತಿಸುತ್ತಿದ್ದರೆ, ನಾವಿದಕ್ಕೆ ಒಂದು ಪರಿಹಾರ ಹೇಳಿಕೊಡುತ್ತೇವೆ. ಬ್ರೆಡ್ ಇಲ್ಲದೇ ಆಲೂ ಚಿಲ್ಲಾ ಸ್ಯಾಂಡ್‌ವಿಚ್ (Aloo Chilla Sandwich) ಮಾಡೋದು ಹೇಗೆ ಎಂಬುದನ್ನು ನೀವು ಕೂಡಾ ಕಲಿತುಕೊಳ್ಳಿ.
Advertisement
ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ – 3
ಕಡಲೆ ಹಿಟ್ಟು – 2 ಕಪ್
ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್
ಓಂಕಾಳು – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಅರಿಶಿನ – 2 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಜೀರಿಗೆ ಪುಡಿ – 1 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಎಣ್ಣೆ – 2 ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: 5 ನಿಮಿಷದಲ್ಲಿ ಮಾಡಿ ಗರಿಗರಿಯಾದ ಈರುಳ್ಳಿ ಕಟ್ಲೆಟ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿಕೊಂಡು, ಸಿಪ್ಪೆ ಸುಲಿದು, ಮ್ಯಾಶ್ ಮಾಡಿಟ್ಟುಕೊಳ್ಳಿ.
* ಒಂದು ದೊಡ್ಡ ಬೌಲ್‌ಗೆ ಬೇಯಿಸಿದ ಆಲೂಗಡ್ಡೆ, ಉಪ್ಪು, ಅರಿಶಿನ, ಕೆಂಪು ಮೆಣಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಇನ್ನೊಂದು ಬೌಲ್ ತೆಗೆದುಕೊಂಡು, ಅದರಲ್ಲಿ ಕಡಲೆ ಹಿಟ್ಟು, ಓಂಕಾಳು, 1 ಟೀಸ್ಪೂನ್ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ.
* ಇದಕ್ಕೆ ಪಕೋಡಾ ಮಾಡಲು ಬ್ಯಾಟರ್ ತಯಾರಿಸುವ ಸ್ಥಿರತೆ ಆಗುವಷ್ಟು ಅಗತ್ಯವಿದ್ದಂತೆ ನೀರು ಸೇರಿಸುತ್ತಾ ಕಲಸಿಕೊಳ್ಳಿ.
* ಈಗ ಪ್ಯಾನ್‌ಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಒಂದು ಸೌಟಿನಷ್ಟು ಕಡಲೆ ಹಿಟ್ಟಿನ ಮಿಶ್ರಣವನ್ನು ಸುರಿದು ದಪ್ಪಗಿನ ದೋಸೆಯಂತೆ ಹರಡಿಕೊಳ್ಳಿ.
* ಹಿಟ್ಟಿನ ಕೆಳಭಾಗವನ್ನು ಚೆನ್ನಾಗಿ ಬೇಯಲು ಬಿಡಿ. ಬಳಿಕ ಅದನ್ನು ತಿರುವಿ ಹಾಕಿ.
* ಈಗ ಹಿಟ್ಟಿನ ಅರ್ಧ ಭಾಗಕ್ಕೆ ಆಲೂಗಡ್ಡೆಯ ಮಿಶ್ರಣವನ್ನು ಹಾಕಿ, ಸೌಟಿನಿಂದ ಒತ್ತಿಕೊಳ್ಳಿ. ಬಳಿಕ ದೋಸೆಯ ಅರ್ಧಕ್ಕೆ ಮಡಚಿಕೊಂಡು ಸೌಟಿನಿಂದ ಒತ್ತಿ.
* ಸ್ಯಾಂಡ್‌ವಿಚ್ ಎರಡೂ ಬದಿಯಲ್ಲಿ ಬೆಂದ ಬಳಿಕ ಅದನ್ನು ತವಾದಿಂದ ತೆಗೆಯಿರಿ. ಉಳಿದ ಹಿಟ್ಟನ್ನೂ ಇದೇ ರೀತಿ ಮಾಡುವುದನ್ನು ಮುಂದುವರಿಸಿ.
* ಇದೀಗ ಆಲೂ ಚಿಲ್ಲಾ ಸ್ಯಾಂಡ್‌ವಿಚ್ ತಯಾರಾಗಿದ್ದು, ಇದನ್ನು ಹಸಿರು ಚಟ್ನಿ ಹಾಗೂ ಟೊಮೆಟೊ ಸಾಸ್‌ನೊಂದಿಗೆ ಸವಿಯಿರಿ. ಇದನ್ನೂ ಓದಿ: ರುಚಿಕರ, ಆರೋಗ್ಯಕರ – ಸೋಯಾಬೀನ್ ದೋಸೆ ಮಾಡಿ