ನವದೆಹಲಿ: ಜನವರಿ ಅಂತ್ಯದ ವೇಳೆ ದೆಹಲಿಯಲ್ಲಿ ನಿತ್ಯ 60 ಸಾವಿರ ಪ್ರಕರಣಗಳು ಪತ್ತೆಯಾಗಲಿದೆ ಎಂದು ತಜ್ಞರು ದೆಹಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕೋವಿಡ್ ಹರಡುತ್ತಿರುವ ವೇಗದ ಆಧಾರದ ಮೇಲೆ ಅಧ್ಯಯನ ನಡೆಸಿರುವ ಅವರು ಜನವರಿ ಅಂತ್ಯಕ್ಕೆ ಭಾರೀ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗುವ ಸುಳಿವು ನೀಡಿದ್ದಾರೆ.
ದೆಹಲಿಯಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ವಿನಾಯಿತಿ ಹೊರೆತಾದ ಎಲ್ಲ ಖಾಸಗಿ ಕಚೇರಿಗಳನ್ನು ಬಂದ್ ಮಾಡಿದ್ದು, ಮನೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಿದೆ. ಅಲ್ಲದೇ ಬಾರ್ ರೆಸ್ಟೋರೆಂಟ್‍ಗಳು ಬಂದ್ ಆಗಿದ್ದು, ಪಾರ್ಸಲ್‍ಗೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್‌ಗೆ ಕೊರೊನಾ – ಐಸಿಯುವಿನಲ್ಲಿ ಚಿಕಿತ್ಸೆ
Advertisement
Advertisement
ಸದ್ಯ ದೆಹಲಿಯಲ್ಲಿ ನಿತ್ಯ ಸರಿ ಸುಮಾರು 20 ಸಾವಿರ ಪ್ರಕಣಗಳು ಪತ್ತೆಯಾಗುತ್ತಿದ್ದರೂ ಆಸ್ಪತ್ರೆ ದಾಖಲಾಗುವವರ ಪ್ರಮಾಣ ಮಾತ್ರ ಕಡಿಮೆ ಇದೆ. ಈವರೆಗೂ ಕೇವಲ ಶೇ.15 ರಷ್ಟು ರೋಗಿಗಳು ಮಾತ್ರ ಆಸ್ಪತ್ರೆ ದಾಖಲಾಗುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ. ಸೋಂಕಿತರೆಲ್ಲರಿಗೂ ಸಣ್ಣ ಪ್ರಮಾಣ ಲಕ್ಷಣಗಳು ಕಂಡು ಬಂದಿದ್ದು, ಹೋಂ ಐಸೂಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಪ್ರಮಾಣ ಹೆಚ್ಚಾಗುತ್ತಿದೆ: ಡಾ. ಪ್ರಸಾದ್
Advertisement
Special Yoga/pranayam classes to be brought in by Delhi govt for COVID positive patients in home isolation. Yoga boosts immunity. We will send them a link today and classes to begin from tomorrow in different batches: Delhi CM Arvind Kejriwal pic.twitter.com/G7p27lRnAa
— ANI (@ANI) January 11, 2022
Advertisement
ಹೀಗೆ ಹೋಂ ಐಸೂಲೇಷನ್‍ನಲ್ಲಿರುವ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯೋಗ ಮತ್ತು ಪ್ರಾಣಾಯಾಮ ಕೋರ್ಸ್‍ಗಳನ್ನು ಶುರು ಮಾಡಿದೆ. ಆನ್‍ಲೈನ್ ಮೂಲಕ ತರಗತಿಗಳು ನಡೆಯಲಿದ್ದು, ಪ್ರತಿ ದಿನ ಎಂಟು ತರಗತಿಗಳು ನಡೆಯಲಿದ್ದು, ಪ್ರತಿ ತರಗತಿಯಲ್ಲಿ 15 ಮಂದಿ ರೋಗಿಗಳು ಇರಲಿದ್ದಾರೆ. ಒಂದು ವಾರಗಳ ಕಾಲ ತರಬೇತಿ ನೀಡಲಿದ್ದು ಬುಧವಾರದಿಂದ ತರಗತಿಗಳು ಶುರುವಾಗಲಿದೆ. ಇದನ್ನೂ ಓದಿ: ಕಾಫಿನಾಡಿನ ಎರಡು ವಸತಿ ಶಾಲೆಯ 55 ಮಕ್ಕಳಿಗೆ ಕೊರೊನಾ