ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಹೊರತಾಗಿಯೂ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ಗಾಳಿ ಮುಣಮಟ್ಟ ತೀವ್ರ ಕಳಪೆ (Air Pollution) ಮಟ್ಟಕ್ಕೆ ತಲುಪಿದೆ. ಶನಿವಾರ (ನವೆಂಬರ್ 4) ದೆಹಲಿಯ ಹಲವು ವಿಭಾಗಗಳಲ್ಲಿ ಗಾಳಿಯ ಮುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ತಲುಪಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ತಿಳಿಸಿದೆ.
ಮಾಹಿತಿ ಪ್ರಕಾರ, ಇಲ್ಲಿನ ಆನಂದ್ ವಿಹಾರ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 448, ಜಹಾಂಗೀರ್‌ಪುರಿಯಲ್ಲಿ 421, ದ್ವಾರಕಾದಲ್ಲಿ 435 ಮತ್ತು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (T3) 421 ರಷ್ಟಿದ್ದು, ಸ್ಥಳೀಯ ನಿವಾಸಿಗಳಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಇದನ್ನೂ ಓದಿ: ಮುಂದಿನ 23 ದಿನ ತಮಿಳುನಾಡಿಗೆ ನಿತ್ಯ 2,600 ಕ್ಯೂಸೆಕ್ ನೀರು ಬಿಡಲು ಕರ್ನಾಟಕಕ್ಕೆ ಆದೇಶ
ಸಾಮಾನ್ಯವಾಗಿ ಶೂನ್ಯ ಮತ್ತು 50ರ ನಡುವಿನ ವಾಯು ಗುಣಮಟ್ಟ ಸೂಚ್ಯಂಕವನ್ನು ಉತ್ತಮ, 51 – 100 ತೃಪ್ತಿದಾಯಕ, 101 ಮತ್ತು 200 ಮಧ್ಯಮ, 201 ಮತ್ತು 300 ಕಳಪೆ, 301 ಮತ್ತು 400 ಅತ್ಯಂತ ಕಳಪೆ ಮತ್ತು 401 ಮತ್ತು 500 ತೀವ್ರ ಎಂದು ಪರಿಗಣಿಸಲಾಗುತ್ತದೆ. 500 ಮೀರಿದ ಯಾವುದಾದರೂ ಅದಕ್ಕೂ ಹೆಚ್ಚಿನ ವರ್ಗದ ಅಡಿಯಲ್ಲಿ ಬರುತ್ತದೆ. ಇದನ್ನೂ ಓದಿ: Nepal Earthquake: ಭೀಕರ ಭೂಕಂಪನಕ್ಕೆ ಬೆಚ್ಚಿಬಿದ್ದ ನೇಪಾಳ- 70 ಮಂದಿ ದುರ್ಮರಣ
ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯು ಗುಣಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನಿಖರ ಕಾರಣ ಪತ್ತೆಹಚ್ಚಲು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ 1,119 ಅಧಿಕಾರಿಗಳನ್ನು ಒಳಗೊಂಡ 517 ತಂಡಗಳನ್ನ ರಚಿಸಿದೆ. ಈ ತಂಡದ ಮೂಲಕ ಚಳಿಗಾಲದ ಕ್ರಿಯಾಯೋಜನೆ ಅಡಿಯಲ್ಲಿ ತೆರೆದ ಪ್ರದೇಶದಲ್ಲಿ ವಸ್ತುಗಳ ಸುಡುವಿಕೆ, ಅನಗತ್ಯ ತ್ಯಾಜ್ಯ ಮತ್ತು ಇತರೇ ಕಾರಣಗಳಿಂದ ಉಂಟಾಗುತ್ತಿರುವ ಧೂಳನ್ನು ಪರಿಶೀಲಿಸಲು ಈ ತಂಡವನ್ನು ನಿಯೋಜಿಸಿದೆ. ಇದರೊಂದಿಗೆ ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಹೊರಡಿಸಿರುವ ಪರಿಷ್ಕೃತ ಗ್ರಾಪಂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ವಲಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದನ್ನೂ ಓದಿ: ವಿವಾಹಿತೆಯರಿಗೆ ವರ್ಷಕ್ಕೆ 12,000 ರೂ. ನೀಡುತ್ತೇವೆ: ‘ಮೋದಿ ಕಿ ಗ್ಯಾರಂಟಿ’ ಘೋಷಿಸಿದ ಅಮಿತ್ ಶಾ
ಶುಕ್ರವಾರವೂ ಸಹ ದೆಹಲಿಯಲ್ಲಿ ತೀವ್ರ ಕಳಪೆ ಗುಣಮಟ್ಟ ದಾಖಲಾಗಿದೆ. ಹವಾಮಾನ ಸಂಸ್ಥೆ aqicn.org ಪ್ರಕಾರ ದೆಹಲಿಯ ಆನಂದ್ ವಿಹಾರ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 999 ರಷ್ಟಿದ್ದು, ಹಲವು ಪ್ರದೇಶಗಳಲ್ಲಿ 500 ಅನ್ನು ದಾಟಿದೆ. SAFAR ಡೇಟಾ ಪ್ರಕಾರ ನಗರದ ವಾಯು ಗುಣಮಟ್ಟ ಸೂಚ್ಯಂಕ 351 ದಾಖಲಾಗಿತ್ತು. 24-ಗಂಟೆಗಳ ಸರಾಸರಿ ಎಕ್ಯುಐ ಬುಧವಾರ 364, ಮಂಗಳವಾರ 359, ಸೋಮವಾರ 347, ಭಾನುವಾರ 325, ಶನಿವಾರ 304, ಮತ್ತು ಶುಕ್ರವಾರ 261 ರಷ್ಟಿತ್ತು. ಆದ್ರೆ ಶನಿವಾರ ವಿವಿಧ ನಗರಗಳಲ್ಲಿ 400ಕ್ಕೂ ಹೆಚ್ಚು ಕಳಪೆ ಮಟ್ಟ ದಾಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ತಜ್ಷರು ಹೇಳಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]