ನವದೆಹಲಿ: ಚಳಿಗಾಲ ಆರಂಭಕ್ಕೂ ಮುನ್ನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಗಾಳಿಯ ಗುಣಮಟ್ಟ (Air Quality) ತೀವ್ರ ಪ್ರಮಾಣದಲ್ಲಿ ಕುಸಿಯಲು ಆರಂಭಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ವಾಯು ಗುಣಮಟ್ಟ ಸೂಚ್ಯಂಕದಲ್ಲಿ (Air Quality Index) 224 ದಾಖಲಾಗಿದೆ.
ಕಳೆದ ಗುರುವಾರದಿಂದ ವಾತಾವರಣದಲ್ಲಿ ತಾಪಮಾನ ಕುಸಿತ ಕಂಡು ಬಂದಿದೆ. ತಾಪಮಾನ 15.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಕಳೆದ ವರ್ಷಕ್ಕಿಂತ ಮೂರು ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ದಾಂಡಿಯಾ ಹೆಸರಲ್ಲಿ ಡ್ರಗ್ಸ್ ಪಾರ್ಟಿನಾ? – ಮಂಗಳೂರಿನಲ್ಲಿ VHP ವಿರೋಧ
Advertisement
ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ಕೇಂದ್ರದೊಂದಿಗೆ ರಾಜ್ಯಗಳ ಜಂಟಿ ಸಭೆಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ದೆಹಲಿಯಲ್ಲಿ ಪಟಾಕಿ ಹಾಗೂ ಎನ್‍ಸಿಆರ್ ಭಾಗದಲ್ಲಿ ಡಿಸೆಲ್ ಬಸ್‍ಗಳ ಸಂಚಾರ ರದ್ದು ಮಾಡಲು ಕೇಂದ್ರ ಪರಿಸರ ಸಚಿವಾಲಯವನ್ನು ಒತ್ತಾಯಿಲಾಗಿದೆ. ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್‍ಮೆಂಟ್ ವರದಿಯಲ್ಲಿ, ದೆಹಲಿಯ ಮಾಲಿನ್ಯದ 31% ರಾಷ್ಟ್ರ ರಾಜಧಾನಿಯೊಳಗಿನ ಮೂಲಗಳಿಂದ ಹುಟ್ಟಿಕೊಂಡರೆ, 69% ಎನ್‍ಸಿಆರ್ ರಾಜ್ಯಗಳ ಮೂಲಗಳಿಂದ ಬರುತ್ತಿದೆ ಎಂದು ಉಲ್ಲೇಖಿಸಲಾಗಿದೆ.
Advertisement
Advertisement
ಈ ತಿಂಗಳ ಆರಂಭದಲ್ಲಿ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಯನವು ಟಾಪ್ 10 ಅತ್ಯಂತ ಕಲುಷಿತ ನಗರಗಳನ್ನು ಬಹಿರಂಗಪಡಿಸಿತ್ತು. ದೆಹಲಿಯು ಭಾರತದಲ್ಲಿ ಅತ್ಯಂತ ಕಲುಷಿತ ನಗರವಾಗಿದೆ. ಎನ್‍ಸಿಆರ್‍ನ ದೆಹಲಿ, ಫರಿದಾಬಾದ್, ಗಾಜಿಯಾಬಾದ್, ನೊಯ್ಡಾ ಮತ್ತು ಮೀರತ್ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳನ್ನು ಪಡೆದುಕೊಂಡಿವೆ. ನಂತರದ ಸ್ಥಾನಗಳನ್ನು ಬಿಹಾರದ ಪಾಟ್ನಾ ಮತ್ತು ಮುಜಾಫರ್‍ಪುರವು ಪಡೆದುಕೊಂಡಿವೆ.
Advertisement
ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ, 0 ಮತ್ತು 50ರ ನಡುವಿನ ಗಾಳಿಯ ಗುಣಮಟ್ಟ ಪರಿಶೀಲನೆಯನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. 51 ಮತ್ತು 100 ತೃಪ್ತಿದಾಯಕ, 101 ಮತ್ತು 200 ಮಧ್ಯಮ, 201 ಮತ್ತು 300 ಕಳಪೆ, 301 ಮತ್ತು 400 ಅತ್ಯಂತ ಕಳಪೆ ಮತ್ತು 401 ಮತ್ತು 450 ಮೀರಿದಾಗ ತೀವ್ರ ಕಳಪೆ ಎಂದು ಗುರುತಿಸಲಾಗುತ್ತದೆ. ಇದನ್ನೂ ಓದಿ: ನಟಿ ಜಯಪ್ರದಾ ಶಿಕ್ಷೆ ರದ್ದು ಮಾಡಲು ಹೈಕೋರ್ಟ್ ನಕಾರ
Web Stories