ನವದೆಹಲಿ: ಪಿತಾಂಪುರದಲ್ಲಿರುವ ಸ್ಪಾವೊಂದರ ಮ್ಯಾನೇಜರ್ ಮತ್ತು ಗ್ರಾಹಕರು 22 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ದೆಹಲಿ ಮಹಿಳಾ ಆಯೋಗದ(ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಘಟನೆಯ ಕುರಿತು ದೆಹಲಿ ಪೊಲೀಸರು ಮತ್ತು ದೆಹಲಿ ಮುನ್ಸಿಪಲ್ ಕಾಪೋರೇಷನ್(ಎಂಸಿಡಿ)ಗೆ ನೋಟಿಸ್ ನೀಡಿದ್ದಾರೆ. ಈ ಕುರಿತು ಸಂತ್ರಸ್ತೆ ಮಾತನಾಡಿದ್ದು, ನಾನು ಕೆಲಸ ಮಾಡುತ್ತಿದ್ದ ಪಿತಾಂಪುರದ ದಿ ಓಷನ್ ಸ್ಪಾದಲ್ಲಿ ಈ ಘಟನೆ ನಡೆದಿದೆ. ಸ್ಪಾ ಮ್ಯಾನೇಜರ್ ನನ್ನನ್ನು ಕ್ಲೈಂಟ್‍ಗೆ ಪರಿಚಯಿಸಿದನು. ನಂತರ ನನಗೆ ಅಮಲು ಬೆರೆಸಿದ ಪಾನೀಯವನ್ನು ಕೊಟ್ಟು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ವಿವರಿಸಿದಳು. ಇದನ್ನೂ ಓದಿ: ಐವರ ಪ್ರಾಣ ಉಳಿಸಿದೆ ಅಂಗಾಂಗ ದಾನ – ಮಗನ ಸಾವಿನಲ್ಲಿ ಸಾರ್ಥಕತೆ ಕಂಡ ಕುಟುಂಬ
Advertisement
Advertisement
ಘಟನೆಯ ಕುರಿತು ಪೊಲೀಸರಿಗೆ ನಾನು ತಿಳಿಸುತ್ತೇನೆ ಎಂದು ನಾನು ಪ್ರಯತ್ನಿಸಿದಾಗ ಸ್ಪಾ ಮಾಲೀಕರು ನಾನು ಮೌನವಾಗಿರಲು ಲಂಚ ನೀಡಲು ಪ್ರಯತ್ನಿಸಿದರು. ಆದರೆ ನಾನು ಮಹಿಳಾ ಆಯೋಗಕ್ಕೆ ದೂರು ಕೊಟ್ಟೆ. ಆಯೋಗವು ಈ ವಿಷಯವನ್ನು ತಕ್ಷಣವೇ ಗಮನಕ್ಕೆ ತೆಗೆದುಕೊಂಡಿತು. ಎಂಸಿಡಿ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿತು. ಅವರಿಂದ ಕ್ರಮ-ತೆಗೆದುಕೊಂಡು ವರದಿ ಕೇಳಿದೆ. ದೆಹಲಿ ಪೊಲೀಸರಿಗೆ ಕಳುಹಿಸಿದ ನೋಟಿಸ್‍ನಲ್ಲಿ, ಸ್ವಾತಿ ಮಲಿವಾಲ್ ಅವರು ಎಫ್‍ಐಆರ್‍ನ ಪ್ರತಿಯನ್ನು ಮತ್ತು ಈ ವಿಷಯದಲ್ಲಿ ಬಂಧಿತ ಆರೋಪಿಗಳ ವಿವರಗಳನ್ನು ಕೋರಿದ್ದಾರೆ.
Advertisement
Advertisement
ಇದಲ್ಲದೆ, ಸ್ಪಾಗೆ ಮಾನ್ಯವಾದ ಪರವಾನಗಿ ಇದೆಯೇ ಎಂದು ಆಯೋಗವು ಅಧಿಕಾರಿಗಳಿಂದ ವಿಚಾರಣೆ ನಡೆಸಿತು. ಎಲ್ಲ ವಿವರಗಳನ್ನು ಮಹಿಳಾ ಸಮಿತಿಯು ಆಗಸ್ಟ್ 8 ರೊಳಗೆ ನೀಡುವಂತೆ ಕೇಳಿದೆ. ಸ್ವಾತಿ ಮಲಿವಾಲ್ ಮಾತನಾಡಿದ ಅವರು, ದೆಹಲಿಯಾದ್ಯಂತ ಸ್ಪಾಗಳ ನೆಪದಲ್ಲಿ ಸೆಕ್ಸ್ ರಾಕೆಟ್ ನಡೆಸಲಾಗುತ್ತಿದೆ. ಆರೋಪಿಗಳು ಹುಡುಗಿಯರ ಬಾಯಿ ಮುಚ್ಚಿಸಲು ಬೆದರಿಕೆ ಮತ್ತು ಬ್ಲ್ಯಾಕ್‍ಮೇಲ್ ಮಾಡುವುದರಿಂದ ಈ ಹೆಚ್ಚಿನ ಪ್ರಕರಣಗಳು ವರದಿಯಾಗಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸುಖವಾಗಿರಬಹುದೆಂದು ಪತಿ ಜೊತೆಗೆ ವಿದೇಶಕ್ಕೆ ಹೋದ್ಲು – ಕಿರುಕುಳ ತಡೆಯದೆ ಮಸಣ ಸೇರಿದ್ಲು
ಅಕ್ರಮ ಸ್ಪಾಗಳನ್ನು ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲು ಏಕೆ ವಿಫಲರಾಗಿದ್ದಾರೆ ಎಂದು ಪ್ರಶ್ನಿಸಿದರು.