ನವದೆಹಲಿ: ಮಗುವೊಂದು ಕಾರಿನಡಿ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ದೆಹಲಿಯ ಪಾಲಾಮ್ ಪ್ರದೇಶದಲ್ಲಿ ಡೆದಿದ್ದು, ಇದರ ವಿಡಿಯೋ ಇದೀಗ ಲಭ್ಯವಾಗಿದೆ.
2 ವರ್ಷದ ದೀಪಕ್ ಮೃತ ಬಾಲಕ. ಕಳೆದ ಬುಧವಾರದಂದು ದೀಪಕ್ ಸಾದ್ನಗರದ ತನ್ನ ಮನೆಯ ಹೊರಗಡೆ ಆಟವಾಡ್ತಿದ್ದ. ಪತ್ರಿಕೆಯೊಂದರ ವರದಿಯ ಪ್ರಕರಾ ದೀಪಕ್ ತಾಯಿ ಪ್ರೀತಿ ಮಗುವಿಗೆ ಊಟ ಮಾಡಿಸುತ್ತಿದ್ದರು. ಆದ್ರೆ ಮಗು ತುತ್ತು ತಿನ್ನಲು ನಿರಾಕರಿಸಿ ರಸ್ತೆ ಕಡೆಗೆ ಓಡಿದೆ. ಈ ವೇಳೆ 26 ವರ್ಷದ ಮಹಿಳೆಯೊಬ್ಬಳು ಐ20 ಕಾರಿನಲ್ಲಿ ಅದೇ ರಸ್ತೆಯಲ್ಲಿ ಬಂದಿದ್ದು, ಮಗುವಿನ ಮೇಲೆ ಕಾರು ಹರಿದಿದೆ.
Advertisement
ಕಾರ್ ಚಾಲಕಿ ಕಿವಿಗೆ ಇಯರ್ಫೋನ್ಸ್ ಹಾಕಿಕೊಂಡಿದ್ದರಿಂದ ಕಾರ್ ನಿಲ್ಲಿಸುವಂತೆ ಕಿರುಚಿದ್ರೂ ಆಕೆಗೆ ಕೇಳಿಸಲಿಲ್ಲ ಎಂದು ದೀಪಕ್ ಕುಟುಂಬದವರು ಆರೋಪಿಸಿದ್ದಾರೆ. ದೀಪಕ್ ತಾಯಿ ಪ್ರೀತಿ ಮಧ್ಯಾಹ್ನ 1.30ರ ವೇಳೆಯಲ್ಲಿ ಪೊಲೀಸರಿಗೆ ಕರೆ ಮಾಡಿದ್ದು, ಅವರು ಮಗುವನ್ನು ಸ್ಥಳಿಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದ್ರೆ ಮಗು ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ.
Advertisement
Advertisement
ದೀಪಕ್ ತಾಯಿ ಪತ್ರಿಕೆಯೊಂದಕ್ಕೆ ಈ ಬಗ್ಗೆ ಹೇಳಿಕೆ ನೀಡಿದ್ದು, ಕಾರನ್ನು ನಿಲ್ಲಿಸುವಂತೆ ನಾನು ಕಾರಿನ ಕಿಟಕಿಯನ್ನು ಬಡಿಯುತ್ತಲೇ ಇದ್ದೆ. ಆದ್ರೆ ಆಕೆ ಕೇಳಿಸಿಕೊಳ್ಳಲೇ ಇಲ್ಲ. ಆಕೆಯ ಕಾರ್ ನನ್ನ ಮಗುವಿಗೆ ಡಿಕ್ಕಿ ಹೊಡೆಯಿತು ಎಂಬುದನ್ನ ಆಕೆ ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.
Advertisement
ಘಟನೆಗೆ ಸಂಬಂಧಿಸಿದಂತೆ ಪಾಲಮ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304ಎ ಹಾಗೂ 279ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಹಿಳೆಯನ್ನು ವಶಕ್ಕೆ ಪಡೆಯಲಾಗಿತ್ತು. ನಂತರ ಆಕೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.