ನವದೆಹಲಿ: ಮಹಿಳೆಯೊಬ್ಬಳು ವಿದ್ಯುತ್ ಶಾಕ್‍ನಿಂದ ಮೃತಪಟ್ಟ ಘಟನೆ ದೆಹಲಿಯ ರೈಲ್ವೇ ನಿಲ್ದಾಣದಲ್ಲಿ (New Delhi railway station) ಭಾನುವಾರ ಮುಂಜಾನೆ ನಡೆದಿದೆ.
ಮೃತ ಮಹಿಳೆಯನ್ನು ಪೂರ್ವ ದೆಹಲಿಯ (Delhi) ಪ್ರೀತ್ ವಿಹಾರ್ ನಿವಾಸಿ ಸಾಕ್ಷಿ ಅಹುಜಾ ಎಂದು ತಿಳಿದು ಬಂದಿದೆ. ಬೆಳಿಗ್ಗೆ 5:30 ರ ಸುಮಾರಿಗೆ ಇಬ್ಬರು ಮಹಿಳೆಯರು, ಮೂವರು ಮಕ್ಕಳೊಂದಿಗೆ ರೈಲು ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಲೇಡಿಸ್ ಪಿಜಿಗಳೇ ಟಾರ್ಗೆಟ್ – ಸ್ನಾನ ಮಾಡುವುದನ್ನು ಕದ್ದುಮುಚ್ಚಿ ವೀಡಿಯೋ ಮಾಡುತ್ತಿದ್ದಾಗಲೇ ಕಿರಾತಕ ಲಾಕ್
Advertisement
ವಿದ್ಯುತ್ ಶಾಕ್‍ನಿಂದ ಕುಸಿದುಬಿದ್ದಿದ್ದ ಮಹಿಳೆಯನ್ನು ಅಲ್ಲಿದ್ದ ಜನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಶನಿವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ದಾರಿಯಲ್ಲಿ ನೀರು ನಿಂತಿತ್ತು. ಈ ವೇಳೆ ನೀರಿನ ಪಕ್ಕದಲ್ಲಿ ಸರಿದು ಹೋಗುವಾಗ ವಿದ್ಯುತ್ ಕಂಬಕ್ಕೆ ಕೈ ತಾಕಿದೆ. ಈ ವೇಳೆ ಮಹಿಳೆಗೆ ವಿದ್ಯುತ್ ಪ್ರವಹಿಸಿದೆ (Electrocution) ಎಂದು ತಿಳಿದು ಬಂದಿದೆ. ಕಂಬದ ಕೆಳಭಾಗದಲ್ಲಿ ವಿದ್ಯುತ್ ತಂತಿಗಳು ಇವೆ. ಈ ತಂತಿಗಳ ಮೂಲಕ ವಿದ್ಯುತ್ ಹರಿದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
Advertisement
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ರೈಲ್ವೆ ಪೊಲೀಸರು (Police) ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 3 ವರ್ಷದ ಹಿಂದಿನ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ – ಮಹಿಳೆಯ ಅಸ್ತಿಪಂಜರ ಸೆಪ್ಟಿಕ್ ಟ್ಯಾಂಕ್‍ನಲ್ಲಿ ಪತ್ತೆ