ಮನೆ ಕ್ಲೀನ್‌ ಮಾಡು ಅಂತ ಹೇಳಿದ್ದಕ್ಕೆ ಜಗಳ – ಗಂಡನ ಕಿವಿ ಕಚ್ಚಿ ತುಂಡು ಮಾಡಿದ ಹೆಂಡ್ತಿ ವಿರುದ್ಧ ಕೇಸ್‌!

Public TV
2 Min Read
Delhi Crime

ನವದೆಹಲಿ: ಮನೆ ಸ್ವಚ್ಛ ಮಾಡು ಅಂತ ಹೇಳಿದ್ದಕ್ಕೆ ಗಂಡ-ಹೆಂಡತಿ (Husband And Wife) ನಡುವೆ ಜಗಳವಾಗಿದೆ. ಈ ವೇಳೆ ಆಕ್ರೋಶದಿಂದ ಹೆಂಡತಿ ತನ್ನ ಬಲ ಕಿವಿಯನ್ನು ಕಚ್ಚಿ ತುಂಡುಮಾಡಿರುವುದಾಗಿ ಪತಿ ಪೊಲೀಸ್‌ ಕೇಸ್‌ ದಾಖಲಿಸಿರುವ ಘಟನೆ ದೆಹಲಿ ಸುಲ್ತಾನ್‌ಪುರಿ (Sultanpuri) ಪ್ರದೇಶದಲ್ಲಿ ನಡೆದಿದೆ.

ಹೆಂಡತಿ ಕಿವಿ ಕಚ್ಚಿ ಎರಡು ತುಂಡಾಗಿದ್ದರಿಂದ 45 ವರ್ಷದ ಬಲಿಪಶು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು. ಸಂತ್ರಸ್ತ ಪತಿ ನೀಡಿದ ದೂರಿನ ಆಧಾರದ ಮೇಲೆ ಪತ್ನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಸಿಡಿಲು ಬಡಿದು 20 ಮಂದಿ ದುರ್ಮರಣ – ಅಮಿತ್‌ ಶಾ ಸಂತಾಪ

Delhi Crime 2

ಪತ್ನಿ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳಿಂದ ಗಾಯ ಉಂಟುಮಾಡುವುದು) ಅಡಿಯಲ್ಲಿ FIR ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

ಅಷ್ಟಕ್ಕೂ ನಡೆದಿದ್ದೇನು?
ಇದೇ ತಿಂಗಳ ನವೆಂಬರ್‌ 20 ರಂದು ಬೆಳಗ್ಗೆ 9:20ರ ಸುಮಾರಿಗೆ ನನ್ನ ಹೆಂಡತಿಗೆ ಮನೆ ಸ್ವಚ್ಛಗೊಳಿಸುವಂತೆ ಹೇಳಿ, ಮನೆಯ ಹೊರಗೆ ಕಸ ಎಸೆಯಲು ಹೋಗಿದ್ದೆ. ನಾನು ಮನೆಗೆ ವಾಪಸ್‌ ಬಂದ ಕೂಡಲೇ ನನ್ನ ಹೆಂಡತಿ ಜಗಳ ತೆಗೆದಿದ್ದಾಳೆ. ಜಗಳದ ಮಧ್ಯೆ ಮಕ್ಕಳೊಂದಿಗೆ ಪ್ರತ್ಯೇಕವಾಗಿರಲು ಮನೆ ಮಾರಾಟ ಮಾಡಿ, ತನಗೂ ಪಾಲು ನೀಡುವಂತೆ ಪತ್ನಿ ಕೇಳಿದ್ದಾಳೆ. ಈ ವೇಳೆ ಪತಿ ಸಮಾಧಾನಪಡಿಸಿದರೂ ಬಗ್ಗದೇ ಮಾತಿನ ಚಕಮಕಿ ಮುಂದುವರಿದಿದೆ.

ಇದರಿಂದ ಆಕೆಯ ಕೋಪ ಮಿತಿಮೀರಿ ನನ್ನನ್ನೇ ಹೊಡೆಯಲು ಬಂದಿದ್ದಳು. ಆಕೆಯನ್ನು ತಳ್ಳಿ, ನಾನು ಮನೆಯಿಂದ ಹೊರಹೋಗುತ್ತಿದೆ. ಆಗ ಹಿಂಬದಿಯಿಂದ ನನ್ನನ್ನ ಹಿಡಿದುಕೊಂಡು ಬಲ ಕಿವಿಯನ್ನು ಕಚ್ಚಿದಳು. ನನ್ನ ಕಿವಿ ಮೇಲಿನ ಭಾಗ ತುಂಡಾಗಿ ರಕ್ತಸ್ರಾವವಾಯಿತು ಎಂದು ದೂರಿನಲ್ಲಿ ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ

ಸದ್ಯ ಸಂತ್ರಸ್ತ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಆದ್ರೆ ಇನ್ನೂ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ. ನವೆಂಬರ್‌ 22ರಂದು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಪ್ರತ್ಯೇಕ ತಂಡ ಕಳುಹಿಸಲಾಗಿದೆ. ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ವೈರಸ್; ಆಸ್ಪತ್ರೆಗಳಲ್ಲಿ ತುರ್ತುಕ್ರಮ ಪರಿಶೀಲಿಸುವಂತೆ ರಾಜ್ಯಗಳಿಗೆ ಖಡಕ್‌ ವಾರ್ನಿಂಗ್‌

Share This Article