Connect with us

Cricket

ದೆಹಲಿ ವಾಯುಮಾಲಿನ್ಯ ನಿಯಂತ್ರಿಸಲು ಸಲಹೆ ಕೊಟ್ಟ ಕೊಹ್ಲಿ

Published

on

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಸ್ಮಾಗ್(ಹೊಗೆ ಮಂಜು) ಮತ್ತು ವಾಯು ಮಾಲಿನ್ಯದಿಂದಾಗಿ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೆರಡೂ ವಾಯು ಮಾಲಿನ್ಯ ನಿಯಂತ್ರಿಸಲು ಹರಸಾಹಸ ಪಡುತ್ತಿವೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ದೆಹಲಿ ನಿವಾಸಿಗಳಿಗೆ ವಾಯು ಮಾಲಿನ್ಯ ನಿಯಂತ್ರಿಸಲು ಸಲಹೆ ನೀಡಿದ್ದಾರೆ. ಈ ಕುರಿತು ತಮ್ಮ ಟ್ವಟರ್ ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ.

ನಿಮಗೆಲ್ಲರಿಗೂ ದೆಹಲಿಯ ಮಾಲಿನ್ಯದ ಬಗ್ಗೆ ಗೊತ್ತಿದೆ. ದೇಶದ ಎಲ್ಲ ಜನರೂ ವಾಯು ಮಾಲಿನ್ಯದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಆದರೆ ಈ ಚರ್ಚೆಗಳಿಂದ ವಾಯು ಮಾಲಿನ್ಯದ ನಿಯಂತ್ರಣ ಆಗಲಾರದು. ಹಾಗಾಗಿ ಮಾಲಿನ್ಯ ನಿಯಂತ್ರಣದ ಬಗ್ಗೆ ಎಲ್ಲರೂ ತಮ್ಮ ಜೀವನಶೈಲಿಯನ್ನು ಬದಲಿಸಕೊಳ್ಳಬೇಕಿದೆ ಎಂದು ತಮ್ಮ ವಿಡಿಯೋ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ?: ನಾವು ಮಾಲಿನ್ಯದ ವಿರುದ್ಧ ಮ್ಯಾಚ್ ಗೆಲ್ಲಬೇಕಾದರೆ, ನಾವೆಲ್ಲರೂ ಒಟ್ಟಾಗಿ ಸೇರಿ ಆಡಿದರೆ ಮಾತ್ರ ಮ್ಯಾಚ್ ಗೆಲ್ಲಲು ಸಾಧ್ಯವಾಗುತ್ತದೆ. ಏಕೆಂದರೆ ಮಾಲಿನ್ಯ ಕಡಿಮೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ವಿಶೇಷವಾಗಿ ದೆಹಲಿ ನಿವಾಸಿಗಳ ಆದ್ಯ ಕರ್ತವ್ಯವಾಗಿದೆ. ಖಾಸಗಿ ವಾಗಹನಗಳನ್ನ ಬಳಸುವುದು ಬಿಟ್ಟು ಸಾರಿಗೆ ಬಸ್, ಮೆಟ್ರೋ, ಸೋಲಾರ್ ಕ್ಯಾಬ್ ಗಳಲ್ಲಿ ಸಂಚರಿಸಿ. ಒಂದು ವೇಳೆ ವಾರದಲ್ಲಿ ಒಂದು ದಿನ ನೀವು ಹೀಗೆ ಮಾಡಿದರೆ ತುಂಬಾ ಬದಲಾವಣೆ ಆಗುತ್ತದೆ. ಕ್ರಿಯೆ ಚಿಕ್ಕದೋ ಅಥವಾ ದೊಡ್ಡದೋ ಇರಲಿ. ಅದರಿಂದ ಸ್ವಲ್ಪವಾದರೂ ಮಲಿನತೆ ಕಡಿಮೆಯಾಗುತ್ತದೆ ಎಂದು ವಿಡಿಯೋದಲ್ಲಿ ಕೊಹ್ಲಿ ಹೇಳಿದ್ದಾರೆ.

ದೆಹಲಿ ಜನತೆಯೊಂದಿಗೆ ನಾನು ಮಾತನಾಡೇಕು.  ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

https://twitter.com/imVkohli/status/930856114186477568

Click to comment

Leave a Reply

Your email address will not be published. Required fields are marked *