ನವದೆಹಲಿ: ನೀರಿನ ಬಿಕ್ಕಟ್ಟು ಇತ್ಯರ್ಥಪಡಿಸಲು (Delhi Water Crisis) ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸದ ಹಿನ್ನೆಲೆ ಸಚಿವೆ ಅತಿಶಿ ಆರಂಭಿಸಿರುವ ಉಪವಾಸ ಸತ್ಯಾಗ್ರಹ (Hunger Strike) ಎರಡನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿಯ 28 ಲಕ್ಷ ಜನರಿಗೆ ಹರಿಯಾಣದಿಂದ ತಮ್ಮ ಪಾಲಿನ ನೀರು ಸಿಗದವರೆಗೂ ಉಪವಾಸ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.
ದೆಹಲಿಯಲ್ಲಿ ನೀರಿನ ಕೊರತೆಯಾಗಿದ್ದು ನಿಗದಿತ ಪ್ರಮಾಣದ ನೀರು ಬಿಡದೇ ಹರಿಯಾಣ ಮತ್ತು ಹಿಮಾಚಲಪ್ರದೇಶ ಸರ್ಕಾರಗಳು ಅನ್ಯಾಯ ಮಾಡುತ್ತಿವೆ. ಮೋದಿ ಅವರು ಮಧ್ಯಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಅತಿಶಿ (Atishi) ಆಗ್ರಹಿಸುತ್ತಿದ್ದಾರೆ.
Advertisement
Advertisement
ಎರಡನೇ ದಿನ ಉಪವಾಸ ಆರಂಭಕ್ಕೂ ಮುನ್ನ ಶಿವನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಅವರು ಹೋರಾಟ ಮುಂದುವರಿಸುವುದಾಗಿ ಹೇಳಿದರು. ದೆಹಲಿಗೆ ಒಟ್ಟು 1005 MGD ನೀರಿನ ಅಗತ್ಯವಿದೆ, ಅದರಲ್ಲಿ 613 MGD ಹರಿಯಾಣದ ಮೂಲವಾಗಿದೆ. ಕಳೆದ ಕೆಲ ವಾರಗಳಲ್ಲಿ ಈ ಮಟ್ಟದ ನೀರಿನ ಪೂರೈಕೆಯು ಗಣನೀಯವಾಗಿ ಕಡಿಮೆಯಾಗಿದೆ. ಕೇವಲ 513 MGD ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಒಂದು MGD ನೀರು 28,500 ಜನರ ಬಳಕೆಗೆ ಬರಲಿದೆ. ಹರಿಯಾಣ 100 MGD ಕಡಿಮೆ ನೀರನ್ನು ನೀಡಿದರೆ 28 ಲಕ್ಷಕ್ಕೂ ಹೆಚ್ಚು ಜನರಿಗೆ ದಿನದ ನೀರಿನ ಕೊರತೆಯಾಗಲಿದೆ. ಇದನ್ನೂ ಓದಿ: ಹಣಕಾಸು ಆಯೋಗದ ಶಿಫಾರಸಿನ ಅನುದಾನವನ್ನು ಕರ್ನಾಟಕಕ್ಕೆ ನೀಡಿ – ಕೇಂದ್ರದ ಮುಂದೆ ರಾಜ್ಯ ಸರ್ಕಾರ ಡಿಮ್ಯಾಂಡ್!
Advertisement
Advertisement
ಶುಕ್ರವಾರ ಹರಿಯಾಣವು ದೆಹಲಿಗೆ 110 ಎಂಜಿಡಿ ಕಡಿಮೆ ನೀರನ್ನು ಕಳುಹಿಸಿದೆ, ನಾನು ದೆಹಲಿಯ ನೀರಿನ ಸರಿಯಾದ ಪಾಲನ್ನು ಪಡೆಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇನೆ. ಆದರೆ ಹರಿಯಾಣದ ಬಿಜೆಪಿ ಸರ್ಕಾರವು ದೆಹಲಿಯ ಜನರನ್ನು ನಿರ್ಲಕ್ಷಿಸಿದೆ. ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಕುಳಿತುಕೊಳ್ಳುವುದನ್ನು ಬಿಟ್ಟು ನನಗೆ ಬೇರೆ ದಾರಿಯೇ ಇಲ್ಲ ಎಂದು ಅವರು ಹೇಳಿದರು. ಇದನ್ನೂ ಓದಿ: ಬೆಳಗ್ಗೆ 9:15ರೊಳಗೆ ಕಚೇರಿಗೆ ಬರದಿದ್ದರೇ ಅರ್ಧ ದಿನದ ಸಂಬಂಳ ಕಟ್ – ಕೇಂದ್ರ ಸರ್ಕಾರಿ ನೌಕರರಿಗೆ ಡಿಒಪಿಟಿ ಎಚ್ಚರಿಕೆ!
ಉಪವಾಸ ಸತ್ಯಾಗ್ರಹದ ಬಗ್ಗೆ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರ ರಾಜಧಾನಿಗೆ ನೀರು ಪೂರೈಕೆಯ ವಿಷಯದಲ್ಲಿ ನಡೆಯುತ್ತಿರುವ ತಾರತಮ್ಯದ ಆರೋಪಗಳನ್ನು ಅವರು ನಿರಾಕರಿಸಿದರು. ನೀರಿನ ಬಿಕ್ಕಟ್ಟನ್ನು ʻಅಸಮರ್ಪಕ ಮತ್ತು ಅಸಮರ್ಥʼ ಎಂದು ಆಪ್ ಸರ್ಕಾರವನ್ನು ದೂಷಿಸಿದರು. ಈ ನಡುವೆ ದೆಹಲಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಕಾರ್ಯಕರ್ತರು ದೆಹಲಿಯ ಜಲ ಬೋರ್ಡ್ ಎದರು ಪ್ರತಿಭಟನೆ ನಡೆಸಿದರು. ಪೊಲೀಸ್ ಬ್ಯಾರಿಕೇಡ್ ಗಳನ್ನು ತಳ್ಳಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ಪ್ರಯೋಗಿಸಲಾಯಿತು. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿದ್ದ YSR ಕಾಂಗ್ರೆಸ್ ಪಕ್ಷದ ಕಚೇರಿ ಧ್ವಂಸ – ಸೇಡಿನ ರಾಜಕಾರಣ ಎಂದು ಆಕ್ರೋಶ