ನವದೆಹಲಿ: ರಣಜಿ ಪಂದ್ಯದ ವೇಳೆ ದೆಹಲಿ ತಂಡದ ಆಟಗಾರ ಗೌತಮ್ ಗಂಭೀರ್ ಅಂಪೈರ್ ವಿರುದ್ಧ ಗರಂ ಆಗಿದ್ದಾರೆ.
ಹಿಮಾಚಲ ಪ್ರದೇಶದ ವಿರುದ್ಧ ನಡೆಯುತ್ತಿದ್ದ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 44 ರನ್(50 ಎಸೆತ,7 8 ಬೌಂಡರಿ) ಹೊಡೆದು ಗಂಭೀರ್ ಚೆನ್ನಾಗಿ ಆಡುತ್ತಿದ್ದರು. ಮಯಾಂಕ್ ದಗರ್ ಎಸೆದ 17ನೇ ಓವರ್ ನ ಮೊದಲ ಎಸೆತವನ್ನು ಎಡಗಡೆ ಹೊಡೆಯಲು ಗಂಭೀರ್ ಪ್ರಯತ್ನ ಪಟ್ಟಾಗ ಬಾಲ್ ಮೇಲಕ್ಕೆ ಚಿಮ್ಮಿ ಸಿಲ್ಲಿ ಪಾಯಿಂಟ್ ನಲ್ಲಿದ್ದ ಖಂಡೂರಿ ಕೈಗೆ ಸಿಕ್ಕಿತ್ತು.
ಬಾಲ್ ಹಿಡಿದ ಕೂಡಲೇ ಹಿಮಾಚಲ ಪ್ರದೇಶದ ಆಟಗಾರರು ಔಟ್‍ಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿದ ಕೂಡಲೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಅಂಪೈರ್ ತೀರ್ಪು ನೀಡುತ್ತಿದ್ದಂತೆ ಗಂಭೀರ್ ಅಸಮಾಧಾನವನ್ನು ಹೊರ ಹಾಕುತ್ತಾ ಪೆವಿಲಿಯನ್ ಕಡೆ ನಡೆದರು. ಡ್ರೆಸ್ಸಿಂಗ್ ರೂಂ ತೆರಳಿದ ಬಳಿಕವೂ ಗಂಭೀರ್ ಸಿಟ್ಟು ಕಡಿಮೆಯಾಗಲಿಲ್ಲ. ಅಂಪೈರ್ ಅವರನ್ನು ಸಿಟ್ಟಿನಿಂದಲೇ ನೋಡುತ್ತಿದ್ದರು.
ದೆಹಲಿ ತಂಡದ ನಾಯಕರಾಗಿದ್ದ ಗಂಭೀರ್ ತಮ್ಮ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ನಾಯಕ ಸ್ಥಾನದಿಂದ ಹಿಂದಕ್ಕೆ ಸರಿದಿದ್ದರು. ಯುವ ಆಟಗಾರರಿಗೆ ನಾನು ನಾಯಕತ್ವವನ್ನು ಬಿಟ್ಟು ಕೊಡುತ್ತಿದ್ದೇನೆ. ಹೊಸ ನಾಯಕನ ಜೊತೆ ತಂಡ ಜಯಗಳಿಸಲು ಹಿಂದಿನಿಂದ ಕೆಲಸ ಮಾಡುತ್ತೇನೆ ಎಂದು ಗಂಭೀರ್ ಈ ಹಿಂದೆ ಹೇಳಿದ್ದರು. ಹೀಗಾಗಿ ಈ ಬಾರಿ ನಿತೀಶ್ ರಾಣಾ ದೆಹಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
https://twitter.com/NaaginDance/status/1061857087758589952
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews