ನವದೆಹಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ.
ಭಾರತದ ಪ್ರವಾಸದ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಿ ರಾಷ್ಟ್ರಪತಿ ಭವನದ ಔತಣಕೂಟಕ್ಕೆ ಆಗಮಿಸಿದ ಟ್ರಂಪ್ ದಂಪತಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದಂಪತಿ ಆತ್ಮೀಯವಾಗಿ ಆಮಂತ್ರಿಸಿದ್ದರು. 8 ಗಂಟೆಗೆ ನಿಗದಿಯಾಗಿದ್ದ ಔತಣಕೂಟಕ್ಕೆ 20 ನಿಮಿಷ ಮುಂಚಿತವಾಗಿಯೇ ಅಮೆರಿಕದ ಅಧ್ಯಕ್ಷರು ಆಗಮಿಸಿದ್ದರು. ಟ್ರಂಪ್ ಅವರಿಗೆ ರಾಷ್ಟ್ರಪತಿ ಭವನದ ಬಗ್ಗೆ ಕೋವಿಂದ್ ಅವರೇ ಮಾಹಿತಿ ನೀಡಿದರು.
Advertisement
Advertisement
ಈ ಔತಣಕೂಟದಲ್ಲಿ ಟ್ರಂಪ್ ಅವರಿಗೆ ಸಿಎಂ ಯಡಿಯೂರಪ್ಪ ಹಸ್ತಲಾಘವ ಮಾಡಿದರು. ಟ್ರಂಪ್ ಸ್ವಾಗತಕ್ಕಾಗಿ ಇಡೀ ರೈಸಿನಾ ಹಿಲ್ ಸಂಪೂರ್ಣ ವರ್ಣರಂಜಿತವಾಗಿತ್ತು. ಇದಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ಡೊನಾಲ್ಡ್ ಟ್ರಂಪ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕವಾಗಿ ಔಪಚಾರಿಕ ಸ್ವಾಗತ ನೀಡಲಾಗಿತ್ತು.
Advertisement
#WATCH Delhi: US President Donald Trump & First Lady Melania Trump received at Rashtrapati Bhawan by President Ram Nath Kovind and his wife Savita Kovind. A dinner banquet will be hosted by President in honour of the US President. pic.twitter.com/nUXYUR2D7R
— ANI (@ANI) February 25, 2020
Advertisement
ಟ್ರಂಪ್ ಅವರಿಗೆ ಸೇನಾ ಪಡೆಯಿಂದ ಗಾರ್ಡ್ ಆಫ್ ಹಾನರ್ ನೀಡಲಾಯಿತು. ಈ ವೇಳೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಜೈಶಂಕರ್ ಹಾಗೂ ಮೂರು ಪಡೆಗಳ ಮುಖ್ಯಸ್ಥರು ಹಾಜರಾಗಿದ್ದರು. ಇವಾಂಕಾ ದಂಪತಿ ಸೇರಿದಂತೆ ಅಮೆರಿಕದ ನಿಯೋಗವೂ ಉಪಸ್ಥಿತಿ ಇತ್ತು. ಬಳಿಕ ರಾಜಘಾಟ್‍ನತ್ತ ಪಯಣಿಸಿದ ಟ್ರಂಪ್, ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಭಾರತೀಯರ ಜೊತೆ ಅಮೆರಿಕನ್ನರು ದೃಢವಾಗಿ ನಿಲ್ಲುತ್ತೆ ಅಂತ ಸಂದರ್ಶಕರ ಪುಸ್ತಕದಲ್ಲಿ ಸಹಿ ಹಾಕಿದರು.