ನವದೆಹಲಿ: ಕಾಲೇಜುಗಳಿಗೆ ಹಣವನ್ನು ಬಿಡುಗಡೆ ಮಾಡದಿದ್ರೆ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ದೆಹಲಿ ವಿಶ್ವವಿದ್ಯಾನಿಲಯ ಶಿಕ್ಷಕರ ಸಂಘ(ಡಿಯುಟಿಎ) ಸರ್ಕಾರಕ್ಕೆ ಬೆದರಿಕೆ ಹಾಕಿದೆ.
12 ವಿಶ್ವವಿದ್ಯಾಲಯಗಳಿಗೆ ಹಣವನ್ನು ಬಿಡುಗಡೆ ಮಾಡದಿರುವ ಕಾರಣ ಡಿಯುಟಿಎ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಬೆದರಿಕೆ ಹಾಕಿದೆ. ಕಾಲೇಜುಗಳ ಹಣ ಬಳಕೆಯನ್ನು ವಿಶ್ಲೇಷಿಸಲು ಸರ್ಕಾರವು ಸಮಿತಿಯನ್ನು ರಚಿಸಿರುವುದನ್ನು ಡಿಯುಟಿಎ ಪ್ರಶ್ನಿಸಿದೆ. ಇದನ್ನೂ ಓದಿ: ಸರ್ಕಾರ ಕೂಡಲೇ ಶಾಲೆ, ಕಾಲೇಜುಗಳಿಗೆ 15-20 ದಿನ ರಜೆ ಘೋಷಿಸಬೇಕು: ಹೆಚ್‍ಡಿಕೆ
Advertisement
Advertisement
ಸಮಿತಿ ರಚನೆ ಕುರಿತು ಪ್ರಶ್ನಿಸಿದ ಡಿಯುಟಿಎ ಅಧ್ಯಕ್ಷ ಎಕೆ ಭಾಗಿ, ಸಮಿತಿ ರಚನೆಯ ಉದ್ದೇಶವೇನು? ಆಮ್ ಆದ್ಮಿ ಪಕ್ಷದಿಂದ ಚುನಾಯಿತ ಸದಸ್ಯರನ್ನು ಹೊಂದಿರುವ ಆಡಳಿತ ಮಂಡಳಿಗಳು ಈಗಾಗಲೇ ಬಜೆಟ್ ಅನ್ನು ಅನುಮೋದಿಸಿದೆ. ಆದರೆ ಈ ಸಮಿತಿ ಅನುಮೋದಿಸಿದ ಬಜೆಟ್‍ಗಳನ್ನು ಮತ್ತೆ ಪರಿಶೀಲನೆ ನಡೆಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
Advertisement
ದೆಹಲಿ ಸರ್ಕಾರ 12 ಕಾಲೇಜುಗಳ ಹಣದ ಬಳಕೆ ಮತ್ತು ನಿರ್ವಹಣೆಯನ್ನು ಪರಿಶೀಲಿಸಲು ಸೋಮವಾರ ಏಳು ಸದಸ್ಯರ ಸಮಿತಿಯನ್ನು ರಚಿಸಿದೆ. ಈ ಹಿನ್ನೆಲೆ ನಾವು ಇದರ ವಿರುದ್ಧ 6,000 ಶಿಕ್ಷಕರಿಂದ ಸಹಿಗಳನ್ನು ಸ್ವೀಕರಿಸಿದ್ದೇವೆ. ಈ ಕುರಿತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಆನ್‍ಲೈನ್ ಅರ್ಜಿಯನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕಿಟ್‌ಕ್ಯಾಟ್ ರ‍್ಯಾಪರ್‌ನಲ್ಲಿ ಲಾರ್ಡ್ ಪುರಿ ಜಗನ್ನಾಥ ಫೋಟೋ – ಪ್ಯಾಕ್‌ಗಳನ್ನು ಹಿಂತೆಗೆದುಕೊಂಡ ನೆಸ್ಲೆ ಇಂಡಿಯಾ
Advertisement
ನಮ್ಮ ಸಮಸ್ಯೆಗಳನ್ನು ಕುರಿತು ಚರ್ಚಿಸಲು ಮತ್ತು ನಮ್ಮ ಹೋರಾಟವನ್ನು ತೀವ್ರಗೊಳಿಸುವ ಮಾರ್ಗಗಳ ಕುರಿತು ಚರ್ಚಿಸಲು ಶನಿವಾರ ಸಭೆ ಸೇರಲಿದ್ದೇವೆ. ಈ ಸಭೆ ಡಿಯುಟಿಎ ಕಾರ್ಯನಿರ್ವಾಹಕರ ನೇತೃತ್ವದಲ್ಲಿ ನಡೆಸಲಾಗುವುದು ಎಂದು ವಿವರಿಸಿದರು.
12 ಕಾಲೇಜುಗಳು ಹಣ ಬಿಡುಗಡೆಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರದ ಜೊತೆ ದೀರ್ಘಕಾಲದಿಂದ ಜಗಳ ನಡೆಯುತ್ತಿದೆ.