ದೆಹಲಿ ವಿವಿ ಪ್ರೊಫೆಸರ್‌ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಕಾರು ಚಾಲಕ!

Public TV
1 Min Read
MURDER 1

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರೊಬ್ಬರ ಪತ್ನಿಯನ್ನು ಮನೆಯ ಕಾರು ಚಾಲಕನೆ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಪಿಂಕಿ (32) ಕೊಲೆಯಾದ ಮಹಿಳೆ. ಕೊಲೆ ಮಾಡಿದ ಕಾರು ಚಾಲಕ ರಾಕೇಶ್‌, ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಅಭಿಮಾನಿಗಳ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ರಾಧಿಕಾ ಪಂಡಿತ್

murder

ವಾಯುವ್ಯ ದೆಹಲಿಯ ಬುರಾರಿ ವಲಯದಲ್ಲಿ ರಸ್ತೆ ಬದಿಯಲ್ಲಿ ಆರೋಪಿ ರಾಕೇಶ್‌ ಭಯದಿಂದ ಒಬ್ಬನೇ ಕುಳಿತಿದ್ದ. ಅನುಮಾನಗೊಂಡು ವಿಚಾರಿಸಿದಾಗ ತಾನು ಮಹಿಳೆಯೊಬ್ಬರನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಪೊಲೀಸರು ಶಾಂತನಗರದಲ್ಲಿರುವ ನಿವಾಸಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಮಹಿಳೆಯ ಶವ ಪತ್ತೆಯಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ನಾನೊಬ್ಬ ನಿರುದ್ಯೋಗಿ. ಪಿಂಕಿ ಅವರ ಪತಿ ವೀರೇಂದ್ರ ಕುಮಾರ್‌ (ಸಹಾಯಕ ಪ್ರಾಧ್ಯಾಪಕ) ತಮ್ಮ ಮನೆಯ ಮೊದಲ ಮಹಡಿಯಲ್ಲಿ ಬಾಡಿಗೆಗೆ ವಾಸಿಸಲು ಅವಕಾಶ ಕಲ್ಪಿಸಿದರು. ಜೊತೆಗೆ ತಮ್ಮ ಕಾರು ಚಾಲಕನಾಗಿ ನನ್ನನ್ನು ನಿಯೋಜಿಸಿಕೊಂಡರು. ಇದನ್ನೂ ಓದಿ: ಬಿಗ್‌ಬಾಸ್ ಲವ್ ಬರ್ಡ್ಸ್ ಭೇಟಿಯಾದ ಶುಭಾ ಪೂಂಜಾ

FotoJet 6 21

ನಂತರ 2021ರ ಫೆಬ್ರವರಿಯಲ್ಲಿ ಪಿಂಕಿ ಅವರನ್ನು ವಿವಾಹವಾದರು. ನನಗೆ ಹಣಕಾಸಿನ ತೊಂದರೆ ಇತ್ತು. ಹೀಗಾಗಿ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಪಿಂಕಿ ಅವರು ನನ್ನನ್ನು ಮನೆಯೊಂದ ಹೊರ ಹಾಕಿದರು.

ಇದರಿಂದ ಮನಸ್ಸಿಗೆ ನೋವಾಯಿತು. ಮನೆಯಲ್ಲಿ ವೀರೇಂದ್ರ ಕುಮಾರ್‌ ಅವರು ಇಲ್ಲದಿದ್ದಾಗ ಆಕೆಯನ್ನು ಹತ್ಯೆ ಮಾಡಿದೆ ಎಂದು ರಾಕೇಶ್‌ ತಪ್ಪೊಪ್ಪಿಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *