6 ದಿನಗಳಿಂದ ತಲೆ ಮರೆಸಿಕೊಂಡಿದ್ದ ದೆಹಲಿ ಗಲಭೆಯ ಆರೋಪಿ ಶರಣು

Public TV
2 Min Read
Tahir Hussain

– ತಾಹೀರ್ ವಿಚಾರಣೆ ನಿರಾಕರಿಸಿದ ಕೋರ್ಟ್

ನವದೆಹಲಿ: ಗಲಭೆಗೆ ಪ್ರಚೋದನೆ ನೀಡಿದ್ದ ಆರೋಪಿ ಕೌನ್ಸಿಲರ್ ತಾಹೀರ್ ಹುಸೇನ್ ಗುರುವಾರ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಶರಣಾಗಿದ್ದಾನೆ. ಆದರೆ ಪ್ರಕರಣ ನಮ್ಮ ನ್ಯಾಯವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯ ವಿಚಾರಣೆ ನಿರಾಕರಿಸಿದೆ.

ಆರೋಪಿ ತಾಹೀರ್ ತಲೆ ಮರೆಸಿಕೊಂಡ ಆರು ದಿನಗಳ ಬಳಿಕ ದೆಹಲಿ ಪೊಲೀಸರು ಆತನನ್ನು ನ್ಯಾಯಾಲಯದ ಪಾರ್ಕಿಂಗ್ ಸ್ಥಳದಲ್ಲಿ ಬಂಧಿಸಿದ್ದಾರೆ. ತಾಹಿರ್ ಕಾರ್ಕಾರ್ಡೂಮಾ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಗಲಭೆಯ ಪ್ರಮುಖ ಆರೋಪಿಗಳ ಹೆಸರುಗಳು ಹೊರಬಿದ್ದ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿ ತಾಹೀರ್ ನನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ಫೆಬ್ರವರಿ 28ರಂದು ತಾಹೀರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ನಿರೀಕ್ಷಿತ ಜಾಮೀನು ಅರ್ಜಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ತಾಹೀರ್, ಫೆಬ್ರವರಿ 24ರಂದು ಗುಂಪೊಂದು ಕಾರ್ಖಾನೆಯ ಮೇಲೆ ದಾಳಿ ಮಾಡಿದಾಗ, ಪೊಲೀಸರು ಕಾರ್ಖಾನೆಯ ಸಮೀಪದ ನನ್ನ ಮನೆಯನ್ನು ಪರಿಶೀಲಿಸಿದ್ದರು. ಆಗ ಕಾರ್ಖಾನೆ ಹಾಗೂ ಮನೆ ಎರಡನ್ನೂ ಮುಚ್ಚಿ ಕೀಲಿಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಫೆಬ್ರವರಿ 24ರ ಇಡೀ ರಾತ್ರಿ ಹಾಗೂ ಫೆಬ್ರವರಿ 25ರ ಇಡೀ ದಿನ ಸ್ನೇಹಿತನ ಮನೆಯಲ್ಲಿದ್ದೆ. ಫೆಬ್ರವರಿ 25ರಂದು ಬೆಳಗ್ಗೆ 8:30ಕ್ಕೆ ಮನೆಯಲ್ಲಿದ್ದ ಬಟ್ಟೆ ತೆಗೆದುಕೊಂಡು ಮನೆಗೆ ಹೋಗಿದ್ದೆ. ಆದರೆ ಮನೆಯ ಮುಂದೆ ಜನಸಂದಣಿ ಇತ್ತು. ಆದ್ದರಿಂದ ಪೊಲೀಸರು ನನ್ನನ್ನು ಹೊರಹೋಗುವಂತೆ ಸಲಹೆ ನೀಡಿದ್ದರು ಎಂದು ಹೇಳಿದ್ದಾನೆ.

ಹಿಂಸಾಚಾರದ ನಂತರ, ಇಟ್ಟಿಗೆ, ಕಲ್ಲು ಹಾಗೂ ಹಿಂಸಾಚಾರಕ್ಕೆ ಬಳಸಬಹುದಾದ ವಸ್ತುಗಳು ಕೌನ್ಸಿಲರ್ ತಾಹೀರ್ ಮನೆಯ ಮೇಲ್ಭಾವಣಿಯಲ್ಲಿ ದೊರೆತಿವೆ. ಬಾಟಲಿಗಳಲ್ಲಿ ಆಸಿಡ್ ಅನ್ನು ತುಂಬಿ ತಾಹೀರ್ ಮನೆಯಲ್ಲಿ ಇಡಲಾಗಿತ್ತು. ದೆಹಲಿಯ ದಯಾಲ್‍ಪುರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 302 ಕೊಲೆ ಪ್ರಕರಣದ ಅಡಿಯಲ್ಲಿ ತಾಹೀರ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.

DHL C

ದೆಹಲಿ ಹಿಂಸಾಚಾರ ಘಟನೆಯಲ್ಲಿ ಈವರೆಗೆ 531 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 47 ಪ್ರಕರಣಗಳು ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿರುವ ಕೇಸ್‍ಗಳಿದ್ದು, 1,647 ಜನರನ್ನು ಬಂಧಿಸಲಾಗಿದೆ.

8 ದಿನಗಳ ಬಳಿಕ ಶಾರುಖ್ ಅರೆಸ್ಟ್:
ಪ್ರಮುಖ ಆರೋಪಿ ಮೊಹಮ್ಮದ್ ಶಾರುಖ್‍ನನ್ನು ದೆಹಲಿ ಪೊಲೀಸರು ಮಾರ್ಚ್ 3ರಂದು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಬರೇಲಿಯಲ್ಲಿ ಬಂಧಿಸಿದ್ದರು. ಫೆಬ್ರವರಿ 24ರಂದು ಜಫರಾಬಾದ್‍ನ ಪೊಲೀಸರ ಮೇಲೆ ಶಾರುಖ್ ಪಿಸ್ತೂಲ್‍ನಿಂದ 8 ಸುತ್ತು ಗುಂಡು ಹಾರಿಸಿದ್ದ. ಆ ಬಳಿಕ 8 ದಿನ ತಲೆ ಮರೆಸಿಕೊಂಡಿದ್ದ.

Share This Article
Leave a Comment

Leave a Reply

Your email address will not be published. Required fields are marked *