– ಮೋದಿ ಭರವಸೆ ನಂಬಬೇಡಿ ಎಂದು ಕೇಜ್ರಿವಾಲ್ ಟೀಕೆ
ನವದೆಹಲಿ: ಪ್ರತಿಪಕ್ಷಗಳ ವಿರೋಧದ ನಡುವೆಯೂ ದೆಹಲಿ ಸೇವೆಗಳ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಒದಗಿಸುವ 2023ರ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ(ತಿದ್ದುಪಡಿ) ವಿಧೇಯಕವನ್ನು (Delhi Services Bill) ಲೋಕಸಭೆಯಲ್ಲಿ (Lok Sabha) ಗುರುವಾರ ಅಂಗೀಕರಿಸಲಾಯಿತು.
ಈ ಮಧ್ಯೆ ಪ್ರತಿಪಕ್ಷಗಳು ಲೋಕಸಭೆ ಕಲಾಪ ಬಹಿಷ್ಕರಿಸಿ ಹೊರನಡೆದವು. ಚರ್ಚೆ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿ ಅಪಘಾತಗಳ ನಿಯಂತ್ರಣಕ್ಕೆ ಗಡ್ಕರಿಗೆ ಸಿದ್ದರಾಮಯ್ಯ ಮನವಿ
आज लोक सभा में अमित शाह जी को दिल्ली वालों के अधिकार छीनने वाले बिल पर बोलते सुना। बिल का समर्थन करने के लिये उनके पास एक भी वाजिब तर्क नहीं है। बस इधर उधर की फ़ालतू बातें कर रहे थे। वो भी जानते हैं वो ग़लत कर रहे हैं।
ये बिल दिल्ली के लोगों को ग़ुलाम बनाने वाला बिल है। उन्हें…
— Arvind Kejriwal (@ArvindKejriwal) August 3, 2023
ರಾಷ್ಟ್ರರಾಜಧಾನಿ ಕುರಿತು ಯಾವುದೇ ಕಾನೂನು ಮಾಡುವ ಹಕ್ಕು ಸಂಸತ್ತಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ದೆಹಲಿಗೆ ಪ್ರತ್ಯೇಕ ಕಾನೂನು ಮಾಡುವ ಅಧಿಕಾರವನ್ನು ಸಂವಿಧಾನವೇ ನೀಡಿದೆ ಎಂದು ಹೊಸ ಮಸೂದೆಯನ್ನು ಉಲ್ಲೇಖಿಸಿ ಶಾ ಚರ್ಚೆ ವೇಳೆ ಹೇಳಿದರು.
ವಿಧೇಯಕ ಅಂಗೀಕಾರವಾಗುವುದಕ್ಕೂ ಮುನ್ನ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದ ಕೇಜ್ರಿವಾಲ್, ಈ ವಿಧೇಯಕವು ರಾಜ್ಯದ ಜನರನ್ನ ಗುಲಾಮರನ್ನಾಗಿ ಮಾಡುತ್ತದೆ ಎಂದು ಕಿಡಿಕಾರಿದ್ದರು. ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ನಿವಾರಣೆಗೆ ಎಕ್ಸ್‌ಪ್ರೆಷನ್ ಆಫ್ ಇ-ಟ್ರಸ್ಟ್ ಮೂಲಕ ಜಾಗತಿಕ ಟೆಂಡರ್: ಡಿಕೆಶಿ
ದೆಹಲಿ ಜನರ ಹಕ್ಕುಗಳನ್ನು ಕಸಿದುಕೊಳ್ಳುವ ವಿಧೇಯಕದ ಕುರಿತು ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಾತನಾಡುವುದನ್ನೂ ನಾನು ಕೇಳಿದ್ದೇನೆ. ವಿಧೇಯಕವನ್ನು ಬೆಂಬಲಿಸುವ ಒಂದೇ ಒಂದು ವಾದವೂ ಅವರಲ್ಲಿಲ್ಲ. ಇದು ಜನರನ್ನು ಅಸಹಾಯಕರನ್ನಾಗಿ ಮಾಡುತ್ತದೆ ಎಂದು ದೂರಿದ್ದರು.
ಅಲ್ಲದೇ ಈ ಹಿಂದೆ ಬಿಜೆಪಿ ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. 2014ರಲ್ಲಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದಾಗಲೂ ಈ ಭರವಸೆ ನೀಡಿದ್ದರು. ಈಗ ದೆಹಲಿ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ. ಮೋದಿ ಭರವಸೆಗಳನ್ನ ನಂಬಬೇಡಿ ಎಂದು ಕರೆ ನೀಡಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]