ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದ ದೆಹಲಿ ಸೇವಾ ಮಸೂದೆ, ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ, ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ ಮತ್ತು ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅನುಮೋದನೆ ನೀಡಿದ್ದು ಹೊಸ ಕಾನೂನುಗಳಾಗಿ ಮಾರ್ಪಟ್ಟಿವೆ.
ದೆಹಲಿ ಸೇವಾ ಕಾಯ್ದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ಬಳಿಕ ಆಪ್‌ಗೆ ಅತಿದೊಡ್ಡ ಹಿನ್ನಡೆಯಾಗಿದೆ. ಲೋಕಸಭೆಯಲ್ಲಿ (Parliament) ಬೆಂಬಲ ಇಲ್ಲದ ಹಿನ್ನೆಲೆ ರಾಜ್ಯಸಭೆಯಲ್ಲಿ ಇದನ್ನ ತಡೆಯಲು ಆಪ್ ಸರ್ಕಾರ ಬಹಳಷ್ಟು ಪ್ರಯತ್ನಿಸಿತ್ತು, ವಿರೋಧ ಪಕ್ಷಗಳ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿತ್ತು. ಆದಾಗ್ಯೂ ಮಸೂದೆಯ ಪರ 131 ಸದಸ್ಯರು ಬೆಂಬಲ ನೀಡಿದರು, ವಿರುದ್ಧವಾಗಿ 102 ಸಂಸದರು ಮತ ಚಲಾಯಿಸಿದ್ದರು. ಇದನ್ನೂ ಓದಿ: ನನಗೆ ಸದ್ಯ ಮುಸ್ಲಿಂ ಮತಗಳು ಬೇಡ: 15 ವರ್ಷದ ನಂತ್ರ ಬೇಕು ಎಂದು ಅಸ್ಸಾಂ ಸಿಎಂ ಹೇಳಿದ್ದೇಕೆ?
Advertisement
Advertisement
ರಾಷ್ಟ್ರ ರಾಜಧಾನಿಯ ಅಧಿಕಾರಿಗಳ ಅಮಾನತು ಮತ್ತು ವಿಚಾರಣೆಗಳಂತಹ ಕ್ರಮಗಳು ಕೇಂದ್ರದ ನಿಯಂತ್ರಣದಲ್ಲಿರುತ್ತವೆ ಎಂದು ಈ ಕಾನೂನು ಪ್ರಸ್ತಾಪಿಸುತ್ತದೆ. ದೆಹಲಿಯಲ್ಲಿ ಆಡಳಿತ ಅಧಿಕಾರಗಳ ಮೇಲೆ ನಿಯಂತ್ರಣ ಹೊಂದಲು ಪ್ರಯತ್ನಿಸಿದ್ದ ಆಪ್ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿತ್ತು. ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಚುನಾಯಿತ ಸರ್ಕಾರಕ್ಕೆ ಆಡಳಿತ ಮೇಲೆ ಅಧಿಕಾರ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದ ಕೋರ್ಟ್, ಕಾನೂನು ಸುವ್ಯವಸ್ಥೆ ಮತ್ತು ಭೂಮಿಯನ್ನ ಹೊರತುಪಡಿಸಿ ಎಲ್ಲ ಆಡಳಿತದ ಮೇಲೆ ನಿಯಂತ್ರಣ ಸಾಧಿಸಲು ಅಧಿಕಾರ ನೀಡಿತ್ತು. ಇದನ್ನೂ ಓದಿ: ಅಪ್ರಾಪ್ತೆಯರ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ, ಗ್ಯಾಂಗ್ ರೇಪ್‌ಗೆ 20 ವರ್ಷ ಜೈಲು – ಲೋಕಸಭೆಯಲ್ಲಿ 3 ಮಸೂದೆ ಮಂಡಿಸಿದ ಅಮಿತ್ ಶಾ
Advertisement
Advertisement
ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಮೋದಿ (Narendra Modi) ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಮಸೂದೆಯನ್ನ ಸಂಸತ್ ನಲ್ಲಿ ಇಡಲಾಗಿತ್ತು. ಮಣಿಪುರ ಸಂಘರ್ಷ ಮೇಲೆ ವಿಪಕ್ಷಗಳ ಗದ್ದಲದ ನಡುವೆ ಈ ಬಿಲ್ ಅನ್ನು ಪಾಸ್ ಮಾಡಿಕೊಳ್ಳುವಲ್ಲಿಯೂ ಕೇಂದ್ರ ಸರ್ಕಾರ ಯಶಸ್ವಿಯಾಗಿದ್ದು, ಮತ್ತೆ ದೆಹಲಿ ಆಡಳಿತದ ಮೇಲೆ ನಿಯಂತ್ರಣ ಸಾಧಿಸಿದೆ. ಇದನ್ನೂ ಓದಿ: ಪಾಕ್, ಚೀನಾಕ್ಕೆ ಠಕ್ಕರ್ – ಶ್ರೀನಗರದಲ್ಲಿ ಮೇಲ್ದರ್ಜೆಗೆರಿಸಿದ MiG- 29 ಯುದ್ಧ ವಿಮಾನ ನಿಯೋಜನೆ
ನಿಯಮ ಉಲ್ಲಂಘಿಸಿದ್ರೆ 250 ಕೋಟಿ ದಂಡ:
ವೈಯಕ್ತಿಕ ಡೇಟಾ ಸಂರಕ್ಷಣಾ ಕಾನೂನು ನಾಗರಿಕರ ಡಿಜಿಟಲ್ ಗೌಪ್ಯತೆ ಕಾಪಾಡುವ ದೇಶದ ಮೊದಲ ಕಾನೂನು ಇದಾಗಿದೆ. ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರವು ನಾಗರಿಕರ ಡೇಟಾ ಬಳಕೆಗೆ ಮಾರ್ಗಸೂಚಿಗಳನ್ನ ಹೊಂದಿಸುವ ಗುರಿಯನ್ನ ಹೊಂದಿದೆ. ವೈಯಕ್ತಿಕ ದತ್ತಾಂಶಗಳ ರಕ್ಷಣೆಯ ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ಮಾಹಿತಿ ಕಾಪಾಡುವಲ್ಲಿ ವಿಫಲರಾದರೆ ಕಂಪನಿಗಳು ದಂಡ ತೆರಬೇಕಾಗುತ್ತದೆ. ವಿವಿಧ ಲೋಪಗಳಿಗೆ 50 ಕೋಟಿಯಿಂದ 250 ಕೋಟಿ ರೂ.ವರೆಗೂ ದಂಡ ವಿಧಿಸಬಹುದು. ಡೇಟಾ ಉಲ್ಲಂಘನೆಗಾಗಿ ಎರಡಕ್ಕಿಂತ ಹೆಚ್ಚು ದಂಡದ ಪ್ರಕರಣಗಳ ನಂತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನ ನಿರ್ಬಂಧಿಸುವ ಅಧಿಕಾರವನ್ನೂ ಸರ್ಕಾರಕ್ಕೆ ನೀಡಲಿದೆ.
ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಹೊಸ ಕಾನೂನು, ಶಾಲಾ–ಕಾಲೇಜು ಪ್ರವೇಶಕ್ಕೆ, ಚಾಲನಾ ಪರವಾನಗಿ ಪಡೆಯಲು, ಸರ್ಕಾರಿ ನೌಕರಿಯ ನೇಮಕಾತಿಗೆ, ಮತದಾರರ ಪಟ್ಟಿ ಸಿದ್ಧಪಡಿಸಲು, ಆಧಾರ್ ಸಂಖ್ಯೆ ನೀಡಲು ಹಾಗೂ ವಿವಾಹ ನೋಂದಣಿ ಸಂದರ್ಭದಲ್ಲಿ ಜನನ ಪ್ರಮಾಣ ಪತ್ರವನ್ನ ಏಕೈಕ ದಾಖಲೆಯಾಗಿ ಬಳಸಲು ಈ ತಿದ್ದುಪಡಿ ಅವಕಾಶ ಮಾಡಿಕೊಡಲಿದೆ. ಕಾಯ್ದೆ ಪರಿಣಾಮವಾಗಿ ಜನನ ಮತ್ತು ಮರಣಗಳ ಕುರಿತು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ದತ್ತಾಂಶ ಸಂಗ್ರಹವಾಗಲಿದೆ. ಇದರ ಆಧಾರದಲ್ಲಿ ನಾಗರಿಕ ಸೇವೆ, ಸಾಮಾಜಿಕ ಸವಲತ್ತು, ಡಿಜಿಟಲ್ ನೋಂದಣಿಯ ಸಮರ್ಪಕ, ಪಾರದರ್ಶಕ ಜಾರಿ ಸಾಧ್ಯವಾಗಲಿದೆ.
ಜನ್ ವಿಶ್ವಾಸ್ ಕಾನೂನು ದಂಡಗಳನ್ನು ಪೆನಾಲ್ಟಿಗಳಾಗಿ ಪರಿವರ್ತಿಸುತ್ತದೆ. ಅಂದ್ರೆ ಶಿಕ್ಷೆಗಳನ್ನ ನಿರ್ವಹಿಸಲು ನ್ಯಾಯಾಲಯದ ಪ್ರಾಸಿಕ್ಯೂಷನ್ ಅಗತ್ಯವಿಲ್ಲ. ಇದು ಅನೇಕ ಅಪರಾಧಗಳಿಗೆ ಜೈಲು ಶಿಕ್ಷೆಯನ್ನು ತೆಗೆದುಹಾಕಿದೆ. ಅಲ್ಲದೇ ಪೋಸ್ಟ್ ಆಫೀಸ್ ಆಕ್ಟ್-1898ರ ಅಡಿಯಲ್ಲಿ ಎಲ್ಲಾ ಅಪರಾಧಗಳನ್ನ ತೆಗೆದುಹಾಕಲಾಗುತ್ತಿದೆ. ಯಾವುದೇ ಔಷಧಿ ಖರೀದಿಸಿದಾಗ, ಅದು ಕೆಲಸ ಮಾಡುತ್ತದೆ ಮತ್ತು ನಮಗೆ ಹಾನಿ ಮಾಡುವುದಿಲ್ಲ ಎಂದು ಸರ್ಕಾರವು ಪರಿಶೀಲಿಸಿದೆ ಎಂದು ನಾವು ಭಾವಿಸುತ್ತೇವೆ. ಆದರೆ ಪ್ರಾಸ್ತಾವಿಕ ತಿದ್ದುಪಡಿಗಳು ಗುಣಮಟ್ಟವಿಲ್ಲದ ಔಷಧಿಗಳಿಗೆ ಅವಕಾಶ ನೀಡುವುದರ ಜೊತೆಗೆ ಅಡ್ಡಪರಿಣಾಮಗಳಿಗೆ ಶಿಕ್ಷೆ ಕಡಿಮೆ ಮಾಡುತ್ತದೆ. ಇದು ದೊಡ್ಡ ಉದ್ಯಮಿಗಳಿಗೆ ಪ್ರಯೋಜನ ನೀಡುತ್ತದೆ ಆದರೆ ನಮ್ಮೆಲ್ಲರಿಗೂ ಹಾನಿ ಮಾಡುತ್ತದೆ. ಇದು ಅತಿ ಅಪಾಯಕಾರಿ ಕಾನೂನು ಎಂದು ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.
Web Stories