ನವದೆಹಲಿ: ದೆಹಲಿಯ ವಬಾನಾ ಪ್ರದೇಶದಲ್ಲಿ ನಡೆದಿದ್ದ ಶಿಕ್ಷಕಿಯೊಬ್ಬರ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಸುನಿತಾ(38) ಕೊಲೆಯಾಗಿದ್ದ ಶಿಕ್ಷಕಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಪತಿ ಮಂಜೀತ್ (38), ಆತನ ಪಾಟ್ನರ್ ಏಂಜೆಲ್ ಗುಪ್ತಾ ಮತ್ತು ಏಂಜೆಲ್ ಗುಪ್ತಾಳ ತಂದೆ ರಾಜೀವ್ ಬಂಧಿತ ಆರೋಪಿಗಳು. ಬಂಧಿತ ಏಂಜೆಲ್ ಗುಪ್ತಾ ವೃತ್ತಿಯಲ್ಲಿ ಮಾಡೆಲ್ ಆಗಿದ್ದಾಳೆ ಎಂದು ತಿಳಿದು ಬಂದಿದೆ.
Advertisement
ಆರೋಪಿ ಮಂಜೀತ್ ಹಾಗೂ ಏಂಜೆಲ್ ಗುಪ್ತಾ ಗುರ್ಗಾಂವ್ ನಲ್ಲಿ ಭೇಟಿಯಾಗಿದ್ದು, ಪರಿಚಯದಿಂದ ಇಬ್ಬರು ಪ್ರೀತಿಸುತ್ತಿದ್ದರು. ಮದುವೆಯಾಗಲು ನಿರ್ಧಾರ ಮಾಡಿದ್ದರು. ಆದರೆ ಸುನಿತಾಗೆ ಪತಿ ಮತ್ತು ಗುಪ್ತಾಳ ನಡುವಿನ ಸಂಬಂಧ ತಿಳಿದಿದೆ. ಹೀಗಾಗಿ ಗುಪ್ತಾಳ ಜೊತೆಗಿನ ಪತಿಯ ಸಂಬಂಧವನ್ನು ವಿರೋಧಿಸಿದ್ದಕ್ಕೆ ಸುನಿತಾಳನ್ನು ಕೊಲೆ ಮಾಡಿದ್ದಾರೆ ಎಂದು ಡಿಪಿಸಿ ರಜನೀಶ್ ಗುಪ್ತಾ ಹೇಳಿದ್ದಾರೆ.
Advertisement
Advertisement
ಸುನಿತಾರನ್ನು ಕೊಲೆ ಮಾಡಲು ಕಾಂಟ್ರ್ಯಾಕ್ಟ್ ಕೊಲೆಗಾರರನ್ನು ನೇಮಕ ಮಾಡಲಾಗಿತ್ತು. ಆದ್ದರಿಂದ ತನಿಖೆ ಮಾಡಲಾಗುತ್ತಿದೆ. ಈ ವೇಳೆ ಅವರ ಹೆಸರನ್ನು ಬಹಿರಂಗ ಪಡಿಸಬಾರದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement
ಹರಿಯಾಣದ ಸೋನೆಪಟ್ ನ ಸರ್ಕಾರಿ ಶಾಲೆಯಲ್ಲಿ ಸುನಿತಾ ಶಿಕ್ಷಕಿಯಾಗಿದ್ದರು. ಸೋಮವಾರ ಬೆಳಗ್ಗೆ ಸುನೀತಾ ಅವರು ಬವಾನಾದಲ್ಲಿ ತನ್ನ ಸ್ಕೂಟರ್ ಪಕ್ಕದಲ್ಲಿ ಗುಂಡಿನ ಪೆಟ್ಟು ತಿಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಅವರನ್ನು ನೋಡಿ ಮಹಿಳೆಯೊಬ್ಬರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.
ಏಂಜೆಲ್ ಗುಪ್ತಾ
ಮೊದಲಿಗೆ ಸುನಿತಾ ಕೊಲೆಗೆ ಕಾರಣವೆಂದು ತನಿಖೆ ಮಾಡುತ್ತಿದ್ದಾಗ ಇದು ದರೋಡೆಗಾಗಿ ನಡೆದಿಲ್ಲ ಎಂದು ತಿಳಿದು ಬಂದಿತ್ತು. ಏಕೆಂದರೆ ಆಕೆ ಬಿದ್ದಿದ್ದ ಜಾಗದಲ್ಲಿ ಅವರಿಗೆ ಸೇರಿದ ವಸ್ತುಗಳಾದ ನಗದು ಮತ್ತು ಫೋನ್, ಬ್ಯಾಗ್ ಸ್ಥಳದಲ್ಲಿಯೇ ಸಿಕ್ಕಿತ್ತು.
ಪತಿ ಸುನಿತಾ ಕೊಲೆಯಲ್ಲಿ ಭಾಗಿಯಾಗಿದ್ದು, ಆತನಿಗೆ ಇದ್ದ ಸಂಬಂಧದ ಬಗ್ಗೆ ಸುನಿತಾ ಕುಟುಂಬದ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಶಿಕ್ಷಕಿ ಸುನಿತಾ ಡೈರಿಯಲ್ಲಿ ಏಂಜಲ್ ಗುಪ್ತಾ ಬಗ್ಗೆ ಮಾಹಿತಿಯಿತ್ತು. ಕೊನೆಗೆ ಪೊಲೀಸರು ಅನುಮಾನಗೊಂಡು ಮಂಜೀತ್ ನನ್ನು ವಿಚಾರಣೆ ನಡೆಸಲು ಕರೆಸಿದ್ದಾರೆ. ಇತ್ತ ಮುಂಬೈನಲ್ಲಿದ್ದ ಏಂಜೆಲ್ ಕೂಡ ತನಿಖೆಗೆ ಒಳಪಡಿಸಿದ್ದಾರೆ.
ಸುನಿತಾ ಕೊಲೆಗೆ ಗುಪ್ತಾಳ ತಂದೆಯೂ ಕೂಡ ಸಾಥ್ ನೀಡಿದ್ದು, ಸದ್ಯಕ್ಕೆ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv