ನವದೆಹಲಿ: ರಸ್ತೆಯಲ್ಲಿಯೇ ಶಾಲಾ ಬಸ್ ಒಂದು ಹೊತ್ತಿ ಉರಿದಿದ್ದು, ಸುಮಾರು 30 ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿರುವ ಘಟನೆ ದೆಹಲಿಯ ಡೌಲಾ ಕುವಾನ್ ಪ್ರದೇಶದಲ್ಲಿ ನಡೆದಿದೆ.
ನಾರಾಯಣದಲ್ಲಿರುವ ಕೇಂದ್ರಿಯ ವಿದ್ಯಾಲಯ ಶಾಲೆಗೆ ಸೇರಿದ ಬಸ್ ಆಗಿದೆ. ಈ ಬಸ್ ಸುಮಾರು 30 ವಿದ್ಯಾರ್ಥಿಗಳನ್ನು ಕರೆದುಕೊಂಡು ಶಾಲೆಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಡೌಲಾ ಕುವಾನ್ ಸಮೀಪದಲ್ಲಿ ಇದ್ದಕ್ಕಿದ್ದಂತೆ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
Advertisement
Advertisement
ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ವಿದ್ಯಾರ್ಥಿಗಳು ಕಿರಿದಾದ ಮಾರ್ಗದಿಂದ ತಪ್ಪಿಸಿಕೊಂಡಿದ್ದಾರೆ. ತಾಂತ್ರಿಕ ದೋಷದಿಂದ ಬಸ್‍ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.
Advertisement
ಘಟನೆ ನಡೆದ ಸ್ಥಳಕ್ಕೆ ತಕ್ಷಣ ಮಾಹಿತಿ ತಿಳಿದು ಮೂರು ಅಗ್ನಿಶಾಮಕ ದಳಗಳು ಬಂದು ಬೆಂಕಿಯನ್ನು ನಂದಿಸಿವೆ. ಸದ್ಯ ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ಯಾರೊಬ್ಬರಿಗೆ ಅಪಾಯ ಸಂಭವಿಸಿಲ್ಲ ಮಾಧ್ಯಮಗಳು ವರದಿ ಮಾಡಿವೆ.
Advertisement
ಬಸ್‍ನ ಇಂಜಿನ್‍ನಲ್ಲಿ ತಾಂತ್ರಿಕ ದೋಷ ಉಂಟಾಗಿ ಈ ಅನಾಹುತ ಸಂಭವಿಸಿದೆ ಎಂದು ವರದಿಯಾಗಿದೆ. ಆದರೆ ಇನ್ನು ಈ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
#Visuals from Delhi: Fire breaks out in a school bus near Dhaula Kuan area, three fire tenders present at the spot. Students evacuated pic.twitter.com/GMKnhTPJWt
— ANI (@ANI) October 31, 2017
#Visuals from Delhi: Fire broke out in a school bus near Dhaula Kuan area, students were evacuated. Fire extinguished pic.twitter.com/VUl7ZPL4Nk
— ANI (@ANI) October 31, 2017