ನವದೆಹಲಿ: ಪೊಲೀಸರಿಗೆ ಗನ್ ತೋರಿಸಿದ್ದ ದೆಹಲಿ ಗಲಭೆಯ ಆರೋಪಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.
2020 ಫೆಬ್ರವರಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂಸಾಚಾರದಲ್ಲಿ ಒಬ್ಬ ವ್ಯಕ್ತಿ ಪೊಲೀಸರಿಗೆ ಗನ್ ತೋರಿಸಿ ಜೈಲುಪಾಲಾಗಿದ್ದ. ಅದೇ ಆರೋಪಿ ಇತ್ತೀಚೆಗೆ ತನ್ನ ಮನೆಗೆ ಭೇಟಿ ನೀಡಿದ್ದು, ಸ್ವಗ್ರಾಮದ ಜನರು ಆತನಿಗೆ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
Advertisement
#WATCH | Accused Shahrukh Pathan, who pointed a gun at a policeman during anti-CAA protests gets a welcome during 4-hour parole on his arrival at his residence on May 23. He got parole to meet his ailing father.
(The viral video has been confirmed by police) pic.twitter.com/Fc5HjuSdy2
— ANI (@ANI) May 27, 2022
Advertisement
ದೆಹಲಿ ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪಿ ಶಾರೂಖ್ ಪಠಾಣ್ ಇತ್ತೀಚೆಗೆ ತಮ್ಮ ಅಸ್ವಸ್ಥ ತಂದೆಯನ್ನು ಭೇಟಿ ಮಾಡಲು ಜೈಲಿನಿಂದ 4 ಗಂಟೆಗಳ ಪೆರೋಲ್ ಪಡೆದಿದ್ದ. ಮನೆಗೆ ಭೇಟಿ ನೀಡುವ ವೇಳೆ ಪಠಾಣ್‌ಗೆ ತನ್ನ ಗ್ರಾಮದ ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲಗೆ 4 ವರ್ಷ ಜೈಲು
Advertisement
ಆರೋಪಿಗೆ ರಾಜಮರ್ಯಾದೆ ನೀಡಿರುವ ವೀಡಿಯೋ ಟ್ವಿಟ್ಟರ್‌ನಲ್ಲಿ ಹರಿದಾಡಿದೆ. ಪೊಲೀಸರಿಗೆ ಗನ್ ತೋರಿಸಿ ಆರೋಪಿಯಾಗಿದ್ದರೂ ತನ್ನ ಊರಿನ ಜನರು ಆತನಿಗೆ ಹೀರೋ ಎಂಬಂತೆ ಉಪಚರಿಸಿದ್ದಾರೆ.
Advertisement
ವೀಡಿಯೋದಲ್ಲಿ ಪಠಾಣ್ ಪೊಲೀಸರ ಬೆಂಗಾವಲಿನಲ್ಲಿ ತನ್ನ ಮನೆ ಕಡೆ ನಡೆದುಕೊಂಡು ಹೋಗುತ್ತಿದ್ದು, ಊರಿನ ಜನರು ಅವನನ್ನು ಹಿಂಬಾಲಿಸುವುದನ್ನು ನೋಡಬಹುದು. ಹಲವರು ಆರೋಪಿಯನ್ನು ಹುರಿದುಂಬಿಸಿ ಸ್ವಾಗತಿಸಿದ್ದಾರೆ. ಪಠಾಣ್ ಮನೆ ಭೇಟಿಯಾದ ಕೆಲವು ಗಂಟೆಗಳ ಬಳಿಕ ಮತ್ತೆ ಜೈಲಿಗೆ ಮರಳಿದ್ದಾನೆ. ಇದನ್ನೂ ಓದಿ: ಸಾಕ್ಷ್ಯಾಧಾರಗಳ ಕೊರತೆ- ಆರ್ಯನ್ ಖಾನ್ ಸೇರಿ 6 ಮಂದಿಗೆ ಎನ್‍ಸಿಬಿ ಕ್ಲೀನ್‌ಚಿಟ್
ಪಠಾಣ್ ಗಲಭೆ, ಧಾರ್ಮಿಕ ದ್ವೇಷವನ್ನು ಉತ್ತೇಜಿಸುವುದು ಹಾಗೂ ಕೊಲೆ ಯತ್ನಗಳಂತಹ ಆರೋಪದ ಮೇಲೆ ಜೈಲು ಸೇರಿದ್ದಾನೆ. ದೆಹಲಿಯಲ್ಲಿ ನಡೆದ ಗಲಭೆಯಲ್ಲಿ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 200 ಮಂದಿ ಗಾಯಗೊಂಡಿದ್ದರು.