ನವದೆಹಲಿ: ದೆಹಲಿ ವಿಧಾನಭೆಯ 70 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು ಆಪ್ ಆರಂಭದಲ್ಲೇ ಮುನ್ನಡೆ ಸಾಧಿಸಿದೆ.
ಮತ ಎಣಿಕೆ ಆರಂಭಗೊಂಡ ಅರ್ಧಗಂಟೆಯಲ್ಲಿ 53 ಕ್ಷೇತ್ರಗಳಲ್ಲಿ ಆಪ್ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 16 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಬಾರಿ ಶೂನ್ಯ ಸಾಧಿಸಿದ್ದ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.
ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಈ ಬಾರಿಯೂ ಆಪ್ ಅಧಿಕಾರಕ್ಕೆ ಏರಲಿದೆ ಎಂದೇ ಭವಿಷ್ಯ ನುಡಿದಿತ್ತು. ಆರಂಭಿಕ ಮುನ್ನಡೆ ಗಮನಿಸುವಾಗ ಈ ಭವಿಷ್ಯವೇ ನಿಜವಾಗುವ ಸಾಧ್ಯತೆಯಿದೆ.
2015ರ ಚುನಾವಣೆಯಲ್ಲಿ ಆಪ್ 67 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಬಿಜೆಪಿ 3, ಕಾಂಗ್ರೆಸ್ ಶೂನ್ಯ ಸಂಪಾದಿಸಿತ್ತು.