ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ನಿತ್ಯ ಆರು ಅತ್ಯಾಚಾರ, ಏಳು ಕಿರುಕುಳ ಪ್ರಕರಣಗಳು ದಾಖಲಾಗುತ್ತಿವೆ. ಪ್ರಸುತ್ತ ವರ್ಷದಲ್ಲಿ ಶೇಕಡಾ 6 ರಷ್ಟು ಅತ್ಯಾಚಾರ ಪ್ರಕರಣಗಳು ಹೆಚ್ಚಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಈ ವರ್ಷದ ಮೊದಲ ಆರು ತಿಂಗಳಲ್ಲಿ 1,100ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ವರದಿಯಾಗಿದೆ. ಸಕ್ರಿಯ ನೋಂದಣಿ, ಮಹಿಳಾ ಸ್ನೇಹಿ ಸಹಾಯವಾಣಿಗಳು ಮತ್ತು ಸ್ಥಳೀಯ ಪೊಲೀಸ್ ಬೂತ್‍ಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಪೊಲೀಸರು ವರದಿ ನೀಡಿದ್ದಾರೆ. ಇದನ್ನೂ ಓದಿ: 80 ವರ್ಷಗಳ ನಂತರ ಬುಡಕಟ್ಟು ಕುಗ್ರಾಮದಲ್ಲಿ ಬೆಳಗಿತು ಸೌರಶಕ್ತಿ ಬೆಳಕು
Advertisement
Advertisement
ಅಂಕಿ ಅಂಶಗಳ ಪ್ರಕಾರ, ಈ ವರ್ಷ ಅತ್ಯಾಚಾರ ಪ್ರಕರಣಗಳಲ್ಲಿ ಶೇಕಡಾ 6 ರಷ್ಟು ಹೆಚ್ಚಳವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಗಳಲ್ಲಿ ಶೇಕಡಾ 17 ರಷ್ಟು ಏರಿಕೆಯಾಗಿದೆ. ಜನವರಿಯಿಂದ ಜುಲೈ 15 ರವರೆಗೆ 1,480 ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,244 ಪ್ರಕರಣಗಳು ದಾಖಲಾಗಿದ್ದವು.
Advertisement
ಈ ವರ್ಷ ಮಹಿಳೆಯರ ಅಪಹರಣ ಪ್ರಕರಣಗಳಲ್ಲೂ ಗಣನೀಯ ಏರಿಕೆಯಾಗಿದೆ. ಜನವರಿ ಮತ್ತು ಜುಲೈ 15ರ ನಡುವೆ 2,197 ಅಪಹರಣ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ 20 ಶೇಕಡಾ ಹೆಚ್ಚಳವಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತೆಗೆ ಪರಿಚಿತರಾಗಿದ್ದು, ಅಪರಾಧವು ಆಕೆಯ ನಿವಾಸದಲ್ಲಿ ಅಥವಾ ಸಮೀಪದ ಪ್ರದೇಶಗಳಲ್ಲಿ ನಡೆಯುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
Advertisement
ಕೊರೊನಾ ಸಾಂಕ್ರಾಮಿಕ ರೋಗದ ನಂತರ, ಕೌಟುಂಬಿಕ ಹಿಂಸಾಚಾರದ ಪ್ರಕರಣಗಳು ಮೇಲ್ಮುಖವಾಗಿದೆ. ಕಳೆದ ವರ್ಷ 2,096 ಪ್ರಕರಣಗಳಿಗೆ ಹೋಲಿಸಿದರೆ ಈ ವರ್ಷ 2,704ಕ್ಕೂ ಹೆಚ್ಚು ಅಪರಾಧಗಳು ವರದಿಯಾಗಿವೆ. ಹಿಂದಿನ ಅಂಕಿ ಅಂಶಗಳ ಪ್ರಕಾರ ಸುಮಾರು 1.22 ಪ್ರತಿಶತ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತೆಗೆ ತಿಳಿದಿರುವುದಿಲ್ಲ. ಇದನ್ನೂ ಓದಿ: ವಿಜಯಪುರದಲ್ಲಿ ವಿಸ್ಮಯಕಾರಿಯಾಗಿ ಹೆಚ್ಚುತ್ತಿದೆ ಕೃಷ್ಣ ಮೃಗಗಳ ಸಂತತಿ
ಅಲ್ಲದೆ, ಘಟನೆ ನಡೆದ 7-8 ದಿನಗಳಲ್ಲಿ ಶೇ.60ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಕಳೆದ ವರ್ಷದಿಂದ ಶೇಕಡಾ 95 ರಷ್ಟು ಅತ್ಯಾಚಾರ ಪ್ರಕರಣಗಳು ಚಾರ್ಜ್‍ಶೀಟ್ ಆಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.