ನವದೆಹಲಿ: ಉಕ್ಕಿ ಹರಿದ ಯಮುನೆಯ ರೌದ್ರಾವತಾರಕ್ಕೆ ಸಿಕ್ಕಿ ನರಳಿದ ದೆಹಲಿಯಲ್ಲಿ (Delhi) ಪ್ರವಾಹ ಪರಿಸ್ಥಿತಿ ಇನ್ನೂ ಗಂಭೀರವಾಗಿಯೇ ಮುಂದುವರಿದಿದೆ. ನದಿಯ ನೀರಿನ ಮಟ್ಟ ಇಳಿಕೆಯಾಗಿದ್ದರೂ ಗಲ್ಲಿಗಲ್ಲಿಗೂ ನುಗ್ಗಿ ಅವಾಂತರ ಸೃಷ್ಟಿಸಿರುವ ಯಮುನಾ ನದಿ ನೀರು (Yamuna Water Levels) ರಾಜಧಾನಿ ಜನರಲ್ಲಿ ಕಣ್ಣೀರು ತರಿಸಿದೆ.
ಐತಿಹಾಸಿಕ ಸ್ಥಳಗಳಾದ ಕೆಂಪು ಕೋಟೆ, ರಾಷ್ಟ್ರಪಿತ ಮಹಾತ್ಮಗಾಂಧಿ ಸಮಾಧಿ ಸ್ಥಳ ರಾಜ್‌ಘಾಟ್, ಸುಪ್ರೀಂ ಕೋರ್ಟ್ ಅಂಗಳದ ಜೊತೆಗೆ ಸಿಎಂ ನಿವಾಸ ಸುತ್ತುವರಿದ್ದ ಪ್ರವಾಹದ ನೀರಿನಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಇದನ್ನೂ ಓದಿ: ಪರಿಹಾರ ಸಿಕ್ಕರೆ ಮಗನ ಕಾಲೇಜು ಶುಲ್ಕ ಕಟ್ಟಬಹುದು ಅಂತ ಬಸ್‌ಗೆ ಅಡ್ಡ ಬಂದ ಮಹಿಳೆ ಅಪಘಾತದಲ್ಲಿ ಸಾವು
ಭಾನುವಾರ ಬೆಳಗ್ಗೆಯಿಂದ ತಡರಾತ್ರಿ ವರೆಗೂ 206.02 ಮೀಟರ್‌ನಷ್ಟಿದ್ದ ಯಮುನಾ ನೀರಿನ ಮಟ್ಟ ಸೋಮವಾರ ಬೆಳಗ್ಗೆ 7 ಗಂಟೆ ವೇಳೆಗೆ 205.48ಕ್ಕೆ ಇಳಿಕೆಯಾಗಿದೆ. ಯಮುನಾ ನದಿಯ ನೀರಿನ ಮಟ್ಟ ಸದ್ಯ ಒಂದು ಮೀಟರ್‌ನಷ್ಟು ಕಡಿಮೆಯಾಗಿದ್ದರೂ ಅಪಾಯದ ಮಟ್ಟ ಮೀರಿಯೇ ಹರಿಯುತ್ತಿದೆ. ಹರಿಯಾಣದ ಕೆಲವು ಪ್ರದೇಶಗಳಲ್ಲಿ ಯಮುನಾ ನದಿಯ ನೀರಿನ ಮಟ್ಟದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೆಲೆಸಿರುವ ಜನರು ರಾಜ್ಯ ಸರ್ಕಾರ ಸ್ಥಾಪಿಸಿದ ಕ್ಯಾಂಪ್‌ಗಳಲ್ಲೇ ಉಳಿಯುವಂತೆ ಸೂಚನೆ ಕೊಟ್ಟಿದೆ. ದೆಹಲಿಯಲ್ಲಿ ನೀರಿನ ಮಟ್ಟ ಸ್ವಲ್ಪ ಪ್ರಮಾಣದಲ್ಲಿ ತಗ್ಗಿರೋದ್ರಿಂದ ಸಾರಿಗೆ ಸೇವೆಗಳಿಗೆ ಕೊಂಚ ಬಿಡುವು ನೀಡಲಾಗಿದೆ. ಭಾರೀ ಪ್ರಮಾಣದ ಸರಕು ವಾಹನಗಳಿಗೆ ಸಿಂಗು ಬಾರ್ಡರ್‌ನಿಂದ ನಿರ್ಭಂಧಿಸಲಾಗಿದೆ.
ಅಲ್ಲದೆ ದೆಹಲಿ ಸರ್ಕಾರದ ಸಾರಿಗೆ ಇಲಾಖೆ ಹೊರಡಿಸಿದ ಆದೇಶದಲ್ಲಿ, ಹರಿಯಾಣ, ಹಿಮಾಚಲ ಪ್ರದೇಶ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡದಿಂದ ದೆಹಲಿಯ ISBT ಕಾಶ್ಮೀರಿ ಗೇಟ್‌ಗೆ ಬರುವ ಅಂತಾರಾಜ್ಯ ಬಸ್‌ಗಳು ಸಿಂಗು ಗಡಿಯನ್ನು ಮಾತ್ರ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದೆ. ಇದನ್ನೂ ಓದಿ: 46 ವರ್ಷದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]