ನವದೆಹಲಿ: ಉಗ್ರರು ದಾಳಿಯ ಸಂದೇಶ ಬಂದ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದೆ.
ಭಯೋತ್ಪಾದಕ ಸಂಘಟನೆ ತೆಹ್ರಿಕ್-ಎ-ತಾಲಿಬಾನ್ (ಭಾರತೀಯ ಸೆಲ್) ಕಳುಹಿಸಿರುವ ಅನಾಮಧೇಯ ಇಮೇಲ್ ಕುರಿತು ಉತ್ತರ ಪ್ರದೇಶ ಪೊಲೀಸರು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ರಾಷ್ಟ್ರ ರಾಜಧಾನಿಯಲ್ಲಿ ಭದ್ರತಾ ಎಚ್ಚರಿಕೆ ನೀಡಲಾಗಿದೆ.
Advertisement
ತೆಹ್ರಿಕ್-ಎ-ತಾಲಿಬಾನ್‌ನಿಂದ ಅನಾಮಧೇಯ ಇಮೇಲ್‌ಗಳು ಬಂದಿರುವ ಬಗ್ಗೆ ಕೆಲವರು ಉತ್ತರ ಪ್ರದೇಶ ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ತಿಳಿಯುತ್ತಲೇ ಯುಪಿ ಪೊಲೀಸರು ದೆಹಲಿ ಪೊಲೀಸರಿಗೆ ಮಾಹಿತಿ ನಿಡಿ ಎಚ್ಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಿಕಂದರಾಬಾದ್‍ನಲ್ಲಿ ಟಿಂಬರ್ ಗೋಡಾನ್‍ಗೆ ಬೆಂಕಿ- 11 ಮಂದಿ ಸಜೀವ ದಹನ
Advertisement
Advertisement
ಮಾರುಕಟ್ಟೆಯನ್ನು ಮುಚ್ಚಲು ಹಾಗೂ ಎಚ್ಚರವಾಗಿರಲು ಪೊಲೀಸರಿಗೆ ತಾಲಿಬಾನ್ ಕಡೆಯಿಂದ ಬೆದರಿಕೆ ಸಂದೇಶ ಬಂದಿರುವುದಾಗಿ ಸರೋಜಿನಿ ನಗರ ಮಿನಿ ಮಾರುಕಟ್ಟೆ ವರ್ತಕ ಸಂಘದ ಅಧ್ಯಕ್ಷ ಅಶೋಕ್ ರಾಂಧವ್ ತಿಳಿಸಿದ್ದಾರೆ. ಆದರೆ ದೆಹಲಿ ಪೊಲೀಸರು ಮಾರುಕಟ್ಟೆಯನ್ನು ಮುಚ್ಚುವ ಕುರಿತು ಯಾವುದೇ ಅಧಿಕೃತ ಆದೇಶ ನೀಡಿಲ್ಲ. ಇದನ್ನೂ ಓದಿ: ಸತತ 2ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ
Advertisement
ಈ ಬಗ್ಗೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು, ಸರೋಜಿನಿ ನಗರ ಮಾರುಕಟ್ಟೆಯನ್ನು ಮುಚ್ಚಿಸುವ ಅಗತ್ಯವಿಲ್ಲ. ಇಮೇಲ್ ಕಳುಹಿಸಿರುವ ವ್ಯಕ್ತಿಯನ್ನು ಹುಡುಕಲಾಗುತ್ತಿದೆ. ಹಾಗೂ ಇಮೇಲ್ ಬಗೆಗಿನ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.