ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ವೇಳೆ ಹಿಂದೂಗಳ ಅಂಗಡಿಗಳನ್ನು ಮುಸ್ಲಿಮರು ರಕ್ಷಿಸುವ ಮೂಲಕ ಸಂಕಷ್ಟದಲ್ಲಿದ್ದ ಮುಸ್ಲಿಮರ ಜೀವಗಳನ್ನು ಹಿಂದೂಗಳು ಉಳಿಸುವ ಮೂಲಕ ಸಂಘರ್ಷದಲ್ಲೂ ಪರಸ್ಪರ ಕೋಮು ಸೌಹಾರ್ದತೆ ಮೆರೆದಿದ್ದಾರೆ.
ಅಶೋಕ ನಗರದ ಬಡೀ ಮಸೀದಿಗೆ ದುಷ್ಕರ್ಮಿಗಳು ಬೆಂಕಿ ಸೋಮವಾರ ಬೆಂಕಿ ಹಚ್ಚಿದ್ದರು ಈ ವೇಳೆ ಮಸೀದಿಗೆ ಹೊಂದಿಕೊಂಡಂತಿದ್ದ ಸುಮಾರು ಹತ್ತಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ವ್ಯಾಪಿಸಿತ್ತು. ಈ ವೇಳೆ ಡ್ಯಾನಿಶ್ ಎಂಬವರು ಬೆಂಕಿ ಹೊತ್ತಿದ ಮನೆ ಒಳಗೆ ತೆರಳಿ ಮನೆಯಲ್ಲಿದ್ದ ಮಹಿಳೆ ಮಕ್ಕಳನ್ನು ರಕ್ಷಿಸಿದ್ದರು. ಇದಲ್ಲದೇ ಉದ್ರಿಕ್ತ ಗುಂಪುಗಳಿಂದ ಮೂವತ್ತಕ್ಕೂ ಹೆಚ್ಚು ಮುಸ್ಲಿಮರನ್ನು ಸುನೀಲ್ ಶರ್ಮಾ ಮತ್ತು ಜಿತೇಂದ್ರ ಎಂಬ ಸ್ಥಳೀಯರು ತಮ್ಮ ಮನೆಯಲ್ಲಿಟ್ಟುಕೊಂಡು ರಕ್ಷಿಸಿದ್ದರು. ಇದನ್ನೂ ಓದಿ: ದೆಹಲಿ ಹಿಂಸಾಚಾರದಲ್ಲಿ ಎರಡು ಕೋಮುಗಳ ಶಾಲೆಗೆ ಪರಸ್ಪರ ಬೆಂಕಿ
Advertisement
Advertisement
ಈ ಘಟನೆಗೂ ಮುನ್ನ ಉದ್ರಿಕ್ತ ಗುಂಪುಗಳನ್ನು ಕಂಡ ಸ್ಥಳೀಯ ಆಟೋ ಚಾಲಕ ಖುರ್ಷಿದ್ ಬಡೇ ಮಸೀದಿ ವ್ಯಾಪ್ತಿಯಲ್ಲಿದ್ದ ಬಹುತೇಕ ಹಿಂದೂಗಳ ಅಂಗಡಿಗಳನ್ನು ಬಂದ್ ಮಾಡಿಸಿದ್ದರು. ಮುಂದಾಗಬಹುದಾದ ಅನಾಹುತವನ್ನು ವಿವರಿಸಿ ಅಲ್ಲಿಂದ ತೆರಳುವಂತೆ ಎಚ್ಚರಿಕೆ ನೀಡಿದ್ದರು. ಖುರ್ಷಿದ್ ಮಾತು ಕೇಳಿದ ಸ್ಥಳೀಯ ಅಂಗಡಿಗಳ ಮಾಲೀಕರು, ಅಂಗಡಿ ಬಂದ್ ಮಾಡಿ ಅಲ್ಲಿಂದ ತೆರಳಿದ್ದರು. ಈ ವೇಳೆಗೆ ಆಗಮಿಸಿದ್ದ ದುಷ್ಕರ್ಮಿಗಳ ಗುಂಪು ಬಡೇ ಮಸೀದಿ ಸೇರಿ ಸುಮಾರು ಹತ್ತು ಮನೆಗೆ ಬೆಂಕಿ ಇಟ್ಟಿದ್ದರು. ಈ ವೇಳೆ ಗೆ ಆಟೋ ಚಾಲಕ ಜೀತೆಂದ್ರ ಮನೆಯಲ್ಲಿ ಉಳಿದುಕೊಂಡು ಜೀವ ಉಳಿಸಿಕೊಂಡಿದ್ದರು. ಇದನ್ನೂ ಓದಿ: ನಾಗರಿಕತ್ವ ಕೊಡ್ತಿವಿ ಎಂದು ಮನೆಗೆ ಪೆಟ್ರೋಲ್ ಬಾಂಬ್ ಎಸೆದ್ರು- ಯೋಧನ ಕುಟುಂಬದ ಕಣ್ಣೀರು
Advertisement
Advertisement
ಬಡೀ ಮಸೀದಿಯ ಮಿನಾರ್ ನಲ್ಲಿದ್ದ ಹಸಿರು ಬಾವುಟ ಕಿತ್ತು ಕೇಸರಿ ಬಾವುಟ ಹಾರಿಸಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.