ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ನಮನ

Public TV
1 Min Read
modi delhi

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಸಾವನ್ನಪಿದ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಪಾಲಂ ವಾಯುನೆಲೆಯಲ್ಲಿ ಅಂತಿಮ ಸಲ್ಲಿಸಿದ್ದಾರೆ.

ಜಮ್ಮುವಿನಿಂದ ಹೋರಾಟ ಯೋಧರ ಪಾರ್ಥಿಕ ಶರೀರಗಳು ನವದೆಹಲಿಗೆ ತಲುಪಿದ್ದು, ಪ್ರಧಾನಿ ಮೋದಿ ಅವರು 1 ನಿಮಿಷ ಮೌನಾಚರಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಈ ವೇಳೆ ಸೇನಾ ಬ್ಯಾಂಡ್‍ಗಳ ಮೂಲಕವೂ ನಮನ ಸಲ್ಲಿಸಲಾಯಿತು. ಈ ವೇಳೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹಾಗೂ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಹಾಜರಿದ್ದರು.

ನವದೆಹಲಿಯಲ್ಲಿ ಯೋಧರಿಗೆ ಅಂತಿಮ ಸಲ್ಲಿಸದ ಬಳಿಕ ಅಲ್ಲಿಂದ ಎರಡು ವಿಶೇಷ ವಿಮಾನಗಳಲ್ಲಿ ದಾಳಿಯಲ್ಲಿ ವೀರ ಮರಣ ಹೊಂದಿದ ಕರ್ನಾಟಕದ ಸೈನಿಕರು ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡಿನ ಯೋಧರ ಪಾರ್ಥಿವ ಶರೀರಗಳನ್ನು ತವರಿಗೆ ತರಲಾಗುತ್ತದೆ. ದೆಹಲಿಗೆ ಹತ್ತಿರವಿರುವ ಯೋಧರ ಸ್ವಗ್ರಾಮಗಳಿಗೆ ಪಾರ್ಥಿಕ ಶರೀರಗಳನ್ನು ರಸ್ತೆ ಮೂಲಕವೇ ಸಾಗಿಸಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.

ದೆಹಲಿಯಿಂದ ಏರ್ ಲಿಫ್ಟ್ ಆದ ಬಳಿಕ ಮಧ್ಯರಾತ್ರಿ 1.30 ರ ವೇಳೆ ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಗುರು ಅವರ ಪಾರ್ಥಿವ ಶರೀರ ತಲುಪುವ ಸಾಧ್ಯತೆಯಿದೆ. ಬೆಂಗಳೂರಿನಿಂದ ಸೇನಾ ಟ್ರಕ್ ಮೂಲಕ ಮಂಡ್ಯದ ಕೆಎಂ ದೊಡ್ಡಿಗೆ ತರಲಾಗುತ್ತದೆ. ಯೋಧ ಗುರು ಅವರ ಸ್ವಗ್ರಾಮದಲ್ಲಿ ನಾಳೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *