ನವದೆಹಲಿ: ಪೊಲೀಸರು ಸಂಚಾರಿ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಏನೆಲ್ಲಾ ಸರ್ಕಸ್ ಮಾಡಲ್ಲಾ ಹೇಳಿ? ಸಾಮಾಜಿಕ ಮಾಧ್ಯಮಗಳಲ್ಲೂ ಅಗತ್ಯಕರ ಸಂದೇಶಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಟ್ರಾಫಿಕ್ ನಿಯಮ ಉಲ್ಲಂಘಿಸುವ ಪ್ರಯಾಣಿಕರಿಗಾಗಿ ದೆಹಲಿ ಪೊಲೀಸರು ಒಂದು ಮೀಮ್ ಅನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿಕೊಂಡಾದರೂ ಟ್ರಾಫಿಕ್ ರೂಲ್ಸ್ ಪಾಲನೆ ಮಾಡ್ರಪ್ಪಾ ಎಂದು ಬೇಡಿಕೊಂಡಿದ್ದಾರೆ.
ದೆಹಲಿ ಪೊಲೀಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮೀಮ್ ಒಂದನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಟ್ರಾಫಿಕ್ ರೂಲ್ಸ್‌ಗಳನ್ನು ಉಲ್ಲಂಘಿಸುವ ಪ್ರಯಾಣಿಕರಿಗಾಗಿ ಸಂದೇಶ ನೀಡಿದ್ದಾರೆ.
Advertisement
Who’s that traffic violator?
Poo likes attention, so do the traffic lights !#RoadSafety#SaturdayVibes pic.twitter.com/ZeCJfJigcb
— Delhi Police (@DelhiPolice) July 16, 2022
Advertisement
ಮೀಮ್‌ನಲ್ಲೇನಿದೆ?
ದೆಹಲಿ ಪೊಲೀಸರು ಹಂಚಿಕೊಂಡಿರುವ ಸಣ್ಣ ಮೀಮ್ ಕ್ಲಿಪ್‌ನಲ್ಲಿ ಕಾರೊಂದು ಅತ್ಯಂತ ವೇಗವಾಗಿ ಹೋಗುತ್ತದೆ. ಬಳಿಕ ಟ್ರಾಫಿಕ್ ಸಿಗ್ನಲ್‌ನ ಕೆಂಪು ದೀಪದಲ್ಲಿ ನಟಿ ಕರೀನಾ ಕಪೂರ್‌ನ `ಕಬಿ ಖುಷಿ ಕಬಿ ಗಂ’ ಚಿತ್ರದ ಫೇಮಸ್ ಡೈಲಾಗ್ ಹೇಳುವ ವೀಡಿಯೋ ಪ್ಲೇ ಆಗುತ್ತದೆ. “ಕೋನ್ ಹೇ ಯೆ? ಜಿಸ್‌ನೆ ದುಬಾರಾ ಮುಡ್ಕೆ ಮುಜೆ ನಹಿ ದೇಖಾ”(ಯಾರದು? ನನ್ನನ್ನು ಮತ್ತೆ ತಿರುಗಿ ನೋಡಲೇ ಇಲ್ಲದವರು) ಎಂದು ಕರೀನಾ ಹೇಳುತ್ತಾಳೆ. ಇದನ್ನೂ ಓದಿ: ರೇವಡಿ ಹಂಚಿ ಮತ ಗಳಿಸುವ ಸಂಸ್ಕೃತಿಯನ್ನು ತೊಡೆದುಹಾಕಬೇಕು: ಮೋದಿ
Advertisement
ಈ ಮೀಮ್‌ನೊಂದಿಗೆ ಸಂದೇಶವೊಂದನ್ನು ಬರೆದಿರುವ ದೆಹಲಿ ಪೊಲೀಸರು, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಿರುವವರು ಯಾರು? ಕರೀನಾ ನಿಮ್ಮ ಗಮನ ಸೆಳೆಯಲು ಬಯಸುತ್ತಾಳೆ. ದಯವಿಟ್ಟು ಟ್ರಾಫಿಕ್ ರೂಲ್ಸ್ ಅನ್ನು ಫಾಲವ್ ಮಾಡಿ ಎಂದಿದ್ದಾರೆ.
Advertisement
Drive with a seatbelt on to avoid seeing the stars and the challan.⚠️#DelhiPolice #DelhiTrafficPolice #DilKiPolice pic.twitter.com/dQH2Hh0k8w
— Delhi Traffic Police (@dtptraffic) July 12, 2022
ಜುಲೈ 12 ರಂದು ದೆಹಲಿ ಪೊಲೀಸರು ಪ್ರಯಾಣಿಕರ ಜಾಗೃತಿಗಾಗಿ ಇನ್ನೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಅದರಲ್ಲಿ ನಾಸಾ ಇತ್ತೀಚೆಗೆ ತೆಗೆದ ಆಕಾಶದ ಅತ್ಯಂತ ಹಳೆಯ ಫೋಟೋವನ್ನು ಹಾಕಿ, ಅದರ ಪಕ್ಕದಲ್ಲಿ ಪ್ರಯಾಣಿಕನೊಬ್ಬ ಕಾರಿನ ಸೀಟ್‌ಬೆಲ್ಟ್ ಹಾಕುವುದನ್ನು ತೋರಿಸಲಾಗಿತ್ತು. ಅತ್ಯಂತ ಆಳವಾದ ಹಾಗೂ ತೀಕ್ಷ್ಣವಾದ ಬ್ರಹ್ಮಾಂಡದ ಚಿತ್ರ ಹಾಗೂ ಅತ್ಯಂತ ಆಳವಾದ ಹಾಗೂ ತೀಕ್ಷ್ಣವಾದ ಜವಾಬ್ದಾರಿಯುತ ನಾಗರಿಕನ ಚಿತ್ರ ಎಂದು ಫೋಟೋಗಳ ಮೇಲೆ ಬರೆಯಲಾಗಿತ್ತು. ಇದರೊಂದಿಗೆ ಸಂದೇಶ ನೀಡಿದ ದೆಹಲಿ ಪೊಲೀಸರು, ನಕ್ಷತ್ರಗಳನ್ನು ನೋಡುವುದನ್ನು ತಪ್ಪಿಸಲು ಸೀಟ್ ಬೆಲ್ಟ್‌ಗಳನ್ನು ಹಾಕಿಕೊಳ್ಳಿ ಎಂದು ಬರೆದಿದ್ದರು. ಇದನ್ನೂ ಓದಿ: ಸುದ್ದಿಗಳಿಗೆ ಗೂಗಲ್, ಫೇಸ್‌ಬುಕ್ ಪಾವತಿಸಬೇಕು – ಹೊಸ ಕಾನೂನಿಗೆ ಸರ್ಕಾರ ಯೋಜನೆ