ತಬ್ಲಿಘಿ ಜಮಾತ್ ಮುಖ್ಯಸ್ಥನಿಗೆ 26 ದಾಖಲೆ ಕೇಳಿ ಪೊಲೀಸರಿಂದ ನೋಟಿಸ್

Public TV
4 Min Read
maulana saad

– ಕೊರೊನಾ ಉಲ್ಬಣಕ್ಕೆ ಕಾರಣವಾದ ಜಮಾತ್ ಸಭೆ

ನವದೆಹಲಿ: ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಮರ್ಕಜ್ ಮಸೀದಿಯಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮವು ದೇಶದಲ್ಲಿ ಕೊರೊನಾ ವೈರಸ್ ಉಲ್ಬಣಗೊಳಿಸಿದೆ. ಕಳೆದ ಎರಡು ದಿನಗಳಲ್ಲಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದ 400ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಇಡೀ ದೇಶವೇ ಆತಂಕಕ್ಕೆ ಸಿಲುಕಿದೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಯಾವುದೇ ಸಾಮಾಜಿಕ ಮತ್ತು ಧಾರ್ಮಿಕ ಸಭೆ ನಡೆಸದಂತೆ ಪದೇ ಪದೇ ವಿನಂತಿಸಿಕೊಂಡಿತ್ತು. ಅದಾದ ನಂತರವೂ ತಬ್ಲಿಘಿ ಜಮಾತ್ ಸಭೆಯನ್ನು ಮುಂದುವರಿಸಿತ್ತು. ಇದೇ ಈಗ ಅನೇಕ ಜನರ ಜೀವಕ್ಕೆ ಕುತ್ತು ತಂದಿದೆ. ಇದನ್ನೂ ಓದಿ: ದೆಹಲಿಯ ಜಮಾತ್ ಸಭೆಯಿಂದ ದೇಶಾದ್ಯಂತ ಕೊರೊನಾ ಹರಡಿದ್ದು ಹೇಗೆ?

Tablighi Jamaat meet C

ಇಡೀ ವಿವಾದದ ಕೇಂದ್ರ ಬಿಂದುವಾಗಿರುವ ತಬ್ಲಿಘಿ ಜಮಾತ್ ಮುಖ್ಯಸ್ಥ ಅಮೀರ್ ಮೌಲಾನಾ ಮೊಹಮ್ಮದ್ ಸಾದ್ ಕಂದ್ಲಾವಿ ಆಗಿದ್ದಾರೆ. ಆದರೆ ಆರೋಪಿಯು ಪರಾರಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಈ ಸಂಬಂಧ ದೆಹಲಿ ಪೊಲೀಸರು ಶುಕ್ರವಾರ 26 ಪ್ರಶ್ನೆಗಳ ನೋಟಿಸ್ ಕಳುಹಿಸಿದ್ದಾರೆ. ಮತ್ತೊಂದೆಡೆ ಜಮಾತ್‍ನ ಸದಸ್ಯರು ದೇಶಾದ್ಯಂತ ಹಲವಾರು ಆಸ್ಪತ್ರೆಗಳಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ವೈದ್ಯರು, ವೈದ್ಯಕೀಯ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿರುವುದು ವರದಿಯಾಗಿದೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಅರೆನಗ್ನವಾಗಿ ತಬ್ಲಿಘಿಗಳ ಓಡಾಟ, ದಾದಿಯರೊಂದಿಗೆ ಅಶ್ಲೀಲ ವರ್ತನೆ

ಯಾವ ದಾಖಲೆ?:
1. ನಿಮ್ಮ ಸಂಸ್ಥೆಯ ಪೂರ್ಣ ಹೆಸರು, ವಿಳಾಸ ಮತ್ತು ನೋಂದಣಿ ವಿವರ ನೀಡಿ.
2. ನಿಮ್ಮ ಸಂಸ್ಥೆಯ ಪದಾಧಿಕಾರಿಗಳ ವಿವರ (ಹೆಸರು, ತಂದೆಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಹುದ್ದೆ)ಗಳ ಮಾಹಿತಿ ಕೊಡಬೇಕು. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಕ್ವಾರಂಟೈನ್‍ಗಳಿಂದ ನಮಾಜ್
3. ಮರ್ಕಜ್ ಮಸೀದಿ ನಿರ್ವಹಣಾ ಸಮಿತಿಯಲ್ಲಿರುವ ವ್ಯಕ್ತಿಗಳ ವಿವರ (ಹೆಸರು, ತಂದೆಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಹುದ್ದೆ) ಬೇಕು.

Nizamuddin Tablighi Jamaat 1

4. ಕಳೆದ 3 ವರ್ಷಗಳಿಂದ ನಿಮ್ಮ ಸಂಸ್ಥೆ ಸಲ್ಲಿಸಿದ ಆದಾಯ ತೆರಿಗೆ ವಿವರ ನೀಡಿ. ಇದನ್ನೂ ಓದಿ: ದೇಶದಲ್ಲಿ 2,400ಕ್ಕೂ ಹೆಚ್ಚು ಜನರಿಗೆ ಕೊರೊನಾ – ಇನ್ನೆರಡು ವಾರದಲ್ಲೇ 10,000 ತಲುಪೋ ಸಾಧ್ಯತೆ
5. ನಿಮ್ಮ ಸಂಸ್ಥೆಯ ಕೊನೆಯ ಒಂದು ವರ್ಷದ ಪ್ಯಾನ್ ಸಂಖ್ಯೆಗಳು, ಬ್ಯಾಂಕ್ ಖಾತೆ ಸಂಖ್ಯೆಗಳು ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ ಮಾಹಿತಿ ಕೊಡಿ.
6. ನಿಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರ ಪಟ್ಟಿ (ಹೆಸರು, ತಂದೆಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಹುದ್ದೆ) ಮಾಹಿತಿ ಕೊಡಿ.
7. 2019ರ ಜನವರಿ 1ರಿಂದ ಇಲ್ಲಿಯವರೆಗೆ ನಿಮ್ಮ ಸಂಸ್ಥೆ ಆಯೋಜಿಸಿರುವ ಧಾರ್ಮಿಕ ಕೂಟಗಳ ಸಂಖ್ಯೆ, ಮರ್ಕಜ್‍ನಲ್ಲಿ ಎಷ್ಟು ದಿನ ಸಭೆ ನಡೆಯಿತು. ಪ್ರತಿ ದಿನ ಎಷ್ಟು ಜನ ಹಾಜರಾಗಿದ್ದರು ಎಂಬ ಮಾಹಿತಿ ನೀಡಿ.
8. ಮರ್ಕಜ್‍ಗಾಗಿ ಬಳಸಲಾಗುವ ಆವರಣದ ಸೈಟ್ ಯೋಜನೆ ಹೇಗಿತ್ತು ಎಂದು ತಿಳಿಸಿ.

Nizamuddin Tablighi Jamaat

9. ಸಿಸಿಟಿವಿ ಅಳವಡಿಸಲಾಗಿದೆಯೇ? ಹೌದು ಎಂದಾದರೆ ಕ್ಯಾಮೆರಾಗಳ ಸಂಖ್ಯೆ ಮತ್ತು ಎಲ್ಲಿ ಅಳವಡಿಸಲಾಗಿತ್ತು ಎಂಬ ಬಗ್ಗೆ ವಿವರಗಳನ್ನು ನೀಡಿ. ಮುಂದಿನ ಆದೇಶದವರೆಗೆ ಡಾಟಾವನ್ನು ಸುರಕ್ಷಿತವಾಗಿಡಬೇಕು.
10. ಈ ಪ್ರಕರಣದಲ್ಲಿ ಧಾರ್ಮಿಕ ಸಭೆ ನಡೆಸಲು ದೆಹಲಿ ಪೊಲೀಸರು ಅಥವಾ ಇತರ ಪ್ರಾಧಿಕಾರದಿಂದ ಯಾವುದೇ ಅನುಮತಿಯನ್ನು ಕೋರಲಾಗಿತ್ತೇ? ಹೌದು ಎಂದಾದರೆ ಅದರ ಪ್ರಮಾಣೀಕೃತ ನಕಲನ್ನು ಒದಗಿಸಿ.
11. ಈ ಪ್ರಕರಣದಲ್ಲಿ ಧಾರ್ಮಿಕ ಸಭೆ ನಡೆಸಲು ದೆಹಲಿ ಪೊಲೀಸರು, ಯಾವುದೇ ಸರ್ಕಾರಿ ಪ್ರಾಧಿಕಾರವು ಲಿಖಿತ ಅಥವಾ ಮೌಖಿಕವಾಗಿ ನೀಡಿದ ಮಾರ್ಗಸೂಚಿಗಳು ಇದೇಯಾ? ಹೌದು ಎಂದಾದರೆ ಅದರ ಪ್ರಮಾಣೀಕೃತ ನಕಲನ್ನು ನೀಡಿ.
12. ಜಮಾತ್ ಸಭೆ ನಡೆಸಲು ಪೊಲೀಸರು ಸೇರಿದಂತೆ ಯಾವುದೇ ಸರ್ಕಾರಿ ಪ್ರಾಧಿಕಾರದ ಜೊತೆಗೆ ಪತ್ರ ವ್ಯವಹಾರ ನಡೆಸಿದ್ದರೆ ದಾಖಲೆ ನೀಡಿ.

Tablighi Jamaat meet

13. ಇಂಡಿಯನ್ ಎವಿಡೆನ್ಸ್ ಕಾಯ್ದೆ ಪ್ರಮಾಣಪತ್ರದ ಜೊತೆಗೆ ಜಮಾತ್ ಸಭೆಯಲ್ಲಿ ಭಾಗವಹಿಸಿದ ಯಾವುದೇ ವ್ಯಕ್ತಿಯಿಂದ ಆಡಿಯೋ ಅಥವಾ ವಿಡಿಯೋ ರೆಕಾರ್ಡಿಂಗ್ ದಾಖಲೆ ನೀಡಿ.
14. 2020ರ ಮಾರ್ಚ್ 12ರ ನಂತರ ಮರ್ಕಜ್‍ನಲ್ಲಿ ಭಾಗವಹಿಸಿದ್ದವರ ಹೆಸರು, ತಂದೆಯ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ ನೀಡಬೇಕು.
15. ಮಾರ್ಚ್ 12ರ ನಂತರ ಸಭೆಯಲ್ಲಿ ಭಾಗವಹಿಸಿದ್ದವರ ಬಗ್ಗೆ ದಾಖಲಿಸಿಕೊಂಡ ಮೂಲ ರೆಜಿಸ್ಟರ್ ಗಳು, ಡೇಟಾ, ದಾಖಲೆಗಳು ನೀಡಿ.
16. ಸಭೆಯಲ್ಲಿ ಯಾವುದೇ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾಗಿದ್ದರೇ? ಹೌದು ಎನ್ನುವುದಾದರೆ ವಿವರಗಳನ್ನು ಒದಗಿಸಿ.
17. ಮಾರ್ಚ್ 12ರ ನಂತರ ಸಭೆಯನ್ನು ಮುಂದೂಡಿದ್ಯಾಕೆ?
18. ಸೆಕ್ಷನ್ 144 ಜಾರಿಯಾದ ನಂತರ ಅಂದ್ರೆ ಮಾರ್ಚ್ 24ರಂದು ಸಭೆ ನಡೆಸಿದ್ಯಾಕೆ?
19. ಮಾರ್ಚ್ 12ರಿಂದ ಇಲ್ಲಿಯವರೆಗೆ ಜಮಾತ್ ಸಭೆ ನಿರ್ವಹಣೆ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದ್ದ ಸಿಬ್ಬಂದಿ, ಸ್ವಯಂಸೇವಕರು, ಪಾರ್ಕಿಂಗ್ ಅಟೆಂಡೆಂಟ್‍ಗಳ ಹೆಸರು, ತಂದೆಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಹುದ್ದೆಯ ವಿವರವನ್ನು ಒದಗಿಸಿ.
20. ಮಾರ್ಚ್ 12ರ ನಂತರ ಸಭೆಯಲ್ಲಿ ಸೇರಿದ್ದ ಭಾರತೀಯರು ಮತ್ತು ವಿದೇಶಿಯರ ದಿನಾಂಕವಾರು ಪಟ್ಟಿಯನ್ನು ಒದಗಿಸಿ.
21. ಮಾರ್ಚ್ 12ರ ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಕರೆದೊಯ್ಯಲ್ಪಟ್ಟ ಜನರ ಪಟ್ಟಿಯನ್ನು ನೀಡಿ.

Tablighi Jamaat meet A

22. ಅನಾರೋಗ್ಯಕ್ಕೆ ತುತ್ತಾಗಿದ್ದವರನ್ನು ಚಿಕಿತ್ಸೆಗಾಗಿ ಮಸೀದಿ, ಅತಿಥಿ ಗೃಹ ಸೇರಿದಂತೆ ಯಾವುದೇ ಪ್ರದೇಶಕ್ಕೆ ಕರೆದೊಯ್ದಿದ್ದರೆ ಮಾಹಿತಿ ನೀಡಿ.
23. ಸಭೆಯಲ್ಲಿ ಭಾಗವಹಿಸಿದ ನಂತರ ಮೃತಪಟ್ಟವರ ವಿವರ ಸಲ್ಲಿಸಿ.
24. ಜಮಾತ್ ಸಭೆಗೆ ಸಂಬಂಧಿಸಿದ ಯಾರಿಗಾದರೂ ನೀಡಲಾದ ಕಫ್ರ್ಯೂ ಪಾಸ್‍ಗಳ ವಿವರಗಳನ್ನು ಒದಗಿಸಿ. ಜೊತೆಗೆ ಯಾವ ಉದ್ದೇಶಕ್ಕಾಗಿ ಕಫ್ರ್ಯೂ ಪಾಸ್ ನೀಡಲಾಗಿತ್ತು ಎಂದು ತಿಳಿಸಿ.
25. ತಹಶೀಲ್ದಾರ್, ಎಸ್‍ಡಿಎಂ, ಡಿಸಿ, ಆರೋಗ್ಯ ಇಲಾಖೆ ತಂಡಗಳು, ವೈದ್ಯರು, ವೈದ್ಯಕೀಯ ಸೇವಾ ಸಿಬ್ಬಂದಿ, ಡಬ್ಲ್ಯುಎಚ್‍ಒ, ವಿಪತ್ತು ನಿರ್ವಹಣಾ ತಂಡಗಳ ಪ್ರತಿನಿಧಿಗಳು, ಮಾರ್ಚ್ 12ರ ನಂತರ ಸಭೆಗೆ ಭೇಟಿ ನೀಡಿದ್ದರೆ ವಿವರಗಳನ್ನು ಒದಗಿಸಿ.
26. ಈ ಪ್ರಕರಣದ ತನಿಖೆಗೆ ಉಪಯುಕ್ತವಾದ ಯಾವುದೇ ಸಂಬಂಧಿತ ಮಾಹಿತಿ, ದಾಖಲೆ, ಪುರಾವೆಗಳು ಇದ್ದರೆ ನೀಡಿ.

Share This Article
Leave a Comment

Leave a Reply

Your email address will not be published. Required fields are marked *