ಸಂಸತ್‌ನಲ್ಲಿ ಭದ್ರತಾ ಲೋಪ ಕೇಸ್‌ – ತನಿಖೆಗೆ ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ವಿಶೇಷ ಸೆಲ್‌

Public TV
2 Min Read
Delhi Police special cell

– ಅಜ್ಞಾತ ಸ್ಥಳಗಳಲ್ಲಿ ಆರೋಪಿಗಳ ವಿಚಾರಣೆ

ನವದೆಹಲಿ: ಇತ್ತೀಚೆಗೆ ನಡೆದ ಸಂಸತ್‌ನಲ್ಲಿ ಭದ್ರತಾ ಲೋಪ (Parliament Security Breach) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ದೆಹಲಿ ಪೊಲೀಸರ ವಿಶೇಷ ಕೋಶ ಘಟಕಗಳನ್ನ (Delhi Police Special Cell) ರಚಿಸಲಾಗಿದೆ.

ಡಿಸೆಂಬರ್‌ 13ರಂದು ನಡೆದ ಭದ್ರತಾ ಲೋಪ ಪ್ರಕರಣ ತನಿಖೆಗೆ ಕರ್ನಾಟಕ (Karnataka), ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ತನಿಖೆ ನಡೆಸಲು ಈ ಘಟಕಗಳನ್ನ ರಚಿಸಲಾಗಿದೆ. ಇದನ್ನೂ ಓದಿ: ಹಿಂದೂಗಳು ಹಲಾಲ್ ಮಾಂಸ ಸೇವನೆ ಬಿಡಿ, ಝಟ್ಕಾಗೆ ಆದ್ಯತೆ ನೀಡಿ: ಕೇಂದ್ರ ಸಚಿವ

Parliament Smoke Bomb

ಇದಲ್ಲದೇ ಇನ್ನೂ 50 ಪ್ರತ್ಯೇಕ ತಂಡಗಳನ್ನ ರಚಿಸಲಾಗಿದ್ದು, ಆರೋಪಿಗಳ ಡಿಜಿಟಲ್‌ ಬಳಕೆ, ಬ್ಯಾಂಕಿಂಗ್‌ (Banking) ವಿವರ, ಪೂರ್ವಾಪರ ಹಿನ್ನೆಲೆಯ ತನಿಖೆ ನಡೆಸಲಾಗುತ್ತಿದೆ. ವಿಶೇಷ ಕೋಶದ ತಂಡವು ಆರೋಪಿಗಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿ 6 ರಾಜ್ಯಗಳಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಇರಿಸಿರುವುದಾಗಿ ಉನ್ನತ ಮೂಲಗಳು ಮಾಹಿತಿ ಹಂಚಿಕೊಂಡಿದೆ.

6 ಆರೋಪಿಗಳಲ್ಲಿ ಒಬ್ಬನಾದ ಸಾಗರ್‌ ಶರ್ಮಾನನ್ನ ದಕ್ಷಿಣ ವಲಯದ ವಿಶೇಷ ಸೆಲ್ ಸಾಕೇತ್ ತಂಡವು ವಿಚಾರಣೆ ನಡೆಸುತ್ತಿದೆ. ಇನ್ನೂ ಮಾಸ್ಟರ್‌ ಮೈಂಡ್‌ ಲಲಿತ್‌ ಝಾನನ್ನ ವಿಶೇಷ ಸೆಲ್‌ ತಂಡವು ಜನಕರಪುರಿ ಸೌತ್ ವೆಸ್ಟರ್ನ್ ರೇಂಜ್‌ಗೆ ಹಸ್ತಾಂತರಿಸಿದೆ. ಮೈಸೂರು ಮೂಲದ ಆರೋಪಿ ಮನೋರಂಜನ್‌ನನ್ನ ನವದೆಹಲಿ ರೇಂಜ್ (NDR) ಸೆಲ್‌ಗೆ ಹಸ್ತಾಂತರಿಸಿದ್ದು, ಅಲ್ಲಿನ ತಂಡ ವಿಚಾರಣೆ ನಡೆಸುತ್ತಿದೆ. ಸಂಸತ್‌ ಹೊರಗೆ ಪ್ರತಿಭಟನೆ ಮಾಡಿದ್ದ ನೀಲಂ ದೇವಿಯನ್ನ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯ ವಿಶೇಷ ಕೋಶದ ಕೌಂಟರ್-ಇಂಟೆಲಿಜೆನ್ಸ್ ಯುನಿಟ್ ಸುಪರ್ದಿಯಲ್ಲಿರಿಸಿ ವಿಚಾರಣೆ ನಡೆಸಲಾಗುತ್ತಿದೆ.

Delhi Parliament Smoke Bomb Security breach

6 ಜನ ಆರೋಪಿಗಳನ್ನ ಶನಿವಾರವೇ ವಿಶೇಷ ಕೋಶದ ವಿವಿಧ ಘಟಕಗಳಿಗೆ ಹಸ್ತಾಂತರಿಸಲಾಗಿದೆ. ಆರೋಪಿಯನ್ನು ವಿಶೇಷ ಕೋಶದಿಂದ ತನಿಖೆ ಮಾಡಿದ ನಂತರ ಹೆಚ್ಚಿನ ತನಿಖೆಗಾಗಿ ಎನ್‌ಎಫ್‌ಸಿ ವಿಶೇಷ ತಂಡಕ್ಕೆ ಹಸ್ತಾಂತರಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಕೇಂದ್ರದಲ್ಲಿ ಬೇರೆ ಪಕ್ಷ ಇರ್ತಿದ್ರೆ ಬಿಜೆಪಿ ಇಡೀ ದೆಹಲಿ ಬಂದ್ ಮಾಡ್ತಿತ್ತು: ಸಂಜಯ್ ರಾವತ್

ಡಿಸೆಂಬರ್‌ 13 ರಂದು ನಡೆದ ಸಂಸತ್ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 6 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ 5ನೇ ಆರೋಪಿ ಲಲಿತ್ ಝಾ, ದೆಹಲಿ ಪೊಲೀಸರ ಮುಂದೆ ಗುರುವಾರ ಶರಣಾದನು. ಇಡೀ ಪ್ರಕರಣದ ಮಾಸ್ಟರ್‌ಮೈಂಡ್ ಎಂದು ಲಲಿತ್ ಝಾ ನನ್ನ ನಂಬಲಾಗಿದೆ. ಇತರೆ ಆರೋಪಿಗಳ ಕುರಿತ ಸಾಕ್ಷ್ಯ ನಾಶ ಮಾಡಿರುವ ಆರೋಪಗಳೂ ಕೇಳಿ‌ಬಂದಿವೆ. ಈ ನಡುವೆ ದೆಹಲಿ ಪೊಲೀಸರು ಆರೋಪಿಗಳ ಸುಟ್ಟ ಮೊಬೈಲ್‌ಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ಹಲವು ಸ್ಪೋಟಕ ರಹಸ್ಯಗಳು ಬೆಳಕಿಗೆ ಬಂದಿವೆ.

Share This Article