Connect with us

Latest

ದೆಹಲಿಗೆ ನುಸುಳಿರುವ ಶಂಕಿತ ಉಗ್ರರ ಭಾವಚಿತ್ರ ಬಿಡುಗಡೆ

Published

on

ನವದೆಹಲಿ: ಪಂಜಾಬ್ ಗಡಿ ಮೂಲಕ ಭಾರತವನ್ನು ಪ್ರವೇಶಿಸಿರುವ ಇಬ್ಬರು ನಟೋರಿಯಸ್ ಉಗ್ರರ ಭಾವಚಿತ್ರವನ್ನು ದೆಹಲಿ ಪೊಲೀಸರು ಬಿಡುಗಡೆಮಾಡಿದ್ದಾರೆ.

ಕೇಂದ್ರ ಗುಪ್ತಚರ ರಾಷ್ಟ್ರ ರಾಜಧಾನಿಯಲ್ಲಿ ಉಗ್ರರು ಒಳ ನುಸುಳಿರುವ ಬಗ್ಗೆ ಮಾಹಿತಿ ನೀಡಿದ ಬೆನ್ನಲ್ಲೇ, ದೆಹಲಿ ಪೊಲೀಸರು ಉಗ್ರರ ಭಾವಚಿತ್ರವನ್ನು ಬಿಡುಗಡೆಗೊಳಿಸಿದ್ದಾರೆ. ಹೀಗಾಗಿ ಪೊಲೀಸರು ದೆಹಲಿಯಾದ್ಯಂತ ಹೈ-ಅಲರ್ಟ್ ಘೋಷಿಸಿದ್ದಾರೆ.

ಈ ಕುರಿತು ಮಾತನಾಡಿರುವ ದೆಹಲಿ ವರಿಷ್ಠಾಧಿಕಾರಿಗಳು, ಪಂಜಾಬ್ ಪ್ರಾಂತ್ಯದಿಂದ ಇಬ್ಬರು ಉಗ್ರು ಒಳ ನುಸುಳಿದ್ದಾರೆ. ಗುಪ್ತಚರ ಮಾಹಿತಿಗಳ ಪ್ರಕಾರ ರಾಷ್ಟ್ರ ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯವೆಸಗಲು ಉಗ್ರರು ಸಂಚು ರೂಪಿಸಿದ್ದಾರೆ. ಈಗಾಗಲೇ ಇವರು ರಾಜಧಾನಿಯನ್ನು ತಲುಪಿರುವ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಿಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ತಮ್ಮ ಸುತ್ತಮುತ್ತ ಸ್ಥಳಗಳಲ್ಲಿ ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಶಂಕೆ ವ್ಯಕ್ತವಾದರೆ, ಕೂಡಲೇ ಪಹರ್‍ಗಂಜ್ ಪೊಲೀಸ್ ಠಾಣೆಯ ದೂರವಾಣಿಗೆ ಕರೆ ಮಾಡುವಂತೆ ಕೇಳಿಕೊಂಡಿದ್ದಾರೆ. ಈಗಾಗಲೇ ಉಗ್ರರು ದೆಹಲಿಗೆ ನುಸುಳಿರುವ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ.

ಕಳೆದ ಒಂದು ವಾರದ ಹಿಂದಯೇ ಜೈಷ್-ಎ-ಮೊಹಮದ್ ಸಂಘಟನೆಯ ಆರರಿಂದ ಏಳು ಮಂದಿ ಉಗ್ರರು ಪಂಜಾಬಿನ ಫಿರೋಜ್‍ಪುರ್ ಗಡಿಪ್ರದೇಶದಿಂದ ಒಳನುಸುಳಿರುವ ಕುರಿತು ಕೇಂದ್ರ ಗುಪ್ತಚರ ಇಲಾಖೆ ಪಂಜಾಬ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಪಂಜಾಬ್ ನಲ್ಲಿಯೂ ಹೈ-ಅಲರ್ಟ್ ಘೋಷಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *