ನವದೆಹಲಿ: ತನ್ನ 9 ತಿಂಗಳ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ 19 ವರ್ಷದವಳನ್ನು ದೆಹಲಿ ಪೊಲೀಸರು (Delhi Police) ರಕ್ಷಣೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಯುವತಿಯ ತಾಯಿ ಅದರ್ಶ್ ನಗರ ಪೊಲೀಸ್ ಠಾಣೆ (Adarsh Nagar Police Station) ಗೆ ಕರೆ ಮಾಡಿ ಮಗಳು ಆತ್ಮಹತ್ಯೆ ಮಾಡಿಕೊಳ್ಳು ಹೋಗಿರುವುದಾಗಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಪೊಲೀಸರ ಬಳಿ ಮಗಳ ಗಂಡನ ವಿರುದ್ಧವೇ ರೊಪ ಮಾಡಿದ್ದಾರೆ.
Advertisement
Advertisement
ಇತ್ತ ಕರೆ ಬಂದ ಕೂಡಲೇ ಎಚ್ಚೆತ್ತ ಪೊಲೀಸರು, ಯುವತಿ ಮತ್ತು ಆಕೆಯ ಮಗಳಿಗಾಗಿ ಹುಡುಕಾಟ ಆರಂಬಿಸಿದ್ದಾರೆ. ಈ ವೇಳೆ ಭಾರತ್ ನಗರ್ ಪಾರ್ಕ್ನಲ್ಲಿ ಇಬ್ಬರೂ ಸಿಕ್ಕಿದ್ದಾರೆ. ಪೊಲೀಸರು ಆಕೆಯನ್ನು ವಿಚಾರಿಸಿದ್ದಾರೆ ಕೌಟುಂಬಿಕ ಸಮಸ್ಯೆಯಿಂದಾಗಿ ಮನೆ ಬಿಟ್ಟು ಬಂದಿದ್ದೇನೆ. ಅಲ್ಲದೆ ತನ್ನ ಉದ್ದೇಶದ ಬಗ್ಗೆ ತಾಯಿ ಬಳಿ ಹೇಳಿಯೇ ಬಂದಿರುವುದಾಗಿ ತಿಳಿಸಿದ್ದಾಳೆ. ಇದನ್ನೂ ಓದಿ: ಅಜ್ಜಿ ಹೊರಹಾಕಲು ಹೋಗಿ ತಾನೇ ಮನೆಯಿಂದ ಹೊರಬಿದ್ದ ಮೊಮ್ಮಗ!
Advertisement
Advertisement
ಯುವತಿಯ ಮಾತನ್ನು ಆಲಿಸಿದ ಪೊಲಿಸರು ಆಕೆಗೆ ಧೈರ್ಯ ತುಂಬಿ ಮನೆಗೆ ವಾಪಸ್ ಕಳಿಸಿದ್ದಾರೆ. ಈ ಮೂಲಕ ತಾಯಿ-ಮಗನ ಜೀವ ಉಳಿಸಿದ್ದಾರೆ. ಈ ಹಿನ್ನೆಲೆಯ್ಲಲಿ ಇದೀಗ ಪೊಲೀಸರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k