– ವೆಬ್‌ಸೈಟ್‌ನಲ್ಲಿ ಕೇವಲ 20 ರೂ.ಗೆ ನಕಲಿ ದಾಖಲೆ ಸೃಷ್ಠಿಸುತ್ತಿದ್ದ ಜಾಲ
ನವದೆಹಲಿ: ಬಾಂಗ್ಲಾದೇಶಿ ಪ್ರಜೆಗಳ (Bangladeshi nationals) ಅಕ್ರಮ ವಲಸೆ ದಂಧೆಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದಲ್ಲಿ 6 ಜನರೊಂದಿಗೆ ಐವರು ಬಾಂಗ್ಲಾದೇಶಿ ಪ್ರಜೆಗಳನ್ನೂ ಬಂಧಿಸಲಾಗಿದೆ ಎಂದು ದಕ್ಷಿಣ ಜಿಲ್ಲೆಯ ಡಿಸಿಪಿ (South Delhi DCP) ಅಂಕಿತ್ ಚೌಹಾಣ್ ತಿಳಿಸಿದ್ದಾರೆ.
ಇತ್ತಿಚೇಗೆ ಸಂಗಮ್ ವಿಹಾರ್‌ನಲ್ಲಿ ಸೆಟಾನ್ ಶೇಖ್ ಎಂಬುವನ ಹತ್ಯೆಯಾಗಿತ್ತು. ಹತ್ಯೆಯಾಗಿದ್ದ ವ್ಯಕ್ತಿ ಬಾಂಗ್ಲಾದೇಶಿ ವಲಸಿಗರಿಗೆ ನಕಲಿ ಆಧಾರ್ ಕಾರ್ಡ್‌ಗಳನ್ನ ಸೃಷ್ಟಿಸಲು ಸಹಾಯ ಮಾಡುತ್ತಿದ್ದಾನೆ ಎಂದು ಪೊಲೀಸರಿಗೆ ತಿಳಿದುಬಂದಿತ್ತು. ತನಿಖೆ ವೇಳೆ ಶೇಖ್ ಸಹಚರರ ಮೇಲೆ ಶಂಕೆ ವ್ಯಕ್ತವಾಗಿದ್ದು, ಹಣಕಾಸಿನ ಕಲಹ ಮತ್ತು ವೈಯಕ್ತಿಕ ದ್ವೇಷದಿಂದ ಕೊಲೆ ನಡೆದಿದೆ ಎಂದು ಸಹಚರರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ವಂಚನೆ ಕೇಸ್‌ಗೆ ಟ್ವಿಸ್ಟ್ ಕೊಟ್ಟ ವರ್ತೂರು ಪ್ರಕಾಶ್ – 12 ಲಕ್ಷ ನಗದು, 3 ಬ್ರಾಸ್‌ಲೆಟ್, ಚಿನ್ನದ ಉಂಗುರ ವಾಪಸ್
Advertisement
Advertisement
ಇಂದು (ಡಿ.24) ಕಾರ್ಯಾಚರಣೆ ವೇಳೆ ಪೊಲೀಸರು 21 ನಕಲಿ ಆಧಾರ್ ಕಾರ್ಡ್‌ಗಳು, 6 ಪ್ಯಾನ್ ಕಾರ್ಡ್‌ಗಳು ಮತ್ತು 4 ವೋಟರ್ ಐಡಿಗಳನ್ನ ವಶಪಡಿಸಿಕೊಂಡಿದ್ದಾರೆ. 2022 ರಿಂದ ರಜತ್ ಮಿಶ್ರಾ ಎಂಬ ವ್ಯಕ್ತಿಯಿಂದ ನಿರ್ವಹಿಸಲ್ಪಡುವ ಜನತಾ ಪ್ರಿಂಟ್ಸ್ ಎಂಬ ವೆಬ್‌ಸೈಟ್‌ನಲ್ಲಿ 20 ರೂ.ಗೆ ನಕಲಿ ದಾಖಲೆಗಳನ್ನು ಸೃಷ್ಠಿಸಲು ಅನುಕೂಲ ಮಾಡಿಕೊಟ್ಟಿದೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.
Advertisement
ಬಂಧಿತರ ಪೈಕಿ ಮುನ್ನಿ ದೇವಿ ಕೂಡ ಸಿಂಡಿಕೇಟ್‌ಗೆ ಸಹಾಯ ಮಾಡುತ್ತಿದ್ದಾಳೆ ಎಂದು ಶಂಕಿಸಲಾಗಿದೆ. ಈ ಸಂಘಟಿತ ಜಾಲವು ಬಾಂಗ್ಲಾದೇಶಿ ವಲಸಿಗರಿಗೆ ಅರಣ್ಯ ಮಾರ್ಗಗಳ ಮೂಲಕ ಭಾರತವನ್ನು ಪ್ರವೇಶಿಸಲು ಸಹಾಯ ಮಾಡುತ್ತಿದೆ ಮತ್ತು ಅವರಿಗೆ ನಕಲಿ ಐಡಿಗಳು, ಸಿಮ್ ಕಾರ್ಡ್‌ಗಳು ಮತ್ತು ಹಣಕಾಸಿನ ನೆರವು ನೀಡುತ್ತಿದೆ ಎಂಬ ಮಾಹಿತಿ ಇದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಶಿವಣ್ಣಗೆ ಇಂದು ಶಸ್ತ್ರಚಿಕಿತ್ಸೆ – ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ಪೂಜೆ
Advertisement
ಪೊಲೀಸ್ ತಂಡಗಳು ಗಡಿಯಾಚೆಗಿನ ಸಂಪರ್ಕಗಳನ್ನು ಅನ್ವೇಷಿಸುತ್ತಿವೆ. ಹೆಚ್ಚಿನ ತನಿಖೆಗಾಗಿ ಬಾಂಗ್ಲಾದೇಶಕ್ಕೆ ಸಿಬ್ಬಂದಿಯನ್ನ ನಿಯೋಜಿಲಾಗಿದೆ. ನಕಲಿ ಮತದಾರರ ಚೀಟಿಗಳನ್ನು ಚುನಾವಣಾ ವಂಚನೆಗೆ ಬಳಸಲಾಗಿದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಆಸಿಡ್ ದಾಳಿ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನಿರಾಕರಿಸುವಂತಿಲ್ಲ: ದೆಹಲಿ ಹೈಕೋರ್ಟ್