ಸೊಸೆಯನ್ನೇ ರೇಪ್‍ಗೈದ ಆರೋಪ: ಬಿಜೆಪಿಯ ಮಾಜಿ ಶಾಸಕನ ವಿರುದ್ಧ ಎಫ್‍ಐಆರ್

Public TV
2 Min Read
Manoj Kumar Shokeen

ನವದೆಹಲಿ: ಮದ್ಯದ ಅಮಲಿನಲ್ಲಿ ಸೊಸೆಯನ್ನೇ ಅತ್ಯಾಚಾರಗೈದ ಆರೋಪದ ಅಡಿ ಬಿಜೆಪಿಯ ಮಾಜಿ ಶಾಸಕ ಮನೋಜ್ ಶೊಕೀನ್ ವಿರುದ್ಧ ದೆಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಮನೋಜ್ ಶೊಕೀನ್ ಅವರು ದೆಹಲಿಯ ನಂಗ್ಲೋಯಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ 2015ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಮಾಜಿ ಶಾಸಕರ ವಿರುದ್ಧ ಸಂತ್ರಸ್ತೆಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮನೋಜ್ ಶೊಕೀನ್ ಅವರು ಕಳೆದ ಡಿಸೆಂಬರ್ 31ರ ಮಧ್ಯರಾತ್ರಿ ಗನ್ ತೋರಿಸಿ, ಬೆದರಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಸಂತ್ರಸ್ತೆಯು ದೂರು ನೀಡಿದ್ದಾರೆ. ಈ ಸಂಬಂಧ ಮಾಜಿ ಶಾಸಕರ ವಿರುದ್ಧ ಅತ್ಯಾಚಾರ ಆರೋಪದ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

Police Jeep

ದೂರಿನಲ್ಲಿ ಏನಿದೆ?:
2018 ಡಿಸೆಂಬರ್ 31ರಂದು ರಾತ್ರಿ ನಾನು, ಪತಿ, ಸಹೋದರ ಹಾಗೂ ಸಹೋದರ ಸಂಬಂಧಿ ಎಲ್ಲರೂ ಸೇರಿ ಮೀರ ಬಾಘ್ ಪ್ರದೇಶದಲ್ಲಿರುವ ಪತಿಯ ಮನೆಗೆ ಹೊರಡಿದ್ದೇವು. ಆದರೆ ಹೊಸ ವರ್ಷಾಚರಣೆಗೆ ಪತಿ ನನ್ನನ್ನು ಪಾಶ್ಚಿಮ್ ವಿಹಾರ ಪ್ರದೇಶದಲ್ಲಿರುವ ಹೊಟೇಲ್‍ವೊಂದಕ್ಕೆ ಕರೆದೊಯ್ದಿದ್ದರು. ಅಲ್ಲಿಗೆ ನಮ್ಮ ಅನೇಕ ಸಂಬಂಧಿಕರು ಬಂದಿದ್ದರು. ಸುಮಾರು ಮಧ್ಯ ರಾತ್ರಿ 12:30ಕ್ಕೆ ಪಾರ್ಟಿ ಮುಗಿಸಿ ಮಗೆ ಬಂದಿದ್ದೇವು. ಆದರೆ ಪತಿ ನನ್ನನ್ನು ಮನೆಯಲ್ಲಿ ಬಿಟ್ಟು ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹೋಗಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಮನೆಯಲ್ಲಿ ನಾನು ಒಬ್ಬಳೆ ಮಲಗಿದ್ದಾಗ ಮಧ್ಯರಾತ್ರಿ 1:30 ಗಂಟೆ ಸುಮಾರು ಮನೆಗೆ ಬಂದ ನನ್ನ ಮಾವ ಮನೋಜ್ ಶೊಕೀನ್, ನಿನ್ನ ಜೊತೆ ಮಾತನಾಡಬೇಕು ಎಂದು ಹೇಳಿ ರೂಂ ಒಳಗೆ ಬಂದರು. ಬಳಿಕ ಅಸಭ್ಯವಾಗಿ ವರ್ತಿಸಲು ಆರಂಭಿಸಿದರು. ಇದನ್ನು ವಿರೋಧಿಸಿದ್ದಕ್ಕೆ ಗನ್ ತೋರಿಸಿ, ಬೊಬ್ಬಿಟ್ಟರೆ ನಿನ್ನ ಸಹೋದರನನ್ನು ಗುಂಡಿಟ್ಟು ಹತ್ಯೆ ಮಾಡುತ್ತೇನೆ ಎಂದು ಬೆದರಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

police 1 1

ಈ ಸಂಬಂಧ ಆರೋಪಿ ಮನೋಜ್ ಶೊಕೀನ್ ಅವರ ಐಪಿಸಿ ಸೆಕ್ಷನ್ 376 (ಬಲಾತ್ ಸಂಭೋಗಕ್ಕೆ ದಂಡನೆ) ಹಾಗೂ 506 (ಕೊಲೆ ಬೆದರಿಕೆ) ಅಡಿ ಪ್ರಕರಣದ ದಾಖಲಾಗಿದೆ. ಪ್ರಕರಣ ಕುರಿತು ತನಿಖೆ ಆರಂಭಿಸಲಾಗಿದ್ದು, ಆರೋಪಿಯ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪ ಪೊಲೀಸ್ ಆಯುಕ್ತ ಸೆಜು ಪಿ ಕುರುವಿಲ್ಲಾ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *