– ರೈಲ್ವೆ ನಿಲ್ದಾಣದಲ್ಲಿ ನಕಲಿ ತರಬೇತಿ ನೀಡುತ್ತಿದ್ದ ವಂಚಕರು
ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಉದ್ಯೋಗ ನೀಡುವ ನೆಪದಲ್ಲಿ ಜನರನ್ನು ವಂಚಿಸಿದ ನಾಲ್ವರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಭಾರತೀಯ ರೈಲ್ವೆಯಲ್ಲಿ ಟಿಕೆಟ್ ತಪಾಸಣೆ ಮಾಡುವ ಅಧಿಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ, ಕೆಲ ಜನರು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಓಲಾ ಚಾಲಕ ಈ ವರ್ಷ ಜುಲೈನಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Advertisement
Advertisement
ಚಾಲಕನು, ಅವರು ನನಗೆ ದೃಢಿಕರಣ ಪ್ರಮಾಣ ಪತ್ರ, ವೈದ್ಯಕೀಯ ಪ್ರಮಾಣಪತ್ರ ಮತ್ತು ಟಿಸಿಯ ಗುರುತಿನ ಚೀಟಿಯಂತಹ ಕೆಲವು ನಕಲಿ ದಾಖಲೆಗಳನ್ನು ಕೊಟ್ಟಿದ್ದರು. ಅದು ಅಲ್ಲದೇ ರಾಜೇಂದರ್ ನಗರ ರೈಲ್ವೇ ನಿಲ್ದಾಣದಲ್ಲಿ ಸುಮಾರು ಎರಡು ತಿಂಗಳ ತರಬೇತಿಯನ್ನೂ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆ ಪೊಲೀಸರು ಆರೋಪಿಗಳನ್ನು ಹಿಡಿಯಲು ಬಲೆ ಬಿಸಿದರು. ಇದನ್ನೂ ಓದಿ: ರಾಜ್ಯದಲ್ಲಿಂದು 310 ಕೇಸ್, 6 ಸಾವು
Advertisement
ಈ ಕುರಿತು ಪ್ರತಿಕ್ರಿಯಿಸಿದ ಉಪ ಪೊಲೀಸ್ ಆಯುಕ್ತ ದೀಪಕ್ ಯಾದವ್, ಆರೋಪಿಗಳನ್ನು ಹಿಡಿಯುವುದು ನಮಗೆ ಸವಾಲಿನ ಕೆಲಸವಾಗಿದ್ದರಿಂದ ನಾವು ಪೊಲೀಸರ ವಿಶೇಷ ತಂಡವನ್ನು ರಚಿಸಿದ್ದೇವು ಎಂದು ತಿಳಿಸಿದ್ದಾರೆ. ಅ.5 ರಂದು ಪೊಲೀಸ್ ತಂಡವು ಸುಖರಾಜ್ ಸಿಂಗ್ ಎನ್ನುವ ಆರೋಪಿಯನ್ನು ಬಂಧಿಸಿದ್ದು, ನಂತರ ಅವರನ್ನು ಸ್ಥಳೀಯ ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಕಳುಹಿಸಿತು.
Advertisement
ಸುಖರಾಜ್ ವಿಚಾರಣೆಯ ಸಮಯದಲ್ಲಿ, ನನ್ನ ಕೆಲಸವು ಗ್ರಾಹಕರನ್ನು ಹುಡುಕುವುದು. ನನಗೆ ಗ್ರಾಹಕರು ಸಿಕ್ಕರೆ ಬಿಹಾರದಲ್ಲಿನ ಅಮಿತ್‍ಗೆ ಕಳುಹಿಸುತ್ತಿದ್ದೇನು ಎಂದು ತಿಳಿಸಿದರು. ಈತ ನೀಡಿದ ಮಾಹಿತಿಯ ಮೇರೆಗೆ ಪೊಲೀಸರ ತಂಡ ಬಿಹಾರದ ಪಾಟ್ನಾದಲ್ಲಿ ದಾಳಿ ನಡೆಸಿದರು. ಈ ವೇಳೆ ದಯಾನಂದ ಸರಸ್ವತಿ, ಸುನಿಲ್ ಕುಮಾರ್ ಮತ್ತು ಅವರ ಸಹಚರ ಅಮರ್ ಕುಮಾರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕಲ್ಲಿದಲು ಕೊರತೆಯಿಂದ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ: ಸುನೀಲ್ ಕುಮಾರ್
ಈ ಆರೋಪಿಗಳು ಭಾರತೀಯ ರೈಲ್ವೆಯ ನಕಲಿ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದು, ಅಮರ್ ಕುಮಾರ್ ಸಹಾಯದಿಂದ ಸುಳ್ಳು ವೈದ್ಯಕೀಯ ಪರೀಕ್ಷೆಯನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳು ನಾವು ಬಿಹಾರದ ರೈಲ್ವೆ ನಿಲ್ದಾಣಗಳಲ್ಲಿ ನಕಲಿ ತರಬೇತಿ ನೀಡುವುದಾಗಿ ಒಪ್ಪಿಕೊಂಡಿದ್ದಾರೆ.
ಪೊಲೀಸರು ಆರೋಪಿಗಳಿಂದ ಒಂದು ಲ್ಯಾಪ್‍ಟಾಪ್, ಕೆಲವು ನಕಲಿ ದಾಖಲೆಗಳು ಮತ್ತು ಭಾರತೀಯ ರೈಲ್ವೆಯ ಕೆಲವು ರಬ್ಬರ್ ಸ್ಟಾಂಪ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.