ನವದೆಹಲಿ: ನಕಲಿ ಕೀಮೋಥೆರಪಿ ಔಷಧಗಳನ್ನು (Chemotherapy Drugs) ತಯಾರಿಸಿ ಸರಬರಾಜು ಮಾಡುತ್ತಿದ್ದ ಏಳು ಆರೋಪಿಗಳನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವಿಫಿಲ್ ಜೈನ್ (46), ಸೂರಜ್ ಶಾತ್ (28), ನೀರಜ್ ಚೌಹಾಣ್ (38), ಪರ್ವೇಜ್ (33), ಕೋಮಲ್ ತಿವಾರಿ (39), ಅಭಿನಯ್ ಕೊಹ್ಲಿ (30) ಮತ್ತು ತುಷಾರ್ ಚೌಹಾಣ್ (28) ಎಂದು ಗುರುತಿಸಲಾಗಿದೆ. ಆರೋಪಿಗಳು ನಕಲಿ ಕ್ಯಾನ್ಸರ್ ಔಷಧಿ ತಯಾರಿಕೆ ಮತ್ತು ಪೂರೈಕೆಯಲ್ಲಿ ತೊಡಗಿರುವ ದಂಧೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಆಧರಿಸಿ ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ವಿಶೇಷ ಪೆÇಲೀಸ್ ಆಯುಕ್ತೆ (ಅಪರಾಧ ವಿಭಾಗ) ಶಾಲಿನಿ ಸಿಂಗ್ ಹೇಳಿದ್ದಾರೆ.
Advertisement
Advertisement
ಪೊಲೀಸರು, ಮೋತಿ ನಗರದಲ್ಲಿ ಎರಡು ಫ್ಲಾಟ್‍ಗಳು, ಗುಗಾರ್ಂವ್‍ನ ದಕ್ಷಿಣ ನಗರದಲ್ಲಿ ಒಂದು ಫ್ಲಾಟ್, ಈಶಾನ್ಯ ದೆಹಲಿಯ ಯಮುನಾ ವಿಹಾರ್‍ನಲ್ಲಿರುವ ಒಂದು ಫ್ಲಾಟ್ ಮತ್ತು ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆ ಸೇರಿ ನಾಲ್ಕು ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ನಕಲಿ ಕ್ಯಾನ್ಸರ್ ಚುಚ್ಚುಮದ್ದಿನ 140 ತುಂಬಿದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.
Advertisement
Advertisement
ಆರೋಪಿಗಳಲ್ಲಿ ಕೆಲವರು ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.