ಮೈಸೂರು: ದೇಶದ ನಾನಾ ಭಾಗಗಳಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಇಮೇಲ್ ರವಾನಿಸುತ್ತಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು (Delhi Police) ಮೈಸೂರಿನಲ್ಲಿ (Mysuru) ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೈಸೂರಿನ ಬೃಂದಾವನ ಬಡಾವಣೆಯ ನಿವಾಸಿ ಶ್ರೀನಿವಾಸ್ ಅಲಿಯಾಸ್ ಶ್ರೀನಿವಾಸ್ ಲೂಯಿಸ್ ಎಂದು ಗುರುತಿಸಲಾಗಿದೆ. ಈತ ದೇಶದ ನಾನಾ ಭಾಗಗಳಿಗೆ ಒಟ್ಟು 1,100ಕ್ಕೂ ಹೆಚ್ಚು ಬಾಂಬ್ ಬೆದರಿಕೆ (Bomb Threats) ಇಮೇಲ್ ಮಾಡಿ ವಿಧ್ವಂಸಕ ಕೃತ್ಯ ನಡೆಸುವ ಆತಂಕ ಸೃಷ್ಟಿಸಿದ್ದ. ನ್ಯಾಯಾಲಯಗಳು, ವಿವಿಧ ನಗರಗಳ ಪ್ರತಿಷ್ಠಿತ ಶಾಲೆ – ಕಾಲೇಜುಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ರೈಲು ನಿಲ್ದಾಣ, ವಿಮಾನ ನಿಲ್ದಾಣಕ್ಕೂ (Airport) ಕೂಡ ಬಾಂಬ್ ಇಟ್ಟಿರುವ ಬಗ್ಗೆ ಕರೆ ಮಾಡುವುದು, ಇಮೇಲ್ ಮಾಡುವುದನ್ನು ಮಾಡಿದ್ದ. ಇದನ್ನೂ ಓದಿ: ಇಂಡಿಗೋ ವಿಮಾನಕ್ಕೆ ಟಿಶ್ಯೂ ಪೇಪರ್‌ನಲ್ಲಿ ಬಾಂಬ್ ಬೆದರಿಕೆ – ಲಕ್ನೋದಲ್ಲಿ ತುರ್ತು ಭೂಸ್ಪರ್ಶ
ಆರೋಪಿ ಶ್ರೀನಿವಾಸ್‌ನನ್ನು ಹೆಚ್ಚಿನ ವಿಚಾರಣೆಗೆ ದೆಹಲಿ ಪೊಲೀಸರು ಕರೆದೊಯ್ಯಲಿದ್ದಾರೆ. ಆರೋಪಿಯ ಮನೆಯಲ್ಲಿ ಹಲವು ಸಿಮ್‌ಗಳು ಹಾಗೂ ಲ್ಯಾಪ್ ಟ್ಯಾಪ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಕೋರ್ಟ್‌ಗಳಿಗೆ ಬಾಂಬ್ ಬೆದರಿಕೆ – ಹೆಚ್ಚಿದ ಆತಂಕ, ಪೊಲೀಸರಿಂದ ತೀವ್ರ ಶೋಧ

