LatestMain PostNational

ಸಾಮಾನ್ಯ ಜನರಲ್ಲಿ ಮತ್ತೆ ಹೆಚ್ಚುತ್ತಿದೆ ಪಾಸಿಟಿವಿಟಿ – ಸಮುದಾಯಕ್ಕೆ ಹಬ್ಬಿತಾ ಓಮಿಕ್ರಾನ್ ಸೋಂಕು

Advertisements

ನವದೆಹಲಿ: ಭಾರತದಲ್ಲಿ ಮೂರನೇ ಅಲೆಯ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್‍ನ ಹೊಸ ರೂಪಾಂತರಿ ಓಮಿಕ್ರಾನ್ ಈಗಾಗಲೇ ಸಮುದಾಯಕ್ಕೆ ಹಬ್ಬಿರುವ ಅನುಮಾನ ಮೂಡಿಸಿದೆ. ಸಾಮಾನ್ಯ ಜನರಲ್ಲೂ ಓಮಿಕ್ರಾನ್ ಸೋಂಕು ಪತ್ತೆಯಾಗುತ್ತಿದ್ದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಹೊಸ ಸವಾಲೊಡ್ಡಿದೆ.

CORONA-VIRUS.

ಓಮಿಕ್ರಾನ್ ಪತ್ತೆಯಾಗುತ್ತಿರುವ ರಾಜ್ಯಗಳ ಪೈಕಿ ದೆಹಲಿ ಮತ್ತು ಮಹಾರಾಷ್ಟ್ರ ಅಗ್ರಗಣ್ಯ ಸ್ಥಾನದಲ್ಲಿದ್ದು ದೆಹಲಿಯಲ್ಲಿ ವಿದೇಶ ಪ್ರಯಾಣದ ಅಥವಾ ವಿದೇಶಿ ಪ್ರಯಾಣಿಕರ ಸಂಪರ್ಕ ಇಲ್ಲದ ಜನರಲ್ಲಿ ಅತಿ ಹೆಚ್ಚು ಸೋಂಕು ಪತ್ತೆಯಾಗುತ್ತಿರುವುದು ಆತಂಕವನ್ನು ಸೃಷ್ಟಿಸಿದೆ.  ಇದನ್ನೂ ಓದಿ:  ಸೋಶಿಯಲ್ ಮೀಡಿಯಾದಲ್ಲಿ ನಿಂದಿಸಿದ್ದಕ್ಕೆ ಯುವಕನ ಅಪಹರಿಸಿ ಕೊಂದರು!

ದೆಹಲಿಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಮಾಹಿತಿಗಳ ಪ್ರಕಾರ, ಸೋಮವಾರ ಪತ್ತೆಯಾದ 63 ಮಂದಿ ಸೋಂಕಿತರಲ್ಲಿ 52 ಸಾಮಾನ್ಯ ಜನರಿಗೆ ಸೋಂಕು ತಗುಲಿದೆ ಎನ್ನಲಾಗುತ್ತಿದೆ. ಈ ಜನರಿಗೆ ಯಾವುದೇ ವಿದೇಶಿ ಪ್ರಯಾಣದ ಅಥವಾ ವಿದೇಶಿ ಪ್ರಯಾಣಿಕರ ಸಂಪರ್ಕ ಇಲ್ಲ ಎಂದು ಖಚಿತಪಡಿಸಲಾಗಿದೆ. ವಿದೇಶಿ ಪ್ರಯಾಣ ಮತ್ತು ಪ್ರಯಾಣಿಕರ ಸಂಪರ್ಕ ಹೊಂದಿರುವ ಕೇವಲ 11 ಮಂದಿಯಲ್ಲಿ ಮಾತ್ರ ಕೊರೊನಾ ಸೋಂಕು ಪತ್ತೆಯಾಗಿದೆ. ಇದನ್ನೂ ಓದಿ:  ಬೇಡಿಕೆ ಈಡೇರಿಸುವಂತೆ ಪ್ರತಿಭಟಸಿದ 100ಕ್ಕೂ ಹೆಚ್ಚು ಆದಿವಾಸಿಗಳು ಪೊಲೀಸರ ವಶಕ್ಕೆ

ಹೀಗಾಗಿ ದೆಹಲಿಯಲ್ಲಿ ಓಮಿಕ್ರಾನ್ ಸೋಂಕು ಸಮುದಾಯಕ್ಕೆ ಹರಡಿರುವ ಬಗ್ಗೆ ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈವರೆಗೂ ದೆಹಲಿಯಲ್ಲಿ 165 ಮಂದಿಗೆ ಸೋಂಕು ಪತ್ತೆಯಾಗಿದೆ. ಈ ಪೈಕಿ ಕೇವಲ 23 ಮಂದಿ ಮಾತ್ರ ಚೇತರಿಸಿಕೊಂಡಿದ್ದಾರೆ. ನಿತ್ಯ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ನಿರಂತರ ಏರಿಕೆ ಕಂಡು ಬರುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

ಲೋಕನಾಯಕ್ ಆಸ್ಪತ್ರೆ ಸೇರಿದಂತೆ ದೆಹಲಿಯಲ್ಲಿ ಒಟ್ಟು ಐದು ಆಸ್ಪತ್ರೆಗಳಲ್ಲಿ ಓಮಿಕ್ರಾನ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲಿಯ ವೈದ್ಯರು ಹೇಳುವ ಪ್ರಕಾರ ಆರಂಭದಲ್ಲಿ ಓಮಿಕ್ರಾನ್‍ನ ಎಲ್ಲಾ ಪ್ರಕರಣಗಳು ಅಂತರರಾಷ್ಟ್ರೀಯ ಪ್ರಯಾಣಿಕರಲ್ಲಿ ಮಾತ್ರ ಪತ್ತೆಯಾಗಿದ್ದವು, ಕಳೆದ ವಾರದಿಂದ ಸಮುದಾಯದಿಂದಲೂ ಈ ಪ್ರಕರಣಗಳು ವರದಿಯಾಗುತ್ತಿವೆ. ಈ ರೋಗಿಗಳಲ್ಲಿ ಯಾವುದೇ ರೋಗಲಕ್ಷಣಗಳಿಲ್ಲ, ಪ್ರಯಾಣದ ಇತಿಹಾಸವೂ ಇಲ್ಲ. ಆದರೆ ಸೀಕ್ವೆನ್ಸಿಂಗ್ ಫಲಿತಾಂಶವು ಬಂದಾಗ, ಅವರು ಓಮಿಕ್ರಾನ್ ರೂಪಾಂತರಿಯನ್ನು ಹೊಂದಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.


Corona Virus, Omicron, Positiveness India, New Delhi

Leave a Reply

Your email address will not be published.

Back to top button