ನವದೆಹಲಿ: ನಿರ್ಭಯಾಳನ್ನು ಅತ್ಯಾಚಾರಿಗಳು ಎಷ್ಟರ ಮಟ್ಟಿಗೆ ಕ್ರೌರ್ಯ ಮೆರೆದಿದ್ದರೆಂದರೆ, ಆಕೆಯ ಬಟ್ಟೆಗಳನ್ನು ಕಳಚಿ ಬಸ್ ಅನ್ನು ಸ್ವಚ್ಛಗೊಳಿಸಿದ್ದರು. ಆಗ ಬಟ್ಟೆ ಹರಿದು ಹೋಗಿತ್ತು. ಅಷ್ಟೇ ಅಲ್ಲದೆ ದೋಷಿಗಳು ಯುವತಿ ಮತ್ತು ಸ್ನೇಹಿತನ ಎಲ್ಲ ವಸ್ತುಗಳನ್ನು ಸಹ ಲೂಟಿ ಮಾಡಿದ್ದರು. ಕೆಲವು ವಸ್ತುಗಳು ಬಿಹಾರದ ಔರಂಗಾಬಾದ್‍ನಿಂದ ಮತ್ತು ಕೆಲವು ರಾಜಸ್ಥಾನದ ಕರೌಲಿ ಗ್ರಾಮದಲ್ಲಿ ಪೊಲೀಸರಿಗೆ ದೊರೆತಿದ್ದವು. ಜೊತೆಗೆ ದೆಹಲಿಯ ಕೊಳೆಗೇರಿಯಲ್ಲಿರುವ ರವಿದಾಸ್ ಶಿಬಿರದಿಂದ ಪೊಲೀಸರು ಅನೇಕ ವಿಷಯಗಳನ್ನು ವಶಪಡಿಸಿಕೊಂಡಿದ್ದರು.
ಯಾರೋ ಫೋನ್ ಇಟ್ಟುಕೊಂಡ್ರೆ, ಯಾರೋ ಶೂ ತೆಗೆದುಕೊಂಡ್ರು:
16 ಡಿಸೆಂಬರ್ 2012ರಂದು ಯುವತಿ ತನ್ನ ಸ್ನೇಹಿತನೊಂದಿ ರಾತ್ರಿ 9 ಗಂಟೆಗೆ ಬಸ್ ಹತ್ತಿದ ಕೂಡಲೇ ದುಷ್ಕರ್ಮಿಗಳು ಅವರನ್ನು ಸ್ನೇಹಿತರು ಅವಳನ್ನು ನಿಂದಿಸಲು ಪ್ರಾರಂಭಿಸಿದ್ದರು. ಎಲ್ಲಾ 6 ಅಪರಾಧಿಗಳು ಆ ರಾತ್ರಿ ಹೆಚ್ಚು ಮಾದಕ ವ್ಯಸನಿಯಾಗಿದ್ದರು. ಓರ್ವ ಯುವತಿಯ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದ. ಮತ್ತೊಬ್ಬ ಯುವತಿಯನ್ನು ಹಿಡಿದ್ದ. ನಂತರ ಎಲ್ಲರೂ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಷ್ಟೇ ಅಲ್ಲದೆ ಅಪರಾಧಿಗಳು ಅವರಿಂದ ಎಲ್ಲವನ್ನೂ ದೋಚಿದ್ದರು.
Advertisement
Advertisement
ಹಣ, ಚಿನ್ನಾಭರಣ ಸೇರಿದಂತೆ ಅನೇಕ ವಸ್ತುಗಳನ್ನು ದೋಚಿದ್ದ ಕ್ರೂರಿಗಳು ಯುವತಿ ಹಾಗೂ ಸ್ನೇಹಿತನನ್ನು ಬಸ್ಸಿನಿಂದ ಕೆಳಕ್ಕೆ ಎಸೆದಿದ್ದರು. ನಂತರ ಎಲ್ಲಾ ವಸ್ತುಗಳನ್ನು ತಮ್ಮೊಳಗೆ ಹಂಚಿಕೊಂಡಿದ್ದರು. ಅಪರಾಧಿ ಅಕ್ಷಯ್ ಯುವತಿಯ ಸ್ನೇಹಿತನ ಬೆಳ್ಳಿ ಮತ್ತು ಚಿನ್ನದ ಉಂಗುರದೊಂದಿಗೆ ಬಿಹಾರಕ್ಕೆ ಹೋಗಿದ್ದ. ಮುಖೇಶ್ ಸಿಂಗ್ ಯುವಕನ ಸ್ಮಾರ್ಟ್ ಫೋನ್ ತೆಗೆದುಕೊಂಡು ರಾಜಸ್ಥಾನದ ಕರೌಲಿಯಲ್ಲಿರುವ ತನ್ನ ಹಳ್ಳಿಗೆ ತೆರಳಿದ್ದ. ಮುಖ್ಯ ಅಪರಾಧಿ ರಾಮ್ ಸಿಂಗ್ ಯುವತಿಯ ತಾಯಿಯ ಡೆಬಿಟ್ ಕಾರ್ಡ್ ಇಟ್ಟುಕೊಂಡಿದ್ದರೆ, ಅಪ್ರಾಪ್ತ ಅತ್ಯಾಚಾರಿ ಯುವತಿಯ ಬಳಿಯಿದ್ದ ಹಣವನ್ನು ಇಟ್ಟುಕೊಂಡಿದ್ದ. ಮತ್ತೊರ್ವ ಅಪರಾಧಿ ವಿನಯ್ ಶರ್ಮಾ ಯುವಕನ ಶೂ, ಯುವತಿಯ ನೋಕಿಯಾ ಮೊಬೈಲ್ ಫೋನ್ ಹಾಗೂ ಪವನ್ ಗುಪ್ತಾ ಯುವಕನ ಸೊನಾಟಾ ವಾಚ್ ಮತ್ತು 1,000 ರೂ. ಇಟ್ಟುಕೊಂಡಿದ್ದ.
Advertisement
Advertisement
ಸಾಮೂಹಿಕ ಅತ್ಯಾಚಾರದ ಮೂರು ದಿನಗಳ ನಂತರ ಅಂದ್ರೆ 2012ರ ಡಿಸೆಂಬರ್ 19ರಂದು ಮಧ್ಯಾಹ್ನ 3:30 ಕ್ಕೆ ಯುವತಿಯ ಸ್ನೇಹಿತ ತನ್ನ ಹೇಳಿಕೆಯನ್ನು ದಾಖಲಿಸಿದ್ದ. ತನ್ನ ಹೇಳಿಕೆಯಲ್ಲಿ ಯುವಕ, ‘ಅಪರಾಧಿಗಳು ಆತನಿಂದ ಸ್ಯಾಮ್‍ಸಂಗ್ ಸ್ಮಾರ್ಟ್‍ಫೋನ್‍ಗಳು, 1000 ರೂ. ಇದ್ದ ವ್ಯಾಲೆಟ್, ಸಿಟಿಬ್ಯಾಂಕ್‍ನ ಕ್ರೆಡಿಟ್ ಕಾರ್ಡ್, ಐಸಿಐಸಿಐ ಬ್ಯಾಂಕಿನ ಡೆಬಿಟ್ ಕಾರ್ಡ್, ಕಂಪನಿ ಐಡಿ ಕಾರ್ಡ್, ದೆಹಲಿ ಮೆಟ್ರೊದ ಸ್ಮಾರ್ಟ್ ಕಾರ್ಡ್ ಅನ್ನು ಕಿತ್ತುಕೊಂಡಿದ್ದಾರೆ. ಇದರೊಂದಿಗೆ ಚಿನ್ನ ಮತ್ತು ಬೆಳ್ಳಿಯ ಉಂಗುರ, ಬಟ್ಟೆ ಮತ್ತು ಶೂಗಳನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಸ್ನೇಹಿತೆಯ ನೋಕಿಯಾ ಮೊಬೈಲ್ ಮತ್ತು ಪರ್ಸ್ ಅನ್ನು ದುಷ್ಕರ್ಮಿಗಳು ಕಸಿದುಕೊಂಡಿದ್ದಾರೆ’ ಎಂದು ತಿಳಿಸಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿ ಮೊಬೈಲ್ ಫೋನ್ ಟ್ರ್ಯಾಪ್ ಮಾಡಿದ್ದಾಗ ಅಪರಾಧಿಗಳು ಸಿಕ್ಕಿಬಿದ್ದಿದ್ದರು. ಬಳಿಕ ಅಪರಾಧಿಗಳಿಂದ ಯುವತಿ ಹಾಗೂ ಆಕೆಯ ಸ್ನೇಹಿತನಿಂದ ದೋಚಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.