ನವದೆಹಲಿ: ಮುಂಬೈ (Mumbai) ಮೂಲದ ಯುವತಿ ಶ್ರದ್ಧಾ ವಾಕರ್ (Shraddha Walker) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ (Aaftab Ameen Poonawala) ಕೋರ್ಟ್ ಮುಂದೆ ಮೊದಲ ಬಾರಿ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸ್ (Delhi Police) ಕಸ್ಟಡಿ ವಿಸ್ತರಣೆ ವೇಳೆ ಹತ್ಯೆ ಮಾಡಿರುವುದಾಗಿ ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಿದ್ದಾನೆ.
Advertisement
ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾದ ಹಿನ್ನಲೆ ಕಸ್ಟಡಿಗಾಗಿ ಸಾಕೇತ್ ಜಿಲ್ಲಾ ನ್ಯಾಯಲಯದ ಮುಂದೆ ಅಫ್ತಾಬ್ ನನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡ ಅಫ್ತಾಬ್ ಜಗಳದ ಆವೇಶದಲ್ಲಿ ಹತ್ಯೆ ಮಾಡಿದ್ದೇನೆ, ಹತ್ಯೆಯ ಮಾಡಿರುವುದಕ್ಕೆ ಪಶ್ಚಾತ್ತಾಪ ಇದೆ, ಘಟನೆಯನ್ನು ನೆನಪಿಸಿಕೊಳ್ಳಲು ಬೇಸರವಿದೆ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಮಚ್ಚಿನಿಂದ ಹೊಡೆದು ಪತ್ನಿಯ ಕೊಲೆಗೈದ ಪಾಪಿ ಪತಿ!
Advertisement
Advertisement
ಅಫ್ತಾಬ್ ಹೇಳಿಕೆ ಬಳಿಕ ಪೊಲೀಸರು ಕಸ್ಟಡಿ (Police Custody) ವಿಸ್ತರಣೆಗೆ ಮನವಿ ಮಾಡಿದರು. ಅಫ್ತಾಬ್ ಹೇಳಿಕೆ ಆಧರಿಸಿ ತನಿಖೆ ಮಾಡಬೇಕಿದೆ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ತನಿಖೆ ನಡೆಸಬೇಕಿದೆ. ಈ ಹಿನ್ನಲೆ ಅವಧಿ ವಿಸ್ತರಣೆ ಮಾಡಬೇಕು ಎಂದು ದೆಹಲಿ ಪೊಲೀಸರ ಪರ ವಕೀಲರು ಮನವಿ ಮಾಡಿದರು. ಮನವಿಗೆ ಸ್ಪಂಧಿಸಿದ ಕೋರ್ಟ್ ನಾಲ್ಕು ದಿನಕ್ಕೆ ಕಸ್ಟಡಿಯನ್ನು ವಿಸ್ತರಿಸಿ ಆದೇಶ ನೀಡಿದೆ. ಇದನ್ನೂ ಓದಿ: ಮದುವೆ ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿದ – ಇಬ್ಬರ ಸ್ಥಿತಿ ಚಿಂತಾಜನಕ
Advertisement
ಈ ನಡುವೆ ಅಫ್ತಾಬ್‌ನ ಮಂಪರು ಪರೀಕ್ಷೆ ಮಾಡಲು ಪೊಲೀಸರು ತಯಾರಿ ನಡೆಸಿದ್ದು, ಅದಕ್ಕೂ ಮೊದಲು ಫಾಲಿಗ್ರಾಫ್ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಇಂದು ಅಫ್ತಾಬ್ ಫಾಲಿಗ್ರಾಫ್ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಈ ಪರೀಕ್ಷೆಯಲ್ಲಿ ಅಫ್ತಾಬ್ ಹೇಳಿಕೆಗಳಲ್ಲಿರುವ ಸತ್ಯ ಮತ್ತು ಸುಳ್ಳುಗಳನ್ನು ಪರಿಶೀಲಿಸುವ ಪ್ರಯತ್ನ ನಡೆಯಲಿದೆ.
ಪಾಲಿಗ್ರಾಫ್ ಪರೀಕ್ಷೆ ಎಂದರೇನು?
ಸುಳ್ಳು ಪತ್ತೆಕಾರಕ ಪರೀಕ್ಷೆಯನ್ನು ಪಾಲಿಗ್ರಾಫ್ ಪರೀಕ್ಷೆ ಎಂದು ಕರೆಯಲಾಗುತ್ತದೆ. ಇದು ಮಾನವನ ದೇಹದ ಮೇಲೆ ಸೆನ್ಸಾರ್‌ಗಳನ್ನು ಸ್ಥಾಪಿಸಿ, ಅದರ ಸಹಾಯದಿಂದ, ಪ್ರಶ್ನೆಯನ್ನು ಕೇಳಿದ ಸಮಯದಲ್ಲಿ ದೇಹದಲ್ಲಿ ಸಂಭವಿಸುವ ಜೈವಿಕ ಭೌತಿಕ ಬದಲಾವಣೆಗಳನ್ನು ಪತ್ತೆಹಚ್ಚಲು ಸಾಧ್ಯವಿದೆ. ಸರಳವಾಗಿ ಹೇಳುವುದಾದರೆ, ನಿರ್ದಿಷ್ಟ ಘಟನೆಯ ಬಗ್ಗೆ ಅಭ್ಯರ್ಥಿಯನ್ನು ಕೇಳಿದಾಗ, ಒಬ್ಬ ವ್ಯಕ್ತಿಯು ಸುಳ್ಳು ಹೇಳುತ್ತಿದ್ದಾನೆಯೇ ಅಥವಾ ಸತ್ಯ ಹೇಳುತ್ತಾನೆಯೇ ಎಂದು ಪ್ರತಿಪಾದಿಸಲು ಅನುಮತಿಸುವ ದತ್ತಾಂಶವನ್ನು ಪರದೆಯು ಪ್ರದರ್ಶಿಸುತ್ತದೆ. ಈ ಒಟ್ಟಾರೆ ಪ್ರಕ್ರಿಯೆಗೆ ಪಾಲಿಗ್ರಾಫ್ ಪರೀಕ್ಷೆ ಎಂದು ಹೇಳಲಾಗುತ್ತದೆ.