ನವದೆಹಲಿ: 16 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣವೊಂದು ದೆಹಲಿಯ ಶಹಬಾದ್ ಡೈರಿ (Shahbad Dairy Rape Case) ಪ್ರದೇಶದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಈ ಘಟನೆ ಜೂನ್ 27ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಸಿಗದೆ ಮನನೊಂದು ಯುವಕ ಆತ್ಮಹತ್ಯೆ
ಸಂತ್ರಸ್ತೆ ತನ್ನ ಗೆಳೆಯನ ಜೊತೆ ರಾತ್ರಿ ಸಮಯದಲ್ಲಿ ಪಾರ್ಕ್‍ನಲ್ಲಿ ಕುಳಿತಿದ್ದಳು. ಹೀಗೆ ಕುಳಿತುಕೊಂಡು ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಮೂವರು ಎಂಟ್ರಿ ಕೊಡುತ್ತಾರೆ. ಅಲ್ಲದೆ ಕುಳಿತಿರುವ ಇಬ್ಬರ ಜೊತೆ ಮಾತಿಗಿಳಿಯುತ್ತಾರೆ. ಮಾತು ಮಾತಿಗೆ ಬೆಳೆಯುತ್ತಾ ಮೂವರು ಹುಡುಗಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡುತ್ತಾರೆ.
ತಮ್ಮ ಕಾಮತೃಷೆ ತೀರಿಸಿಕೊಂಡ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇತ್ತ ಘಟನೆ ಸಂಬಂಧ ದೆಹಲಿ ಪೊಲೀಸರಿಗೆ (Delhi Police) ಮಾಹಿತಿ ರವಾನೆಯಾಗುತ್ತದೆ. ಸ್ಥಳಕ್ಕೆ ಬಂದ ಪೊಲೀಸರು ಹುಡುಗಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇತ್ತ ಕೃತ್ಯ ಎಸಗಿ ಪರಾರಿಯಾಗಿರುವ ಕಾಮುಕರ ಪತ್ತೆಗೆ ಬಲೆ ಬೀಸಿದ್ದಾರೆ.
ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಎಫ್‍ಐಆರ್ (FIR) ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆಂ-ಮೈ ಎಕ್ಸ್‌ಪ್ರೆಸ್‌ವೇಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ – ದಂಪತಿ ಸಾವು
Web Stories