ನವದೆಹಲಿ: ಕೋವಿಡ್ ಪರಿಣಾಮದಿಂದಾಗಿ ಹಳೆಯ ಘಟನೆಗಳೆಲ್ಲ ಮರೆತು ಹೋಗಿದೆ. ನನಗೆ ಸ್ಮರಣೆ ಶಕ್ತಿಯಿಲ್ಲ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ವಿಚಾರಣೆ ವೇಳೆ ಹೇಳುತ್ತಿದ್ದಾರೆಂದು ವಿಚಾರಣಾ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ (ಇ.ಡಿ) ಮಾಹಿತಿ ನೀಡಿದೆ.
ಎಎಪಿ ಸಚಿವರ ಇ.ಡಿ ಬಂಧನವನ್ನು ಜೂನ್ 13ರ ವರೆಗೆ ವಿಸ್ತರಿಸಲಾಗಿತ್ತು. ಜೈನ್‌ಗೆ ಜಾಮೀನು ನೀಡುವ ಸಂಬಂಧದ ವಿಚಾರಣೆಯನ್ನು ಜೂನ್ 14ಕ್ಕೆ ನಿಗದಿಪಡಿಸಲಾಗಿತ್ತು. ನ್ಯಾಯಾಲಯವು ಮಂಗಳವಾರ ಸತ್ಯೇಂದ್ರ ಜೈನ್ ಅವರ ಜಾಮೀನು ಅರ್ಜಿಯನ್ನು ಆಲಿಸಿತು. ಜೈನ್ ಅವರ ಜಾಮೀನು ಅರ್ಜಿಯ ಆದೇಶವನ್ನು ಜೂನ್ 18ಕ್ಕೆ ನ್ಯಾಯಾಲಯ ಕಾಯ್ದಿರಿಸಿದೆ. ಇದನ್ನೂ ಓದಿ: ಹಿಂಸಾಚಾರ ಪ್ರತಿಭಟನೆ: ಪೊಲೀಸರಿಂದ ಪರಿಸ್ಥಿತಿ ನಿಯಂತ್ರಿಸಲಾಗದಿದ್ರೆ ಕೇಂದ್ರ ಪಡೆ ಕರೆಸಿ – ಹೈಕೋರ್ಟ್
Advertisement
Advertisement
ಕಳೆದ ವಾರ ಇ.ಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ಸತ್ಯೇಂದ್ರ ಜೈನ್ ತುಂಬಾ ನಿಧಾನವಾಗಿ ಬರೆಯುತ್ತಾರೆ. ಅವರು ಒಂದು ಪುಟವನ್ನು ಬರೆಯಲು ಸುಮಾರು ಎರಡು ಗಂಟೆಗಳನ್ನು ತೆಗೆದುಕೊಳ್ಳುತ್ತಾರೆ. ಅವರ ಹೇಳಿಕೆಯನ್ನು ಅವರ ಕೈಬರಹದಲ್ಲಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅದು ನನ್ನ ಹೇಳಿಕೆಯಲ್ಲ ಎಂದು ಅವರು ಹೇಳುತ್ತಾರೆ ಎಂದು ವಾದಿಸಿದ್ದರು.
Advertisement
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 6 ಮತ್ತು 7 ರಂದು ಸಚಿವ ಸತ್ಯೇಂದ್ರ ಜೈನ್ ಅವರ ನಿವಾಸ ಹಾಗೂ ಅವರಿಗೆ ಸಂಬಂಧಿಸಿದಂತೆ ಇತರೆ ಸ್ಥಳಗಳಲ್ಲಿ ಇ.ಡಿ ದಾಳಿ ನಡೆಸಿತ್ತು. ಮೇ 30 ರಂದು ಜೈನ್ ಅವರನ್ನು ಇ.ಡಿ ಬಂಧಿಸಿತ್ತು. ನಂತರ ಮೇ 31 ರಂದು ವಿಚಾರಣಾ ನ್ಯಾಯಾಲಯವು ಜೈನ್ ಅವರನ್ನು ಇ.ಡಿ ಕಸ್ಟಡಿಗೆ ವಹಿಸಿತ್ತು. ಇದನ್ನೂ ಓದಿ: ಅಂದು ಜಯಾ ಜೈಲಿಗೆ, ಇಂದು ಸಂಕಷ್ಟದಲ್ಲಿ ಸೋನಿಯಾ, ರಾಹುಲ್ – ಇದು ಸ್ವಾಮಿ ದೂರಿನ ಕರಾಮತ್ತು