ನವದೆಹಲಿ: ಮೆಟ್ರೋ ಸಂಚಾರವನ್ನು ಟ್ರಾಫಿಕ್ ಫ್ರೀ ಮಾಡಿದೆ ಅನ್ನೋ ಕಾರಣಕ್ಕೆ ಸಾಕಷ್ಟು ಮಂದಿ ಮೆಟ್ರೋ ಸಂಚಾರವನ್ನೇ ಅವಲಂಭಿಸಿದ್ದಾರೆ. ಆದರೆ ದೆಹಲಿಯಲ್ಲಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಸೋಮವಾರ ರಾತ್ರಿ 10 ಗಂಟೆ ವೇಳೆಯಲ್ಲಿ ಮೆಟ್ರೋ ರೈಲು ಬಾಗಿಲು ಮುಚ್ಚದೆ ಸಂಚಾರ ನಡೆಸಿದೆ.
ಹಳದಿ ಲೈನ್ ರೈಲು ಚೌರಿ ಬಜಾರ್ ಸ್ಟೇಷನ್‍ನಿಂದ ಕಾಶ್ಮೀರಿ ಗೇಟ್ ಸ್ಟೇಷನ್ ತನಕ ಓಪನ್ ಡೋರ್‍ನಲ್ಲೇ ಸಂಚಾರ ಮಾಡಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ. ಈ ದೃಶ್ಯವನ್ನು ರೈಲಿನಲ್ಲಿ ಸಂಚಾರ ಮಾಡುತ್ತಿದ್ದ ಪ್ರಯಾಣಿಕರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೆಟ್ರೋ ಸೇಫ್ಟಿ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
Advertisement
Advertisement
ಒಂದು ಡೋರ್‍ನಲ್ಲಿ ತೊಂದರೆಯಾಗಿತ್ತು ಹಾಗೂ ಡಿಎಂಆರ್‍ಸಿ ಸಿಬ್ಬಂದಿ ಡೋರ್ ಹತ್ತಿರ ಕಾವಲಾಗಿ ನಿಂತಿದ್ದರು. ವಿಳಂಬ ಆಗಬಾರದು ಎಂಬ ಕಾರಣ ರೈಲನ್ನು ವಿಶ್ವವಿದ್ಯಾಲಯ ಸ್ಟೇಷನ್‍ಗೆ ಕೊಂಡೊಯ್ಯಲಾಯ್ತು ಎಂದು ಮೆಟ್ರೋ ವಕ್ತಾರರು ತಿಳಿಸಿದ್ದಾರೆ.
Advertisement
ಈ ಹಿಂದೆ 2014ರ ಜುಲೈನಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಇದೇ ಲೈನ್‍ನಲ್ಲಿ ಘಿಟೋರ್ನಿ ಮತ್ತು ಅರ್ಜನ್‍ಘರ್ ನಿಲ್ದಾಣಗಳ ನಡುವೆ ಬಾಗಿಲು ತೆರೆದುಕೊಂಡೇ ಮೆಟ್ರೋ ರೈಲು ಸಂಚರಿಸಿತ್ತು.
Advertisement
ಘಟನೆ ನಡೆದ ನಂತರ ಭದ್ರತಾ ವೈಫಲ್ಯದ ಮೇಲೆ ಟ್ರೈನ್ ಆಪರೇಟರ್‍ನನ್ನು ಅಮಾನತು ಮಾಡಲಾಗಿತ್ತು.
#WATCH: At around 10 pm #Delhi Metro ran with its doors open between Chawri Bazar & Kashmiri Gate stations on the yellow line.(Mobile Video) pic.twitter.com/ciwH0ckyEF
— ANI (@ANI) September 11, 2017