ಭ್ರಷ್ಟಾಚಾರ ಮುಕ್ತ ಸರ್ಕಾರಕ್ಕಾಗಿ ಆಪ್‌ಗೆ ಮತ ಚಲಾಯಿಸಿ: ಕೇಜ್ರಿವಾಲ್ ಮನವಿ

Public TV
1 Min Read
AAP 1

ದೆಹಲಿ: ಭ್ರಷ್ಟಾಚಾರ ಮುಕ್ತ ಸರ್ಕಾರಕ್ಕಾಗಿ ಎಎಪಿಗೆ (AAP) ಮತ ಚಲಾಯಿಸಿ ಎಂದು ದೆಹಲಿ ಮಹಾನಗರ ಪಾಲಿಕೆ ಚುನಾವಣೆ (Delhi MCD Elections) ಹಿನ್ನೆಲೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಜನತೆಗೆ ಮನವಿ ಮಾಡಿಕೊಂಡಿದ್ದಾರೆ.

DELIHI ELECTION

ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಕೇಜ್ರಿವಾಲ್, ಇಂದು ದೆಹಲಿಯನ್ನು ಸ್ವಚ್ಛ ಮತ್ತು ಸುಂದರವಾಗಿಸಲು ಮತದಾನ ನಡೆಯುತ್ತಿದೆ, ಪಾಲಿಕೆಯಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ಮಾಡಲು ಮತದಾನ ನಡೆಯುತ್ತಿದೆ. ಪ್ರಾಮಾಣಿಕ ಮತ್ತು ದುಡಿಯುವ ಸರ್ಕಾರವನ್ನು ರಚಿಸಲು ಇಂದೇ ನಿಮ್ಮ ಮತ ಚಲಾಯಿಸಿ ಎಂದು ಜನತೆಯೊಂದಿಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹಿಂದೂಗಳಿಗೆ ಅವಹೇಳನ ಮಾಡಿದ ಬದ್ರುದ್ದೀನ್ ಅಜ್ಮಲ್ ಕ್ಷಮೆ

ದೆಹಲಿ ಮಹಾನಗರ ಪಾಲಿಕೆಯ 250 ವಾರ್ಡ್‍ಗಳಿಗೆ ಇಂದು ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಮತದಾನವು ಬೆಳಗ್ಗೆ 8ರಿಂದ ಸಂಜೆ 5.30ರವರೆಗೆ ಮತದಾನ ನಡೆಯಲಿದೆ. ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ, ಆಮ್ ಆದ್ಮಿ ಹಾಗೂ ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆಗೆ ಏರ್ಪಟ್ಟಿದೆ.

ದೆಹಲಿಯಲ್ಲಿ ಒಟ್ಟು 1,45,05,358 ಮತದಾರರಿದ್ದಾರೆ. ಈ ಪೈಕಿ 78,93,418 ಪುರುಷರು, 66,10,879 ಮಹಿಳೆಯರು ಮತ್ತು 1,061 ತೃತೀಯಲಿಂಗಿಗಳಿದ್ದಾರೆ. ಚುನಾವಣಾ ಆಯೋಗ 13,638 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾರರ ಗುಣಮಟ್ಟದ ಅನುಭವಕ್ಕಾಗಿ 68 ಮಾದರಿ ಮತ್ತು 68 ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 68 ಮಾದರಿ ಮತಗಟ್ಟೆಗಳಲ್ಲಿ ನಿಲ್ಲಲು ಸ್ಥಳ, ಲೌಂಜ್, ಮತದಾರರಿಗೆ ಸಹಿತಿಂಡಿ, ಟೋಪಿ ವಿತರಣೆ, ಸೆಲ್ಫಿ ಬೂತ್ ಮತ್ತು ಅಂಗವಿಕಲರು, ಹಿರಿಯ ನಾಗರಿಕರಿಗೆ ಸಹಾಯ ಮಾಡಲು ನಾಗರಿಕ ರಕ್ಷಣಾ ಸ್ವಯಂಸೇವಕರು ಸೇರಿದಂತೆ ಹಲವು ಸೌಲಭ್ಯಗಳನ್ನೂ ಒದಗಿಸಲಾಗಿದೆ. ಇದನ್ನೂ ಓದಿ: ಬೆತ್ತನಗೆರೆ ಶಂಕರನ ರಾಜಕೀಯ ಎಂಟ್ರಿಗೆ ಖಾಕಿ ಬ್ರೇಕ್!

ರಾಜಧಾನಿಯಲ್ಲಿ ನಗರ ಸ್ಥಳೀಯ ಸಂಸ್ಥೆಯ ಚುಕ್ಕಾಣಿ ಹಿಡಿಯಲು ಈಗಾಗಲೇ ಘಾಟಾನುಘಟಿ ನಾಯಕರು ಪ್ರಚಾರ ನಡೆಸಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಡಿಸೆಂಬರ್ 7 ರಂದು ಮತ ಎಣಿಕೆ ನಡೆಯಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *