ನವದೆಹಲಿ: ವ್ಯಕ್ತಿಯೊಬ್ಬನ ಹತ್ಯೆ ಮಾಡಿ ದೇಹವನ್ನು 8 ಭಾಗ ಮಾಡಿದ್ದಲ್ಲದೇ ಅದರ ವೀಡಿಯೋ (Video) ಮಾಡಿ ಪಾಕಿಸ್ತಾನಕ್ಕೆ (Pakistan) ಕಳುಹಿಸಿರುವ ಭೀಕರ ಕೃತ್ಯ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು (Delhi Police) ಇಬ್ಬರು ಶಂಕಿತ ಉಗ್ರರನ್ನು (Terrorists) ಬಂಧಿಸಿದ್ದಾರೆ. ವ್ಯಕ್ತಿಯನ್ನು ಕಳೆದ ತಿಂಗಳು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಆತನ ಶಿರಚ್ಛೇದ ಮಾಡಿ, 8 ಭಾಗಗಳನ್ನಾಗಿ ಮಾಡಲಾಗಿದೆ. ಹತ್ಯೆಯಾದ ವ್ಯಕ್ತಿಯ ಪತ್ತೆ ಇನ್ನೂ ಸಿಗದೇ ಹೋಗಿದ್ದು, ಆತನ ವಯಸ್ಸು 21 ಎಂದು ತಿಳಿದುಬಂದಿದೆ. ಆತನ ಕೈಯಲ್ಲಿ ತ್ರಿಶೂಲದ ಹಚ್ಚೆಯೂ ಕಂಡುಬಂದಿದೆ. ಮೃತದೇಹದ ಕೆಲವು ಭಾಗಗಳು ಇನ್ನೂ ನಾಪತ್ತೆಯಾಗಿದ್ದು, ಅದರ ಹುಡುಕಾಟದಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಿನ್ನ ಬ್ಯಾನರ್ ಇಲ್ಯಾಕೆ..?- ವಿಜಯನಗರ ವಿಧಾನಸಭೆ ಕ್ಷೇತ್ರದ ಕೈ ಆಕಾಂಕ್ಷಿಗಳ ಗಲಾಟೆ
Advertisement
Advertisement
ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಾಖಂಡ ಮೂಲದ ಜಗಜಿತ್ ಸಿಂಗ್(29) ಹಾಗೂ ಜಹಾಂಗೀರ್‌ಪುರಿಯ ನೌಶಾದ್(56) ಬಂಧಿತ ಆರೋಪಿಗಳು. ಕೊಲೆಗಡುಕರು ಮೃತದೇಹದ 37 ಸೆಕೆಂಡ್‌ನ ವೀಡಿಯೋ ಮಾಡಿ ಪಾಕಿಸ್ತಾನಕ್ಕೆ ಕಳುಹಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
Advertisement
ವಿಚಾರಣೆಯ ಸಮಯದಲ್ಲಿ ಆರೋಪಿಗಳು ಕೊಲೆಯಾದ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದು, ಬಳಿಕ ಕೊಲೆ ಮಾಡಿದ್ದಾಗಿ ತಿಳಿಸಿದ್ದಾರೆ. ಆತ ಮಾದಕ ವ್ಯಸನಿಯಾಗಿದ್ದರಿಂದ ಸುಲಭವಾಗಿ ಆತನನ್ನು ಕೊಲೆ ಮಾಡಲು ಸಾಧ್ಯವಾಯಿತು ಎಂದಿದ್ದಾರೆ. ಆದರೆ ಪೊಲೀಸರಿಗೆ ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಪತ್ತೆಯಾಗಿರುವ ಮೃತದೇಹದ ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: Nepal Plane Crashː ನಾಲ್ವರು ಭಾರತೀಯರು ಸೇರಿ ಮೃತರ ಸಂಖ್ಯೆ 68ಕ್ಕೆ ಏರಿಕೆ, ಇಂದು ರಾಷ್ಟ್ರೀಯ ಶೋಕಾಚರಣೆ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k