ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಮಹಿಳೆ ಫೋಟೋಗಳನ್ನು ಅಸಭ್ಯವಾಗಿ ಬಳಸಿಕೊಳ್ಳುತ್ತಿದ್ದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಆರೋಪಿಯನ್ನು ಜಗತ್ ಪುರ ಪುಸ್ತಾ ನಿವಾಸಿ ಹಿತೇನ್ ಎಂದು ಗುರುತಿಸಲಾಗಿದೆ. 21 ವರ್ಷದ ಹಿತೇನ್ ಬೇರೆ ಯಾರು ಅಲ್ಲ ಮಹಿಳೆಯ ಸೋದರ ಸಂಬಂಧಿಯಾಗಿದ್ದು, ವೈಯಕ್ತಿಕ ವಿವಾದದ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ನನಗೆ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆ ತನಿಖೆ ಮಾಡಿದ ಪೊಲೀಸರು ಹಿತೇನ್ ನನ್ನು ಬಂಧಿಸಿದರು. ಇದನ್ನೂ ಓದಿ: ಅಪ್ಪು ಇಷ್ಟೆಲ್ಲ ಸಮಾಜಕ್ಕೆ ದಾನ ಮಾಡಿದ್ದಾನೆ ಎಂದುಕೊಂಡಿರಲಿಲ್ಲ: ಗೋವಿಂದರಾಜು
Advertisement
Advertisement
ಹಿತೇನ್ 6 ತಿಂಗಳಿಂದ ಇನ್‍ಸ್ಟಾಗ್ರಾಮ್ ನಲ್ಲಿ ನನಗೆ ಕಿರುಕುಳ ನೀಡುತ್ತಿದ್ದು, ನನ್ನ ಫೋಟೋಗಳನ್ನು ಡೌನ್‍ಲೋಡ್ ಮಾಡಿಕೊಂಡು ಅಸಭ್ಯ ಛಾಯಾಚಿತ್ರಗಳೊಂದಿಗೆ ಮಾರ್ಫಿಂಗ್ ಮಾಡಿದ್ದಾನೆ. ನನ್ನ ಮಾನಹಾನಿ ಮಾಡಲು ಆ ಫೋಟೋಗಳನ್ನು ಬಳಸಿಕೊಳ್ಳುವುದಾಗಿ ಹೆದರಿಸಿಸುತ್ತಿದ್ದನು. ಅದು ಅಲ್ಲದೇ ಆ ಫೋಟೋಗಳನ್ನು ನನ್ನ ಗಂಡನ ಸ್ನೇಹಿತರಿಗೂ ಕಳುಹಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Advertisement
Advertisement
ಉಪ ಪೊಲೀಸ್ ಆಯುಕ್ತ ಸಂಜಯ್ ಕುಮಾರ್ ಈ ಕುರಿತು ಮಾತನಾಡಿದ್ದು, ಮಹಿಳೆ ದೂರು ನೀಡಿದ ಮೇಲೆ ಇನ್‍ಸ್ಟಾಗ್ರಾಮ್ ಖಾತೆಯಿಂದ ಹಿತೇನ್ ವಿಳಾಸವನ್ನು ಪರೀಶಿಲಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ. ನಂತರ ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹೆಣ್ಣು ಮಗು ಮಾರಾಟ ಮಾಡಿದ್ರಾ ಭಿಕ್ಷುಕ ದಂಪತಿ?
ಹಿತೇನ್ ಕಿರುಕುಳದಿಂದ ಮಹಿಳೆ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ಆದರೆ ತನಿಖೆ ನಂತರ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ಹೇಳಿದರು.