ನವದೆಹಲಿ: ಪಿಸ್ತೂಲ್ ಲೋಡ್ ಮಾಡೋದನ್ನು ಕಲಿಯುವಾಗ ನಗುತ್ತಲೇ ಎದೆಗೆ ಶೂಟ್ ಮಾಡಿಕೊಂಡಿರುವ ಘಟನೆ ನವದೆಹಲಿಯ (Newdelhi) ದಲ್ಲುಪುರದಲ್ಲಿ ನಡೆದಿದೆ.
28 ವರ್ಷದ ಪವನ್ ಮೃತ ಯುವಕ. ಪಿಸ್ತೂಲ್ ಲೋಡ್ ಮಾಡುವುದನ್ನು ಕಲಿಯುವಾಗ ಎದೆಗೆ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ʻಸರ್ಸೆ ಸರ್ಸೆ ಸೆರಗ ಸರ್ಸೆʼ ಹಾಡಿನ ವಿವಾದ – ಮಹಿಳಾ ಆಯೋಗದಿಂದ ಫಿಲ್ಮ್ ಚೇಂಬರ್‌ಗೆ ಪತ್ರ
ಮೃತನ ಸ್ನೇಹಿತ ಪವನ್‌ಗೆ ಗನ್ ಲೋಡ್ ಮಾಡುವುದನ್ನು ಹೇಳಿಕೊಡುತ್ತಿದ್ದ. ಬಳಿಕ ಅದನ್ನು ವಿಡಿಯೋ ಮಾಡುತ್ತಿದ್ದ. ಈ ವೇಳೆ ಮೃತ ಪವನ್ ಪಿಸ್ತೂಲ್‌ನ್ನು ಎದೆ ಮೇಲೆ ಇಟ್ಟುಕೊಂಡಿದ್ದ. ಆಗ ಸ್ನೇಹಿತ ಟ್ರಿಗರ್‌ನ್ನು ಒತ್ತಬೇಡ ಎಂದು ಹೇಳಿದರೂ ಕೂಡ ಪವನ್ ಟ್ರಿಗರ್ ಒತ್ತಿದ್ದು, ಪರಿಣಾಮ ಗುಂಡು ಎದೆಯೊಳಗೆ ಹೊಕ್ಕು ನೆಲದ ಮೇಲೆ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪವನ್ ಸಾವನ್ನಪ್ಪಿದ್ದಾನೆ.
ಇನ್ನೂ ಪೊಲೀಸರ ಮಾಹಿತಿ ಪ್ರಕಾರ, ಬಳಸಿದ ಪಿಸ್ತೂಲ್‌ಗೆ ಪರವಾನಗಿ ಪಡೆಯಲಾಗಿದ್ದು, ಪವನ್ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಗನ್ ಎಂದು ತಿಳಿಯಲಾಗಿದೆ. ಸದ್ಯ ಪಿಸ್ತೂಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ:ಕಾರವಾರದಲ್ಲಿ ಕಲ್ವರಿ ವರ್ಗದ ಸಬ್‌ಮೆರಿನ್ ಘಟಕ ಉದ್ಘಾಟನೆ – ವಿಶೇಷತೆ ಏನು?

