ನವದೆಹಲಿ: ಮದುವೆಗೆ ಆಮಂತ್ರಣ (Wedding Invitation) ಹಂಚಲು ತೆರಳಿದ್ದ ವರನ (Groom) ಕಾರಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಕಾರು ಸುಟ್ಟು ಕರಕಲಾಗಿ, ವರ ಸಾವನ್ನಪ್ಪಿದ ಘಟನೆ ಘಾಜಿಪುರದ (Ghazipur) ಬಾಬಾ ಬ್ಯಾಂಕ್ವೆಟ್ ಹಾಲ್ ಬಳಿ ನಡೆದಿದೆ.
ಗ್ರೇಟರ್ ನೋಯ್ಡಾದ ನಿವಾಸಿ ಅನಿಲ್ ಮೃತ ವರ. ಅನಿಲ್ ಶನಿವಾರ ಮಧ್ಯಾಹ್ನ ಆಮಂತ್ರಣ ಪತ್ರಿಕೆ ಹಂಚಲು ಹೊರಗೆ ಹೋಗಿದ್ದ ಸಂದರ್ಭ ಘಟನೆ ಸಂಭವಿಸಿದೆ. ಸಂಜೆಯಾದರೂ ವಾಪಸ್ ಬಾರದ್ದನ್ನು ಕಂಡು ಕರೆ ಮಾಡಿದೆವು. ಆದರೆ ಅವರ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ರಾತ್ರಿ 11:30ರ ಸುಮಾರಿಗೆ ಅನಿಲ್‌ಗೆ ಅಪಘಾತವಾಗಿದ್ದು, ಆಸ್ಪತ್ರೆಯಲ್ಲಿದ್ದಾರೆ ಎಂದು ಪೊಲೀಸರು ಕರೆ ಮಾಡಿದ್ದರು ಎಂದು ಅನಿಲ್ ಅಣ್ಣ ಸುಮಿತ್ ತಿಳಿಸಿದ್ದಾರೆ. ಇದನ್ನೂ ಓದಿ: 2 ಗ್ಯಾಸ್ ಸಿಲಿಂಡರ್ ಸ್ಫೋಟ – ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ, ಧಗಧಗಿಸಿದ ಜ್ವಾಲೆ
Advertisement
ಈ ಕುರಿತು ಅನಿಲ್ ಸೋದರ ಮಾವ ಯೋಗೇಶ್ ಮಾತನಾಡಿ, ನಾನು ಮತ್ತು ಅನಿಲ್ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ಅನಿಲ್ ಫೆಬ್ರವರಿ 14 ರಂದು ನನ್ನ ಸಹೋದರಿಯನ್ನು ಮದುವೆಯಾಗಬೇಕಿತ್ತು. ಶನಿವಾರ ರಾತ್ರಿ ಅವರ ಸಾವಿನ ಬಗ್ಗೆ ನಮಗೆ ತಿಳಿಯಿತು. ಕಾರಿಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದು ನಮಗೆ ಇನ್ನೂ ತಿಳಿದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ಪರಿಹಾರ ವಿತರಣೆ
Advertisement
Advertisement
ಬೆಂಕಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಅನಿಲ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಫೆ.10, 11, 12ರಂದು ಟಿ.ನರಸೀಪುರದಲ್ಲಿ ಕುಂಭಮೇಳ: ಹೆಚ್‌ಸಿ ಮಹದೇವಪ್ಪ
Advertisement