ಡೆಹರಾಡೂನ್: ದೆಹಲಿ ಮೂಲದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ 9 ಜನರನ್ನು ಗುದ್ದಿಕೊಂಡು ಹೋಗಿರುವ ಘಟನೆ ನೈನಿತಾಲ್ನಲ್ಲಿ ನಡೆದಿದೆ.
ದೆಹಲಿಯ ನಿವಾಸಿ ಅಮಿತ್ ಬಹುಗಣ (38) ಆರೋಪಿ. ಅಮಿತ್ ಬಹುಗುಣ ವೇಗವಾಗಿ ಬಂದು 9 ಜನರಿಗೆ ಗುದ್ದಿಕೊಂಡು ಹೋಗಿದ್ದು, ಸ್ಥಳದಲ್ಲಿ ನಿಲ್ಲಿಸಿದ್ದ 6 ಬೈಕ್ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಗಾಯಗೊಂಡಿರುವ ಜನರನ್ನು ಚಿಕಿತ್ಸೆಗಾಗಿ ಬಿಡಿ ಪಾಂಡೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಇನ್ಸ್ಪೆಕ್ಟರ್ ಧರಂವೀರ್ ಸೋಲಂಕಿ ತಿಳಿಸಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ- 27 ಮಂದಿ ಗಂಭೀರ
Advertisement
Advertisement
ಘಟನೆಯ ಬಳಿಕ ಆರೋಪಿ ಪರಾರಿಯಾಗಲು ಮುಂದಾಗಿದ್ದು, ಸ್ಥಳೀಯ ಜನರು ಅವನನ್ನು ಹಿಡಿದಿದ್ದಾರೆ. ಬಳಿಕ ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದ್ದು, ಪರೀಕ್ಷೆಯಲ್ಲಿ ಕಾರು ಚಾಲಕ ಕುಡಿದಿರುವುದಾಗಿ ದೃಢಪಟ್ಟಿದೆ. ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದೆ.
Advertisement
Advertisement
ಈ ಸಂಬಂಧ ಆರೋಪಿಯ ಮೇಲೆ ದುಡುಕಿನ ಮತ್ತು ನಿರ್ಲಕ್ಷ್ಯದ ಚಾಲನೆ, ಆರೋಪದ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಸೋಲಂಕಿ ಹೇಳಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಲಸಿಕೆ ಪಡೆಯುವಂತೆ ಜನರಿಗೆ ಸಿಎಂ ಸ್ಟಾಲಿನ್ ಒತ್ತಾಯ