ನವದೆಹಲಿ: ವಿವಾಹ ವಾರ್ಷಿಕೋತ್ಸವದಂದೇ (Wedding Anniversary) ಅಪ್ಪ-ಅಮ್ಮ ಹಾಗೂ ಸಹೋದರಿ ಸಾವನ್ನಪ್ಪಿರುವ ಘಟನೆ ದಕ್ಷಿಣ ದೆಹಲಿಯಲ್ಲಿ (South Delhi) ಬುಧವಾರ ನಡೆದಿದೆ.
ರಾಜೇಶ್ ಕುಮಾರ್ (51), ಪತ್ನಿ ಕೋಮಲ್ (46) ಮತ್ತು ಪುತ್ರಿ ಕವಿತಾ (23) ಮೃತರು. ಅಪ್ಪ-ಅಮ್ಮನಿಗೆ ವಾರ್ಷಿಕೋತ್ಸವದ ಶುಭಾಶಯ ಹೇಳಿ ವಾಕಿಂಗ್‌ಗೆ ಹೊರಟಿದ್ದೆ. ಮನೆಗೆ ವಾಪಸ್ ಬರುವಷ್ಟರಲ್ಲಿ ಮೂವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಅವರ ಮಗ ಅರ್ಜುನ್ ತಿಳಿಸಿದ್ದಾನೆ. ದೇಹದ ಮೇಲೆ ಇರಿತದ ಗಾಯದ ಗುರುತುಗಳು ಕಂಡುಬಂದಿವೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ತಟಸ್ಥ ನಿಲುವಿನ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಕುಟುಂಬದ ಮೇಲೆ ಆಕ್ರೋಶ ಇದೆ: ಯತ್ನಾಳ್
Advertisement
Advertisement
ಪೊಲೀಸರ ಮಾಹಿತಿ ಪ್ರಕಾರ, ಮನೆಯಲ್ಲಿ ದರೋಡೆ ನಡೆದಿಲ್ಲ, ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ. ದೊಡ್ಡ ಸದ್ದು ಕೇಳಿಸಿದ ತಕ್ಷಣ ನೆರೆಯವರು ಮನೆಗೆ ಧಾವಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ವಿಜಯೇಂದ್ರ ಗುಂಪುಗಾರಿಕೆ ಮಾಡುತ್ತಿದ್ದಾರೆ, ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿದ್ದೇನೆ: ಯತ್ನಾಳ್ ಚಾರ್ಜ್
Advertisement
Advertisement
ಕೊಲೆಯಾಗಿರುವ ಬಗ್ಗೆ ಸಂಶಯ:
ಇಂದು ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವ ಇತ್ತು. ಅವರಿಗೆ ಶುಭಹಾರೈಸಿ ನಾನು ಬೆಳಗ್ಗೆ ವಾಕಿಂಗ್‌ಗೆ ಹೋಗಿದ್ದೆ, ಬಂದು ನೋಡಿದಾಗ ಶವವಾಗಿ ಬಿದ್ದಿದ್ದರು. ಮೂವರ ಮೈಮೇಲೆ ಇರಿತದ ಗುರುತುಗಳಿದ್ದವು, ಎಲ್ಲೆಡೆ ರಕ್ತ ಚಿಮ್ಮಿತ್ತು ಎಂದು ಮಗ ಅರ್ಜುನ್ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಅಪರಾಧ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ ತಂಡಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ದೇವೇಂದ್ರ ಫಡ್ನವೀಸ್ `ಮಹಾ’ ಸಿಎಂ – ಫಡ್ನವಿಸ್ ರಾಜಕೀಯ ಪಥ ಹೇಗಿದೆ?