10 ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ತಂದೆ!

Public TV
2 Min Read
police 2

ನವದೆಹಲಿ: ವ್ಯಕ್ತಿಯೊಬ್ಬನು ತನ್ನ ಮಗಳನ್ನು ಕೊಲೆ ಮಾಡಿದ್ದಲ್ಲದೇ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ವಾಯುವ್ಯ ದೆಹಲಿಯ ಮೆಟ್ರೋ ವಿಹಾರ್ ಹಂತ-2 ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುರೇಶ್ (32) ಮಗಳನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತಂದೆಯು ವಾಯುವ್ಯ ದೆಹಲಿಯಲ್ಲಿರುವ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆತನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಅದೇ ಕೋಣೆಯಲ್ಲಿ ಅವರ 10 ವರ್ಷದ ಮಗಳ ಶವವೂ ಕೂಡ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಾಯಿ ಬೊಗಳಿದ್ದಕ್ಕೆ ವೃದ್ಧನ ಹತ್ಯೆಗೈದ ಹುಡುಗ

mortuary

ಮಂಗಳವಾರ ಮಧ್ಯಾಹ್ನ, ತನ್ನ ಚಿಕ್ಕಪ್ಪ ಮತ್ತು ಚಿಕ್ಕಪ್ಪನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದಾಗ, ಅವರು ಹಾಸಿಗೆಯ ಮೇಲೆ ಸುರೇಶ್ ಶವವಾಗಿ ಪತ್ತೆಯಾದರು. ವ್ಯಕ್ತಿಯ ಶವವನ್ನು ಕುಟುಂಬ ಸದಸ್ಯರು ಆಗಲೇ ಕೆಳಗೆ ತಂದಿದ್ದೇವೆ ಅಂತ ಹೇಳಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಅದೇ ಹಾಸಿಗೆಯ ಮೇಲೆ ಅವರ 10 ವರ್ಷದ ಮಗಳು ಕೂಡ ಸತ್ತು ಬಿದ್ದಿದ್ದಳು. ಆಕೆಗೆ ಯಾವುದೇ ಗಾಯದ ಗುರುತುಗಳು ಅಥವಾ ಕತ್ತು ಹಿಸುಕಿದ ಗುರುತು ಇರಲಿಲ್ಲ. ಆಕೆ ತನ್ನ ತಂದೆಗಿಂತ ಮೊದಲೇ ಸಾವನ್ನಪ್ಪಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಕಟ್ಟಡದ ಎರಡನೇ ಮಹಡಿಯಿಂದ ಬಾಲಕಿ ಬಿದ್ದಿದ್ದು, ಅವಳಿಗೆ ಚಿಕಿತ್ಸೆ ಮುಂದುವರಿದಿತ್ತು. ಆಕೆ ಕೂಡ ‘ಫಿಟ್ಸ್’ ನಿಂದ ಬಳಲುತ್ತಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರಾಥಮಿಕ ತನಿಖೆಯ ನಂತರ ತಿಳಿಸಿದ್ದಾರೆ. ಇದನ್ನೂ ಓದಿ: ರೈಲು ಬರುವಾಗ ಹಳಿಯಲ್ಲಿದ್ದ ಯುವಕನನ್ನು ಜಿಗಿದು ರಕ್ಷಿಸಿದ ಪೊಲೀಸ್ ಪೇದೆ

Police Jeep 1

ನರಸಂಬಂಧಿ ಸಮಸ್ಯೆಗಳಿಂದಾಗಿ ಸುರೇಶ್ ತನ್ನ ಕೆಲಸ ಬಿಟ್ಟು ಅವಳ ಆರೈಕೆಗಾಗಿ ಮನೆಯಲ್ಲೇ ಇರಬೇಕಾಯಿತು. ಅವರ ಪತ್ನಿ ರಾಮ್ ದೇವಿ ತರಕಾರಿ ಮಾರುಕಟ್ಟೆಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ಮೃತನು ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆಯೇ ಮಗಳನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರ ಮೃತದೇಹಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *